Tuesday July 11 2017

Follow on us:

Contact Us

ಸಮಯ ಮೀರಿದೆ, ನೈಜ ಜಿಹಾದ್ ಗೆ ಸಿದ್ಧನಾಗು..!!

ಆ ದಿನ ಮುಸ್ತಫಾ ಓಡೋಡಿ ಬಂದು ಏದುಸಿರು ಬಿಡುತ್ತಾ ಗುರುಗಳ ಕಾಲಡಿಗೆ ಬಿದ್ದ. ಗುರು ಅಕ್ಬರುದ್ದೀನ್ ಅವನನ್ನೇ ದಿಟ್ಟಿಸಿ ನೋಡುತ್ತಾ “ಏನಾಯ್ತು ಮುಸ್ತಫಾ? ಯಾಕೆ ಹೀಗೆ ಓಡೋಡಿ ಬಂದೆ? ಏನಾದರೂ ಯಡವಟ್ಟು ಮಾಡಿದ್ದೀಯಾ? ಎಂದು ಪ್ರಶ್ನಿಸಿದಾಗ ಮುಸ್ತಫಾ ಹಣೆಯ ಮೇಲಿದ್ದ ಬೆವರನ್ನು, ತಾನು ಧರಿಸಿದ ಅಂಗಿಯಿಂದ ಮುಖ ಒರೆಸಿಕೊಂಡನು ಮತ್ತು ಒಂದೇ ಸಮನೆ ಏದುಸಿರು ಬಿಡುತ್ತಲೇ ಇದ್ದನು. ಮಾತಾನಾಡುವ ಶಕ್ತಿ ಕುಂದಿತ್ತು. ಗುರು ಅಕ್ಬರುದ್ದೀನ್ ತನ್ನ ಪಕ್ಕದಲ್ಲಿದ್ದ ಮಣ್ಣಿನ ಮಡಿಕೆಯಿಂದ ಒಂದು ಲೋಟ ತಣ್ಣಗಿನ ನೀರನ್ನು ಮುಸ್ತಫಾನ ಕೈಗಿಟ್ಟಾಗ ಒಂದೇ ಗುಟುಕಂತೆ ಮುಸ್ತಫಾ ನೀರನ್ನು ಕುಡಿದು ಗುರುವಿಗೆ ಧನ್ಯವಾದ ಅರ್ಪಿಸಿದ..

ಗುರು ಅವನತ್ತ ಮತ್ತೆ ಮತ್ತೆ ನೋಟವಿಟ್ಟು “ಮುಸ್ತಫಾ ನೀನು ಈ ರೀತಿ ಆತಂಕಕ್ಕೆ ಒಳಗಾಗಿದ್ದನ್ನು ನಾನು ಯಾವತ್ತು ನೋಡಲೇ ಇಲ್ಲ. ಯಾಕೆ ಏನಾಯ್ತು ನಿನಗೆ?‌ ವಿಚಾರವನ್ನು ಹೇಳು ಎಂದಾಗ ಮುಸ್ತಫಾ ಗುರುಗಳ ಹತ್ತಿರ ಕುಳಿತು “ಗುರುಗಳೇ…, ನಾನಿವತ್ತು ಒಂದು ಕಡೆ ಮರದಡಿಯಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದೆ. ನನಗೊಂದು ಕೆಟ್ಟ ಕನಸು ಬಿತ್ತು. ಆ ಕನಸು ನೋಡಿ ಭಯಭೀತನಾಗಿದ್ದೇನೆ. ಕನಸಲ್ಲಿ ನನ್ನ ಮರಣವಾಗಿತ್ತು. ನನ್ನನ್ನು ಕಬರಸ್ಥಾನದ ಒಳಗೆ ಸೇರಿಸಲಾಗಿತ್ತು. ಆ ನಂತರ ನಡೆದ ಘಟನೆಗಳನ್ನು ನೆನೆದುಕೊಂಡಾಗ ನಿಜಕ್ಕೂ ಭಯವಾಗುತ್ತಿದೆ ಗುರುಗಳೇ. ನಾನು ಹುಟ್ಟಿದ ದಿನದಿಂದ ಸಾಯುವವರೆಗೂ ಮಾಡಿದ ಪ್ರತಿಯೊಂದು ಸರಿತಪ್ಪುಗಳ ಪಟ್ಟಿಯನ್ನು ಹಿಡಿದು ಇಬ್ಬರು ವಿಚಿತ್ರವಾದ ಮನುಷ್ಯರು ನನ್ನ ಮುಂದೆ ಬಂದಿದ್ದರು. ನಾನು ಮಾಡಿದ್ದು ಎರಡು ಶೇಕಡದಷ್ಟು ಒಳಿತಾದರೆ ತೊಂಭತ್ತೆಂಟು ಶೇಕಡ ಕೆಡುಕುಗಳು. ಅದರ ಪ್ರತಿಫಲವಾಗಿ ಅಲ್ಲಿ ನನಗೆ ಸಾಕಷ್ಟು ಶಿಕ್ಷೆಗಳು ದೊರಕಿದವು.. ಇವುಗಳನ್ನು ನೆನೆದಾಗ ಸಾಯುವ ಮುನ್ನ ಆ ತೊಂಬತ್ತೆಂಟು ಶೇಕಡ ಕೆಡುಕಿನ ಜಾಗದಲ್ಲಿ ಒಳಿತನ್ನು ಮಾಡಬೇಕು.

