ಎಟಿಎಂನಲ್ಲಿ ಮಹಿಳೆಗೆ ಮರ್ಮಾಂಗ ತೋರಿಸಿದ ಕಾಮುಕ; ಮಹಿಳೆ ಮಾಡಿದ್ದೇನು ಗೊತ್ತೇ?

0
691

ನ್ಯೂಸ್ ಕನ್ನಡ ವರದಿ (14-5-2019) ಮುಂಬೈ: ರಿಕ್ಷಾಕ್ಕೆ ನೀಡಲು ಹಣವನ್ನು ಎಟಿಎಂನಿಂದ ವಿದ್’ಡ್ರಾ ಮಾಡಿಕೊಳ್ಳುತ್ತಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ಹೀನ ಘಟನೆ ನಡೆದಿದ್ದು, ಮಹಿಳೆಯು ಆತನಿಗೆ ತಕ್ಕ ಪಾಠವನ್ನೇ ಕಲಿಸಿದ್ದಾಳೆ.

ಮುಂಬೈನ ಕೋಪ್ರಿ ನಿವಾಸಿ ಸಂದೀಪ್ ಕುಂಭಕರ್ಣ (38) ಮರ್ಮಾಂಗ ತೋರಿಸಿದ ವ್ಯಕ್ತಿ. ಹರಿ ಓಂ ನಗರದ ರಸ್ತೆಯಲ್ಲಿನ ಸ್ಟೇಟ್ ಬ್ಯಾಂಕ್ ಎಟಿಎಂನಲ್ಲಿ ಸೋಮವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹರಿ ಓಂ ನಗರದ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಹಣ ಪಡೆಯುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಸಂದೀಪ್ ಕೂಡ ಎಟಿಎಂನಿಂದ ಹಣ ಪಡೆಯುವ ನೆಪದಲ್ಲಿ ಮಹಿಳೆಗೆ ಮರ್ಮಾಂಗ ತೋರಿಸಿದ್ದಾನೆ. ಈ ದೃಶ್ಯವನ್ನು ಮಹಿಳೆಯು ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾಳೆ. ಇದರಿಂದ ಮುಜುಗುರಕ್ಕೆ ಒಳಗಾದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.

ಎಟಿಎಂನಿಂದ ಹೊರ ಬಂದ ಮಹಿಳೆ ಅಲ್ಲೇ ಸಮೀಪದ ಗಸ್ತಿನ ವ್ಯಾನಿನಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ವಿಡಿಯೋ ತೋರಿಸಿದ್ದಾಳೆ. ಕೂಡಲೇ ಜಾಗೃತರಾದ ಪೊಲೀಸರು ಆರೋಪಿಯನ್ನು ಒಂದು ಕಿ.ಮೀ ಬೆನ್ನಟ್ಟಿ ಬಂಧಿಸಿದ್ದಾರೆ. ಈ ಘಟನೆಯ ಕುರಿತು ಮಹಿಳೆ ಟ್ವೀಟ್ ಕೂಡಾ ಮಾಡಿದ್ದಾರೆ.

LEAVE A REPLY

Please enter your comment!
Please enter your name here