ಏಶ್ಯಾಕಪ್ ಟ್ರೋಫಿಯನ್ನು ಕಲೀಲ್ ಅಹ್ಮದ್ ಗೆ ನೀಡಿದ ಧೋನಿ: ಕಾರಣವೇನು?

0
1758

ನ್ಯೂಸ್ ಕನ್ನಡ ವರದಿ: (09.10.18) ರೋಚಕ ಪಂದ್ಯಾಟದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಭಾರತ ತಂಡವು ಏಶ್ಯಾ ಕಪ್ ಫೈನಲ್ ಪಂದ್ಯಾಟದಲ್ಲಿ ಜಯಭೇರಿ ಬಾರಿಸಿತ್ತು. ಭಾರತ ಮತ್ತು ಪಾಕಿಸ್ತಾನ ತಂಡಗಳ ಹಣಾಹಣಿಯನ್ನು ಫೈನಲ್ ನಲ್ಲಿ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಬಾಂಗ್ಲಾ ದೇಶ ವಿರುದ್ಧದ ಪಂದ್ಯಾಟದಲ್ಲಿ ನಿರಾಸೆ ಮೂಡಲಿಲ್ಲ. ಬಾಂಗ್ಲಾದೇಶ ಮತ್ತು ಭಾರತ ತಂಡಗಳು ಉತ್ತಮವಾಗಿ ಪೈಪೋಟಿ ನೀಡಿ ಕೊನೆಗೂ ಭಾರತ ತಂಡ ಜಯಶಾಲಿಯಾಗಿತ್ತು. ಈ ಪಂದ್ಯಾಟದಲ್ಲಿ ವಿರಾಟ್ ಕೊಹ್ಲಿ ಭಾಗವಹಿಸದ ಕಾರಣ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಿದ್ದರು.

ಭಾರತ ತಂಡವು ಫೈನಲ್ ಪಂದ್ಯಾಟದಲ್ಲಿ ಜಯಗಳಿಸಿದ ಬಳಿಕ ಏಶ್ಯಾ ಕಪ್ ನಲ್ಲಿ ಪ್ರಥಮವಾಗಿ ಆಡಿದ ಖಲೀಲ್ ಅಹ್ಮದ್ ರನ್ನು ಟ್ರೋಫಿ ಎತ್ತಿ ಹಿಡಿಯುವಂತೆ ಧೋನಿ ಸೂಚಿಸಿದ್ದು ಗಮನಾರ್ಹವಾಗಿತ್ತು. ಧೋನಿ ನಾಯಕನ ಸ್ಥಾನದಲ್ಲಿಲ್ಲದಿದ್ದರೂ ಅವರ ಮಾತಿಗೆ ಗೌರವ ಸೂಚಿಸಿ ಟ್ರೋಫಿಯನ್ನು ರೋಹಿತ್ ಶರ್ಮಾ ಖಲೀಲ್ ಅಹ್ಮದ್ ಗೆ ನಿಡಿದರು. ಇನ್ನು ಖಲೀಲ್ ಅಹ್ಮದ್ ತಂಡದ ಅತೀ ಕಿರಿಯ ಆಟಗಾರ ಹಾಗೂ ಅವರಿಗೆ ಇದು ಪ್ರಥಮ ಅಂತಾರಾಷ್ಟ್ರೀಯ ಸರಣಿಯಾದ ಕಾರಣ ಧೋನಿ ಟ್ರೋಫಿ ಎತ್ತಿ ಹಿಡಿಯಲು ಸೂಚಿಸಿದ್ದರು. ಯುವ ಆಟಗಾರರನ್ನು ಪ್ರೋತ್ಸಾಹಿಸುವ ಮಹೇಂದ್ರ ಸಿಂಗ್ ಧೋನಿ ನಡತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here