ಗುರುಗಳೇ ನನಗೆ ಸಾಯಲು ಇಷ್ಟವಿಲ್ಲ.. ನಾನು ಅದೆಷ್ಟೋ ಜನರನ್ನು ಕೊಂದಿದ್ದೇನೆ. ಎಷ್ಟೋ ಜನರಿಗೆ ವಂಚಿಸಿದ್ದೇನೆ. ಲೆಕ್ಕವಿಲ್ಲದಷ್ಟು ಜನರಿಗೆ ಕೆಟ್ಟ ಉಪಾಯಗಳನ್ನು ಹೇಳಿಕೊಟ್ಟಿದ್ದೇನೆ. ಸುಳ್ಳು, ಮೋಸ ವ್ಯಭಿಚಾರ, ಮದ್ಯಪಾನ ಇತ್ಯಾದಿ ಕೆಟ್ಟ ಚಟಗಳು ನನ್ನನ್ನು ಆವರಿಸಿಕೊಂಡಿವೆ. ಈಗ ನನಗೆ ಮಾನಸಿಕವಾಗಿ ನೆಮ್ಮದಿಯಿಲ್ಲ . ಇಡುವ ಪ್ರತಿಯೊಂದು ಹೆಜ್ಜೆಯೂ ನಡುಕ ಹುಟ್ಟಿಸುತ್ತಿದೆ.. ನಾನು ನಿರ್ಭಯವಾಗಿ ನಡೆಯಬೇಕು.. ಗುರುಗಳೇ ನನಗೇ ನೀವೆ ಒಂದು ದಾರಿ ತೋರಿಸಿಕೊಡಬೇಕು ಎಂದಾಗ ಗುರು ಅಕ್ಬರುದ್ದೀನ್ ಸುತ್ತಲೊಮ್ಮೆ ಕಣ್ಣಾಡಿಸಿದರು.. ಝಲಪಿಸುವ ತಲವಾರನ್ನೋಮೆ ನೋಡಿದರು. ಯಾರ ಸುಳಿವು ಇಲ್ಲದಾದಾಗ ಮುಸ್ತಫಾನನ್ನು ಹತ್ತಿರ ಕರೆದು ಕಿವಿಯಲ್ಲಿ ಏನೋ ಗೊಣಗುಟ್ಟಿದರು.

