Saturday December 31 2016

Follow on us:

Contact Us

ಆಗಬೇಕಿದೆ ಮನಸ್ಸುಗಳ ಜೀರ್ಣೋದ್ಧಾರ…

Ramesh-Nellisara1111-112-Copy111111121111

ರಮೇಶ್ ನೆಲ್ಲಿಸರ ತೀರ್ಥಹಳ್ಳಿ

ಇಂದು ಈ ವರ್ಷದ ಕಡೆಯ ದಿನ, ನಾಳೆಯಿಂದ ಹೊಸ ವರುಷ ಆರಂಭಗೊಳ್ಳಲಿದೆ. ಇನ್ನಷ್ಟು ಚೈತನ್ಯದಿಂದ ಹುರುಪಿನಿಂದ ನವ ವರುಷವನ್ನು ಸ್ವಾಗತಿಸಲು ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೇವೆ. ಹೊಸ ವರ್ಷ ಎಂದ ಕೂಡಲೇ ಅವೇ ಅಸ್ಪಷ್ಟ ಗುರಿಗಳು, ಒಂದಿಷ್ಟು ವೇಳಾಪಟ್ಟಿ ನಮ್ಮ ಎದುರಿಗೆ ಬಂದು ನಿಲ್ಲುತ್ತದೆ. ವರ್ಷ ಕಳೆದಂತೆಲ್ಲಾ ಗುರಿಗಳು ಮೂಲೆ ಸೇರುವುದೂ ನಮಗೆಲ್ಲರಿಗೆ ತಿಳಿದಿದೆ. ಆದರೂ ಜೀವನವೆನ್ನುವುದು ನಂಬಿಕೆಯ ಮೇಲೆ ನಿಂತಿರುವ ಹಡಗು. ನಮ್ಮ ಕನಸು ಕನವರಿಕೆಗಳು ಹಡಗನ್ನು ತೇಲಿಸುತ್ತವೆ. ನಮ್ಮನ್ನೂ ಬದುಕಿಸುತ್ತವೆ. ಕನಸೇ ಇಲ್ಲದ ದಾರಿಯಲಿ ನಡೆಯುವುದಾದರೂ ಹೇಗೆ!.

ಹೊಸ ವರ್ಷದಲ್ಲಿ ಏನೆಲ್ಲಾ ಬದಲಾವಣೆಗಳು ನಮ್ಮ ಸುತ್ತಮುತ್ತಲಿನವರಲ್ಲಿ ಆಗಬೇಕೆಂದು ನಾವು ಬಯಸುತ್ತೇವೆಯೋ ಅಂತಹ ಬದಲಾವಣೆಗಳು ನಮ್ಮಿಂದಲೇ ಏಕೆ ಪ್ರಾರಂಭವಾಗಬಾರದು? ನಮ್ಮಂತಯೇ ಇತರರು ಎಂದು ಬಗೆದಾಗ ಮಾತ್ರ ಮಾನವೀಯತೆಗೆ ಬೆಲೆ ಸಿಕ್ಕೀತು. ಇಲ್ಲದಿದ್ದರೆ ನಮ್ಮವನು ನಮ್ಮ ಜಾತಿ, ಕೋಮಿನವನು, ಧರ್ಮದವನು ಎನ್ನುವ ಸಂಕೋಲೆಯೊಳಗೆ ನಾವೂ ಬಂಧಿತರಾಗಿ ಆ ಮೂಲಕ ಇಡೀ ಸಮಾಜವೇ ಬೇರ್ಪಟ್ಟ ದ್ವೀಪಗಳಾಗಿ ಬಿಡುವ ಸಂಭವವಿದೆ.

