Wednesday May 24 2017

Follow on us:

Contact Us

ರಮಝಾನ್ ಹಬ್ಬವಲ್ಲ..!!

ಇಸ್ಲಾಮಿಕ್ ಕ್ಯಾಲೆಂಡರಿನ 9ನೇ ತಿಂಗಳಿನಲ್ಲಿ ಬರುವ ರಮಝಾನ್, ರಮದಾನ್, ಅಥವಾ ರಂಜಾನ್ ಎಂದು ಕರೆಯಲ್ಪಡುವ ಈ ಪವಿತ್ರ ಮಾಸವು ಜಾಗತಿಕ ಮುಸ್ಲಿಮರ‌ ಹಬ್ಬವೆಂದು ಹೆಚ್ಚಿನ ಮುಸ್ಲಿಮೇತ ಸಹೋದರ, ಸಹೋದರಿಯರಲ್ಲಿ ಒಂದು ತಪ್ಪು ಕಲ್ಪನೆಯಾಗಿದೆ.. ವಾಸ್ತವದಲ್ಲಿ ರಮಝಾನ್ ಮಾಸವು ಪ್ರಪಂಚಾದ್ಯಂತ ಸರ್ವ ಮುಸ್ಲಿಮರು ಮಾಡುತ್ತಿರುವ ಒಂದು ಆರಾಧನೆಯಾಗಿದೆ. ಇಸ್ಲಾಮಿನಲ್ಲಿರುವ ಐದು ಆಧಾರ ಸ್ತಂಭಗಳಲ್ಲಿ (ಕಡ್ಡಾಯ ಕಾರ್ಯ) ನಾಲ್ಕನೆಯ ಸ್ತಂಭವಾಗಿದೆ ಈ ರಮಝಾನ್.

ಈ ರಮಝಾನ್ ಎಂದರೆ ಬೆಳಗ್ಗೆ ಬೇಗನೆ ಎದ್ದು ಹೊಟ್ಟೆ ತುಂಬಾ ತಿಂದುಂಡು ಮಲಗಿ ಮತ್ತೆ ಸಂಜೆ ಮಗರಿಬ್ ಅಝಾನಿನ ಸಮಯದಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ತಿಂದು ಸಂಭ್ರಮಿಸುವ ಹಬ್ಬವಲ್ಲ.. ಈ ಮಾಸವು ಓರ್ವ ಸಾಧಾರಣ ಮುಸ್ಲಿಮನಿಗೆ ತನ್ನೆಲ್ಲ ಸಣ್ಣ ಮತ್ತು ದೊಡ್ಡ ಪಾಪಗಳಿಂದ ಸಂಪೂರ್ಣವಾಗಿ ಮುಕ್ತಿಹೊಂದಿ ತನ್ನ ಜೀವನದ ಕೊನೆಯ ಕ್ಷಣದವರೆಗೂ ಓರ್ವ ನೈಜ್ಯ ಮುಸ್ಲಿಮನಾಗಿ ಪರಿಶುದ್ಧ ಮನದೊಂದಿಗೆ ತನ್ನನ್ನು ತಾನು ಅಲ್ಲಾಹನಿಗೆ ಅರ್ಪಿಸುವ ಒಂದು ವಿಧಾನವಾಗಿದೆ ಈ ಪರಿಶುದ್ಧ ರಮಝಾನ್ ಮಾಸ.

ವರ್ಷದ ಹಣ್ಣೊಂದು ತಿಂಗಳುಗಳ ಕಾಲ ಪರಲೋಕದ ಬಗ್ಗೆ ಚಿಂತಿಸದೆ ಸುಖವಾಗಿ ಜೀವಿಸುತ್ತಾ, ಮೂರು ಹೊತ್ತು ಉಣ್ಣಲು ಗತಿಯಿಲ್ಲದಿರುವ ಸಂಬಂಧಿಕರು, ನೆರೆಹೊರೆಯರವನ್ನು ನಿರ್ಲಕ್ಷಿಸಿ ಜೀವಿಸುವವರಿಗೆ ಈ ಮಾಸವು ಹೆಚ್ಚಿನ ಪರಿಣಾಮವನ್ನು ಬೀರಿಸುತ್ತದೆ. ಮನುಷ್ಯ ಒಂದು ತಿಂಗಳ ಕಾಲ ಹಸಿವು ಮತ್ತು ಬಾಯಾರಿಕೆಯ ತಡೆಗಟ್ಟುವ ಮೂಲಕ ದೇವನ ಸ್ಮರಣೆಯಲ್ಲಿ ತೊಡಗಿಸಿಕೊಂಡು ಇತರರ ಹಸಿವಿನ ನೋವ ಅರಿತಾಗ ಮನುಷ್ಯ ಮನುಷ್ಯನ ನಡುವಿನ ಸಂಬಂಧವು ಇನ್ನಷ್ಟು ಧೃಡವಾಗುತ್ತದೆ. ಇದರ ಮಧ್ಯೆ ಶ್ರೀಮಂತ-ಬಡವ ಎನ್ನುವ ತಾರತಮ್ಯವೂ ಹೋಗಲಾಡಿಸಲ್ಪಡುತ್ತದೆ. ಈ ಒಂದು ಪವಿತ್ರ ಮಾಸವು ಜಗತ್ತಿನಾದ್ಯಂತ ಅದೆಷ್ಟೋ ಜನರ ಮನಸ್ಥಿತಿಯನ್ನು ಬದಲಾಯಿಸಿ ವಿಶ್ವ ಭ್ರಾತೃತ್ವ ಸಾಧಿಸುವುದರಲ್ಲಿ ಯಶಸ್ವಿಯಾಗಿದೆ.

ಅಂತೇಯೇ ಕೇವಲ ಉಪವಾಸವಿದ್ದು ವರ್ಷದ ಹನ್ನೊಂದು ತಿಂಗಳಿನಂತೆ ಈ ತಿಂಗಳನ್ನೂ ನಿರ್ಲಕ್ಷ್ಯ ಭಾವನೆಯಿಂದ ಕಂಡು ಕ್ಷೋಭೆಯನ್ನುಂಟು ಮಾಡುವವರಿಗೆ ಈ ಮಾಸವು ಯಾವುದೇ ಪರಿಣಾಮವನ್ನು ಬೀರುವುದಿಲ್ಲ‌. ಪವಿತ್ರ ಕುರ್‌ಆನಿನ 2/183ರಲ್ಲಿ ಅಲ್ಲಾಹನು ಹೇಳುತ್ತಾನೆ “ಓ ಸತ್ಯವಿಶ್ವಾಸಿಗಳೇ! ನಿಮಗಿಂತ ಮುಂಚಿನವರ ಮೇಲೆ ವಿಧಿಸಲಾದಂತೆ ನಿಮ್ಮ ಮೇಲೂ ಉಪವಾಸ ಆಚರಿಸುವುದನ್ನು ಕಡ್ಡಾಯವಾಗಿ ವಿಧಿಸಲಾಗಿದೆ. ನೀವು ಭಯಭಕ್ತಿ ಪಾಲಿಸುವ ಸಲುವಾಗಿ.”

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಇಸ್ಲಾಮಿನಲ್ಲಿ ವೈಯಕ್ತಿಕ ಕಾನೂನು

ಮುಂದಿನ ಸುದ್ದಿ »

ಉಪವಾಸವೆಂಬ ಕುಲುಮೆಯಲ್ಲಿ ಒಂದು ತಿಂಗಳು…

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×