ಗುರುವಿನ ಮಾತು ಕೇಳಿದ ಮುಸ್ತಫಾ ಅವರಿಂದ ನಾಲ್ಕು ಹೆಜ್ಜೆ ದೂರಕ್ಕೆ ಜಿಗಿದನು. ಮುಸ್ತಫಾನ ಎದೆ ಬಡಿತ ಜೋರಾಯಿತು.. ಹಣೆಯಲ್ಲಿ ಮತ್ತೆ ಬೆವರು ಕಾಣಿಸುತ್ತಿತ್ತು. ಗುರುಗಳನ್ನೇ ನೋಡುತ್ತಾ “ಗುರುಗಳೇ ನನಗೆ ಬದುಕಲು ದಾರಿ ಕೇಳಿದರೆ ನೀವೇನು ಹೇಳಿಕೊಡುತ್ತಿರುವಿರಿ? ನೀವು ಹೇಳಿದ ಮಾತನ್ನು ಹಿಂದಕ್ಕೆ ಪಡೆದುಕೊಳ್ಳಿ. ನನ್ನನ್ನು ಮನುಷ್ಯನಾಗಿ ಮಾಡಿ ಗುರುಗಳೇ. ನನಗೆ ನೀವು ಬಿಟ್ಟರೆ ಈ ಊರಿನಲ್ಲಿ ಬೇರೆ ಯಾರು ಗುರುಗಳಿಲ್ಲ ಎಂದಾಗ ಗುರು ಅಕ್ಬರುದ್ದೀನ್ ಎದ್ದು ನಿಂತು ಕೈಯಲ್ಲಿ ತಲಾವಾರು ಹಿಡಿದುಕೊಂಡು ಜೋರಾಗಿ ” ಮುಸ್ತಫಾ…” ಎಂದು ಘರ್ಜಿಸಿದರು… ಮುಸ್ತಫಾನ ಕೈಕಾಲು ನಡುಗತೊಡಗಿದವು.. ಗುರುಗಳ ಮುಂದೆ ಕೈ ಮುಗಿದು ಬೇಡಿಕೊಂಡಾಗ ಗುರುಗಳು ಕೋಪದಿಂದ “ಹೇ ಮುಸ್ತಫಾ… ‘ನೀನು ಜಿಹಾದ್‌ಗೆ ಸಿದ್ಧನಾಗು ಸಮಯ ಈಗಾಗಲೇ ಮೀರಿದೆ.’ ನೀನು ಜಿಹಾದ್ ನಡೆಸಿಲ್ಲ ಎಂದಾದರೆ ನೀನು ಬದುಕಲು ಅನರ್ಹನು. ನೀನು ಸಾಯುವ ಮುನ್ನ ಜಿಹಾದ್ ನಡೆಸಲೇ ಬೇಕು” ಎಂದಾಗ ಮುಸ್ತಫಾ ಬೇರೆ ವಿಧಿಯಿಲ್ಲದೆ ಗುರುವಿಗೆ ಶರಣಾದನು…

ಮರುದಿನ ಗುರುವಿನ ಆದೇಶದಂತೆ ಮುಸ್ತಫಾ ಒಲ್ಲದ ಮನಸ್ಸಿನಿಂದ ಬಿಳಿ ವಸ್ತ್ರ ತಲೆಗೊಂದು ಟೋಪಿ ಧರಿಸಿ ಗುರುವಿನ ಬಳಿ ಬಂದನು. ಅಷ್ಟರಲ್ಲೆ ಮಸೀದಿಯಲ್ಲಿ ಅಝಾನ್ ಕರೆ ಮೊಳಗುತ್ತಿತ್ತು.. ಗುರುಗಳು ಮುಸ್ತಫಾನನ್ನು ಬಳಿ ಕರೆದು ನಮಾಝ್‌ಗಾಗಿ ಮಸೀದಿಗೆ ಹೋಗಿ ಬರೋಣ ಎಂದು ಸೂಚಿಸಿದರು.. ಇಬ್ಬರು ಮಸೀದಿಯಲ್ಲಿ ನಮಾಝ್ ನಿರ್ವಹಿಸಿದರು ಹೊರಗೆ ಬಂದರು. ಮುಸ್ತಫಾ ಮೌನವಾಗಿ ಗುರುಗಳ ಹಾದಿಯಲ್ಲೇ ಸಾಗಿದನು. ಗುರುಗಳ ತನ್ನ ಮನೆಯಿಂದ ತಂದ ಅದೆನೋ ಭಾರದ ವಸ್ತುವೊಂದನ್ನು ಎತ್ತಿ ಮುಸ್ತಫಾನ ಕೈಗಿಟ್ಟರು. ಅದನ್ನು ತಲೆಯ ಮೇಲೆ ಹೊತ್ತುಕೊಂಡು ಒಂದೂರಿಂದ ಮತ್ತೊಂದು ಊರಿಗೆ ಕಾಡಿನ ಮಧ್ಯೆ ಇರುವ ಕಾಲುದಾರಿಯಲ್ಲಿ ಸಾಗಿದರು. ಸರಿ ಸುಮಾರು ಮೂರು ಗಂಟೆಕ್ಕಿಂತಲೂ ಅಧಿಕವಾಗಿ ನಡೆದಾಡಿ ಸುಸ್ತಾದ ಮುಸ್ತಫಾ ಗುರುಗಳ ಬಳಿ “ಗುರುಗಳೇ ನನಗೆ ಇನ್ನು ನಡೆಯುವ ಶಕ್ತಿ ಇಲ್ಲ.. ಇಷ್ಟು ಭಾರದ ವಸ್ತುಗಳನ್ನು ಹೇಗೆ ಹೊತ್ತುಕೊಂಡು ಮುಂದೆ ಸಾಗೋದು? ಯಾವುದಾದರೂ ಕತ್ತೆಯ ಮೇಲೆ ಇಟ್ಟುಕೊಂಡು ನಡೆಯಬಹುದಿತ್ತಲ್ಲವೇ ಎಂದಾಗ ಗುರುಗಳು ಏರು ಧ್ವನಿಯಲ್ಲಿ ” ಮುಸ್ತಫಾ ನಾವು ಜಿಹಾದ್‌ಗೆ” ಹೋಗ್ತಿದ್ದೇವೆ. ಬಾಯಿ ಮುಚ್ಚಿ ನಡೆಯಬೇಕು ಎಂದಾಗ ಮುಸ್ತಫಾ ಶಾಂತವಾಗಿ ನಡೆದಾಡತೊಡಗಿದನು…