ಚಂದಾ ಮೂಲಕ ಹಣ, ವಸ್ತು ಸಂಗ್ರಹಿಸಿ ಗುಡಿ, ಮಸೀದಿ, ಚರ್ಚುಗಳ ಜೀರ್ಣೋದ್ಧಾರ ಮಾಡುವ ನಾವು ನಮ್ಮ ಮನಸ್ಸುಗಳ ಜೀರ್ಣೋದ್ಧಾರ ಮಾಡುವಲ್ಲಿ ಸೋತಿದ್ದೇವೆ. ನಮ್ಮ ಎಲ್ಲಾ ದೇವಾಲಯಗಳು ಶಿಕ್ಷಣ ಪಸರಿಸುವ, ನೈತಿಕತೆಯ ಮೂಲವಾಗಿ ಮಾರ್ಪಡಬೇಕಾದ ಕಾಲ ಸನ್ನಿಹಿತವಾಗಿದೆ. ಅಕ್ಕ ಪಕ್ಕದವರ ಮೇಲೆ, ಸುತ್ತಲಿನವರ ಮೇಲಿನ ನಮ್ಮ ಈರ್ಷೆ ಕಡಿಮೆಯಾಗಿ ಭಾತೃತ್ವ ಭಾವನೆ ಬೆಳೆದಾಗ ಧರ್ಮಗಳಿಗೊಂದು ಅರ್ಥ ಸಿಕ್ಕೀತು.

ಧರ್ಮ ನಮ್ಮ ವೈಯಕ್ತಿಕ ನಂಬಿಕೆ, ಇದನ್ನು ವೈಭವೀಕರಿಸುವ ಅಗತ್ಯವಿಲ್ಲ, ಧಾರ್ಮಿಕ ಮಹಾಪುರುಷರಾರು ಈ ಕಾರ್ಯವನ್ನು ಮಾಡದೆ ಸರಳ ಜೀವನವನ್ನು ನಡೆಸಿ ನಮಗೆ ಉದಾಹರಣೆಯಾಗಿ, ದಾರಿದೀಪವಾಗಿ ನಿಂತಿದ್ದಾರೆ. ‘ನಮ್ಮಗಳ ನಡುವಿನ ಅಹಮ್ಮಿನ ಕೋಟೆಯನ್ನು ಕೆಡವಿದರೆ ನಾವು ಬರೀ ಮನುಷ್ಯರಾಗಿ ನಿಲ್ಲುತ್ತೇವೆ. ಏಕೆಂದರೆ ಮಾನವೀಯತೆಗಿಂತ ಮಿಗಿಲಾದದು ಏನೂ ಇಲ್ಲ’.

ಬರಲಿರುವ ವರ್ಷದಲ್ಲಿ ನಮ್ಮೆಲ್ಲ ಗುರಿಗಳ ಜೊತೆಗೆ ನಮ್ಮ ಮನಸ್ಸನ್ನು ಜೀರ್ಣೋದ್ಧಾರ ಮಾಡುವ ಹೊಸ ಗುರಿಯೊಂದನ್ನು ಇರಿಸಿಕೊಳ್ಳೋಣ. ಸಾಧ್ಯವಾದಷ್ಟು ಪೂರ್ವಗ್ರಹ ಪೀಡಿತರಾಗದೆ ಹೊಸ ವಿಷಯಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳೋಣ. ಏಕೆಂದರೆ ತೆರೆದ ಮನದೊಳಗೆ ಮಾತ್ರ ರವಿಕಿರಣ ತಲುಪಬಲ್ಲದು ಜ್ಞಾನ ಕಿರಣ ನೆಲೆ ನಿಲ್ಲಬಹುದು. ಜಗತ್ತಿನಲ್ಲಿ ಮಹಾನ್ ಸಾಧಕರನ್ನು ಅವರ ಸಾಧನೆಯಿಂದ ಗುರುತ್ತಿಸುತ್ತಾರೆಯೇ ವಿನಃ ಅವರ ಜಾತಿ, ಧರ್ಮಗಳಿಂದಲ್ಲ.