‌ ಮುಕ್ಕಾಲು ದಾರಿ ತಲುಪಿದಾಗ ಒಂದು ದನವೊಂದು ಕಾಡಿನ ಮುಳ್ಳುಗಳ ಮಧ್ಯೆ ಸಿಲುಕಿಕೊಂಡಿತ್ತು. ಗುರುಗಳು ಮುಸ್ತಫಾನ ಮೂಲಕ ಆ ದನವನ್ನು ಬಿಡಿಸಿ ಅದನ್ನು ಕಾಲು ದಾರಿಯಲ್ಲಿ ಹೋಗಲು ಬಿಟ್ಟರು. ಅದಾಗಲೇ ಜಗತ್ತು ಕತ್ತಲಾವರಿಸಿತು. ಗುರುಗಳ ಜೊತೆ ನಡೆದಾಡಿದ ಮುಸ್ತಫಾ ಯಾವುದೋ ಊರಿಗೆ ಬಂದು ತಲುಪಿದನು.. ಆ ಊರಿನಲ್ಲಿ ಬಡಜನರೇ ಹೆಚ್ಚಿದ್ದರು. ಒಪ್ಪೊತ್ತಿನ ಊಟಕ್ಕು ಗತಿಯಿಲ್ಲದ ಜನರಾಗಿದ್ದರು. ಎಲ್ಲದಕ್ಕೂ ಅಲ್ಲಿ ಬರವಾಗಿತ್ತು. ಸರಿಸುಮಾರು ಇಪ್ಪತ್ತಕ್ಕಿಂತಲೂ ಅಧಿಕ ಮನೆಗಳಿತ್ತು. ಗುರುಗಳು ಮುಸ್ತಫಾನ ತಲೆಯ ಮೇಲಿದ್ದ ಕಟ್ಟನ್ನು ಕೆಳಗಿಳಿಸಿದರು. ಗುರುಗಳ ಕಟ್ಟಿನ ಗಂಟನ್ನು ಕೂಡ ಬಿಚ್ಚಿದರು.