ವಿರೋಧಿಸುವ ಕಾರಣದಿಂದಲೇ ಇತರರನ್ನು ವಿರೋಧಿಸದಿರೋಣ. ಇತರರು ಮಾಡಿದ ಒಳ್ಳೆಯ ಕಾರ್ಯಗಳನ್ನು ಪ್ರಶಂಸಿಸುವ ಸ್ವಚ್ಛ ಮನಸ್ಸನ್ನು ನಾವು ಹೊಂದಿರಬೇಕಾಗಿದ್ದು ಇಂದಿನ ಅಗತ್ಯವಾಗಿದೆ. ಕುವೆಂಪುರವರು ನುಡಿದಂತೆ ನಾವು ವಿಶ್ವಮಾನವಾರಾಗುವತ್ತ ಮುನ್ನಡಿಯಿಡಬೇಕು. ಎಷ್ಟು ದಿನ ನಾವೇ ತೋಡಿದ ಬಾವಿಯಲ್ಲಿ ಬಂಧಿಯಾಗುವುದು ಅಲ್ಲವೇ?!.

ನಮ್ಮಗಳ ನಡುವಿನ ಅನುಮಾನದ ಪೊರೆಯನ್ನು ಕಳಚಿದಾಗ ಮಾತ್ರ ಸಂವಹನ ಸಾಧ್ಯವಾಗುತ್ತದೆ. ಭಾರತ ಬಹುತ್ವ ದೇಶ, ಯಾವುದೇ ಸಿದ್ಧಾಂತ ತತ್ವಗಳನ್ನು ಯಾರೂ ಯಾರೊಬ್ಬರ ಮೇಲೂ ಇಲ್ಲಿ ಹೇರಲು ಸಾಧ್ಯವಿಲ್ಲ. ಯಾರೋ ಒಬ್ಬ, ಒಂದು ಪಕ್ಷ, ಒಂದು ಧರ್ಮ, ಒಂದು ಜಾತಿ ನಮ್ಮನ್ನು ದಬ್ಬಾಳಿಕೆ ಮಾಡಲು ಅಸಾಧ್ಯ, ಜನವಾಣಿಯ ಬೇರನ್ನು ಎಷ್ಟು ದಿನ ಹತ್ತಿಕ್ಕಲು ಸಾಧ್ಯವಿದೆ ಹೇಳಿ?, ಇತಿಹಾಸವೇ ಇದಕ್ಕೆ ಸಾಕ್ಷಿ. ಜನರ ಒಗ್ಗಟ್ಟಿನಿಂದ ತಾನೇ ನಾವು ಸ್ವಾತಂತ್ರ್ಯ ಗಳಿಸಿದ್ದು!.

ನಮ್ಮ ನಡುವಿನ ಸ್ನೇಹ-ವಿಶ್ವಾಸವನ್ನು ಇನ್ನಷ್ಟು ಬಲಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡೋಣ.‌..

”ಹೊಸ ವರುಷ
ತರಲಿ ಹೊಸ ಹರುಷ
ಕಷ್ಟಗಳ ಬಿಳಿಮೋಡ 
ಹಾಗೇ ಇರದು,
ಸುಖದ ಕಾರ್ಮೋಡ
ಮಳೆಹನಿ ಸುರಿಸುವುದ
ಯಾರಿಂದಲೂ ತಡೆಯಲಾಗದು…”

“ಮುಂಚಿತವಾಗಿ ಹೊಸ ವರ್ಷದ ಶುಭಾಶಯಗಳು “

-ರಮೇಶ್ ನೆಲ್ಲಿಸರ, ತೀರ್ಥಹಳ್ಳಿ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕಣಿವೆ ರಾಜ್ಯ ಉತ್ತರಕಾಂಡ್ ವಿಧಾನಸಭಾ ಚುನಾವಣೆಗಳು- ಒಂದು ಟಿಪ್ಪಣಿ!

ಮುಂದಿನ ಸುದ್ದಿ »

ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿಯಿಡುತ್ತೇವೆಂದವರು ಮತ್ತು ಕೈಕಟ್ಟಿ ಕುಳಿತವರು

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×