ಅಷ್ಟರಲ್ಲೇ ಅಲ್ಲಿ‌ ನೆಲೆಸಿದ್ದ ಕುಟುಂಬದ ಮಕ್ಕಳೆಲ್ಲ ಅಲ್ಲಿ ಜಮೆಗೊಂಡರು. ಗುರುಗಳ ಒಬ್ಬೊಬ್ಬರಿಗೆ ಒಂದೊಂದು ಕಟ್ಟನ್ನು ಕೊಡ ತೊಡಗಿದರು. ‌ಬಾಳೆಯ ಎಲೆಯಲ್ಲಿ ಕಟ್ಟಿದ ಕಟ್ಟು ಅದಾಗಿತ್ತು.‌ ಮುಸ್ತಾಫ ಸುಸ್ತಾಗಿ ಬಸಳಿ ಅಲ್ಲೆ ಬಿದ್ದು ಬಿಟ್ಟನು. ಮಕ್ಕಳ ಜೋರಾಗಿ ಕಿರುಚಾಡುತ್ತ ಕೊಟ್ಟ ಕಟ್ಟುಗಳನ್ನು ಬಿಚ್ಚಿ ಅದರಲ್ಲಿದ್ದ ಆಹಾರವನ್ನು ತಿನ್ನತೊಡಗಿದರು. ಮುಸ್ತಫಾ ಕುತೂಹಲದಿಂದಲೇ ನೋಡುತ್ತಲಿದ್ದ.. “ಅಲ್ಲ ಗುರುಗಳು ಜೀಹಾದ್‌ಗೆ ಕರೆತಂದು ಇದೇನಿದು ದಾನ ಧರ್ಮವನ್ನು ಮಾಡುತ್ತಿದ್ದರೆ ಇವರಿಗೇನಾಗಿದೆ? ಎಂದು ಯೋಚಿಸುವಷ್ಟರಲ್ಲಿ ಒಬ್ಬಾಕೆ ಮಹಿಳೆ ಗುರುಗಳ ಬಳಿ ಬಂದರು. ಆಕೆಯ ಹೆಸರು ರುಸ್ತುಂ. ‌ಗುರುಗಳ ಬಗ್ಗೆ ಅಪಾರ ತಿಳಿದವರು. ರುಸ್ತುಂ ಬಳಿ ಬಂದು ” ಗುರುಗಳೇ ನೀವು ನಡೆಸುವ ಜಿಹಾದ್‌ನಿಂದ ಅದೆಷ್ಟೋ ಜೀವಗಳಿಲ್ಲಿ ಬದುಕುತ್ತಿದೆ. ನೀವು ಇಲ್ಲಿಗೆ ಬರುತ್ತಿರಲಿಲ್ಲ ಎಂದಾಗಿದ್ದರೆ ಇಲ್ಲಿ ಮನುಷ್ಯ ಸಂತಾನವೇ ಇರುತ್ತಿರಲಿಲ್ಲ ಎಂದು ಗುರುಗಳಿಗೆ ಪ್ರಾರ್ಥಿಸಿ ಹೋದಳು..

ಈ ಸಲ ಮುಸ್ತಫಾನಿಗೆ ಗುರುಗಳ ಮೇಲೆ ಕೋಪ ಉಕ್ಕಿ ಬಂತು.. ಮುಸ್ತಫಾ ಹಲ್ಲು ಕಡಿಯುತ್ತಾ “ಗುರುಗಳೇ ಸಾಕು ನಿಮ್ಮ ನಾಟಕ… ಎಲ್ಲರು ಜಿಹಾದ್ ಜಿಹಾದ್ ಎನ್ನುತ್ತಿದ್ದಾರೆ… ಯಾವುದು ಜಿಹಾದ್? ನನಗೆ ಜಿಹಾದ್ ನಡೆಸಲು ಆದೇಶ ನೀಡಿ ಏನು ಕೂಲಿಯಾಳು ಮಾಡುತ್ತಿದ್ದೀರಾ? ಎಂದು ಕೇಳಿದಾಗ ಗುರುಗಳು ಮುಸ್ತಫಾನ ಬೆನ್ನು ತಟ್ಟುತ್ತಾ ” ಶಹಬ್ಬಾಶ್ ಮುಸ್ತಫಾ ನೀನು ಜಿಹಾದ್ ನಡೆಸಿದೆ” ಎನ್ನುತ್ತಾ ‌‌ನಕ್ಕರು. ಮುಸ್ತಫಾ ಗೊಂದಲಕ್ಕೆ ಒಳಗಾದನು.. ಒಂದು ಅರ್ಥವಾಗದಂತೆ ಮತ್ತೊಮ್ಮೆ ವಿವರಿಸುವಂತೆ ಹೇಳಿದಾಗ ಗುರುಗಳು ಮುಸ್ತಫಾನ ಜೊತೆ ಹೆಜ್ಜೆ ಇಡುತ್ತಾ “ಮುಸ್ತಫಾ ನೋಡು ಆ ಮಕ್ಕಳನ್ನು ಎಷ್ಟು ಸಂತೋಷವಾಗಿದ್ದಾರೆ. ನೀನು ಹೊತ್ತುಕೊಂಡು ಬಂದ ಆ ಆಹಾರವನ್ನು ಸೇವಿಸಿ ಎಷ್ಟು ಖುಷಿಯಾಗಿದ್ದಾರೆ. ಆ ಮಹಿಳೆಯನ್ನು ಆಕೆಯ ಮುಖದಲ್ಲಿ ಕಾಣುವ ಸಂತೋಷ ಸಡಗರ ಇದೆಲ್ಲವು ಜಿಹಾದ್‌ನ ಭಾಗ. ನೀನು ಅದೆಷ್ಟೋ ವರ್ಷಗಳ ಬಳಿಕ ಸಂಘಟಿತವಾಗಿ ನಮಾಝ್ ನಿರ್ವಹಿಸಿದೆ ಅದು ಮೊದಲ ಜಿಹಾದ್.‌ ನೀನು ಮೊದಲ ಬಾರಿಗೆ ಒಂದು ಪ್ರಾಣಿಯ ಮೇಲೆ‌ದಯೆ ತೋರಿದೆ ಅದು ಎರಡನೇಯ ಜಿಹಾದ್. ‌ಹಾಗೇಯೆ ಅದೆಷ್ಟೋ ಹಸಿದ ಹೊಟ್ಟೆಗಳಿಗೆ ಆಹಾರ ನೀಡಿದೆ ತಾನೆ ಅದು ಕೂಡ ಜಿಹಾದ್.. ನೀನು ಆ ಮಕ್ಕಳನ್ನು ತೃಪ್ತಿಪಡಿಸಿ ಒಳಗೊಳಗೆ ಖುಷಿಪಟ್ಟೆ ಅದೇ ಮಗದೊಂದು ಜಿಹಾದ್.. ಪರಲೋಕ ಜೀವನವನ್ನು ಮನದಲ್ಲಿಟ್ಟುಕೊಂಡು ಈ ರೀತಿ ಮಾಡುವ ಎಲ್ಲ ಪುಣ್ಯ ಕಾರ್ಯವು ಜಿಹಾದ್ ಆಗಿದೆ ಮುಸ್ತಫಾ…

ಜಿಹಾದ್ ಎಂದರೆ ನೀನು ತಿಳಿದುಕೊಂಡ ಹಾಗೆ ಒಬ್ಬರ ಪ್ರಾಣವನ್ನು ತೆಗೆಯುವುದು ಜಿಹಾದ್ ಅಲ್ಲ. ಒಬ್ಬರಿಗೆ ಜೀವದಾನವನ್ನು ನೀಡುವುದು ಜಿಹಾದ್… ನಾನು ಒಂದೊಳ್ಳೆಯ ಮಾರ್ಗವನ್ನು ತೋರಿಸಿಕೊಟ್ಟೆ. ನೀನು ಪ್ರತಿನಿತ್ಯ ಇದೇ ರೀತಿ ಜಿಹಾದ್ ನಡೆಸಿದರೆ ನಿನಗೆ ಅಲ್ಲಾಹನ ಬಳಿ ಉನ್ನತವಾದ ಸ್ಥಾನವಿದೆ. ನೀನು ಇಹಪರಲೋಕ ವಿಜಯಿಯಾಗುವೆ” ಎಂದಾಗ ಮುಸ್ತಫಾ ಆಶ್ಚರ್ಯಕ್ಕೆ ಒಳಗಾದ. ಸತ್ಯವನ್ನು ಒಂದೊಂದಾಗಿಯೇ ತಿಳಿದುಕೊಂಡ.. ಗುರುಗಳ ಮಾರ್ಗದರ್ಶನದಲ್ಲಿ ಜಿಹಾದ್‌ಗೆ ಚಾಲನೆ ನೀಡಿದನು ಮಾಡಿದ ಪಾಪಗಳಿಂದ ಮುಕ್ತಿ ಹೊಂದಲು ಕಠಿಣ ಪರಿಶ್ರಮ ಪಟ್ಟನು.. ಅಂದಿನಿಂದ ಮುಸ್ತಫಾ ಓರ್ವ ಜಿಹಾದಿಯಾಗಿ ಮಾರ್ಪಾಟ್ಟನು. ಜೊತೆಗೆ ಅದೆಷ್ಟೋ ಯುವಜನರಿಗೆ ಸ್ಪೋರ್ತಿಯಾದನು.‌

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ವೃದ್ಧ ತಂದೆತಾಯಿಯರ ಕಣ್ಣೀರು ಕೋಮುವಾದಿಗಳಿಗೆ ಶಾಪವಾಗಿ ಪರಿಣಮಿಸುವ ಕಾಲ ದೂರವಿಲ್ಲ

ಮುಂದಿನ ಸುದ್ದಿ »

ದಕ್ಷಿಣಕನ್ನಡ ಜಿಲ್ಲೆಯನ್ನು ಹಿಂಸೆಮುಕ್ತ ಮಾಡುವುದು ಹೇಗೆ?

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×