Saturday January 7 2017

Follow on us:

Contact Us
post

ಚಿತ್ರಗಳು ಪತ್ರಗಳು…

ರಮೇಶ್ ನೆಲ್ಲಿಸರ, ತೀರ್ಥಹಳ್ಳಿ

ರಮೇಶ್ ನೆಲ್ಲಿಸರ, ತೀರ್ಥಹಳ್ಳಿ

“ಎಲ್ಲೋ ನೋಡಿದ ನೆನಪು”ಎಂದು ಆಗಾಗ್ಗೆ ನಾವು ಹೇಳಿಕೊಳ್ಳುವುದು ನಿಮ್ಮ ಅನುಭವಕ್ಕೆ ಬಂದಿರಲಿಕ್ಕೂ ಸಾಕು. ಇನ್ನು ಕಪಾಟಿನ ಮೂಲೆಯಲೆಲ್ಲೋ, ಅಟ್ಟದ ಮೇಲೋ ನೂರಾರು ಕಥೆಗಳನ್ನು ಹೊರಗೆಡಹುವ ಪತ್ರಗಳು ಅದೆಷ್ಟೋ ನೆನಪುಗಳನ್ನು ತಮ್ಮ ಒಡಲಿನಲ್ಲಿ ಜೀವಂತವಾಗಿ ಬಚ್ಚಿಟ್ಟುಕೊಂಡಿರುತ್ತವೆ!.

ಕಾಲೇಜಿನ ದಿನಗಳಲ್ಲಿ ಯಾವುದೋ ಸ್ನೇಹಿತ/ಸ್ನೇಹಿತನೊಂದಿಗೆ ತೆಗೆಸಿದ ಬ್ಲಾಕ್ ಅಂಡ್ ವೈಟ್ ಫೋಟೋಗಳು ಪ್ರಸ್ತುತ ಜೀವನವನ್ನು ಕಲರ್ ಫುಲ್ ಆಗಿಸಬಲ್ಲವು. ಇಲ್ಲವೇ ಗಂಡ ಅಥವಾ ಹೆಂಡತಿಯ ಕೈಗೆ ಸಿಕ್ಕಿ ಜೀವನವೇ ಕಲರ್ ಲೆಸ್ ಆದ ಉದಾಹರಣೆಗಳು ನಮ್ಮ ಮುಂದಿವೆ.

ನೆನಪು ಎನ್ನುವುದು ಎಲ್ಲರಲ್ಲೂ ಇರಬಹುದಾದ ಭಾವನಾತ್ಮಕ ಅಂಶ, ಆಕಸ್ಮಿಕವಾಗಿ ಎದುರಾಗುವ ಹೈಸ್ಕೂಲ್ ನ ಮೇಘು, ಕಾಲೇಜಿನ ಶಿಲ್ಪ, ಸಹೋದ್ಯೋಗಿ ರಾಘು, ಬಸ್ ಕಂಡಕ್ಟರ್ ಶೇಖರ, ಮೀನುವ್ಯಾಪಾರಿ ಹುಸೇನ್, ಪಾನಿಪೂರಿ ರಾಜು, ಪಾಠ ಮಾಡಿದ ವನಮಾಲ ಮೇಡಂ ಇವರೆಲ್ಲಾ ಹಾಗೇ ಕಣ್ಣಮುಂದೆ ಪಾಸ್ ಆಗುತ್ತಾರೆ. ಜೀವನದ ಹಾದಿಯನ್ನು ಹಿಂಬಾಲಿಸುತ್ತ ನಾವೆಲ್ಲಿದ್ದೇವೆ ಎಂಬುದು ಅರಿವಾಗಬೇಕಾದರೆ ನೆನಪುಗಳನ್ನು ಹೊರತೆಗೆಯುವ ಚಿತ್ರಗಳನ್ನು ತೆಗೆದು ಹರವಬೇಕು, ಇಲ್ಲವೇ ಕಪಾಟನ್ನು ಕೆದಕಿ ಪತ್ರಗಳನ್ನು ಹುಡುಕಬೇಕು.

ಈಗಿನ ಕಾಲದವರಿಗೆ ಪತ್ರಗಳು ಎಂಬ ಶಬ್ಧವೇ ಅಪರಿಚಿತ. ಹೆಚ್ಚೆಂದರೆ LIC ಅಥವಾ ಬ್ಯಾಂಕಿನ ನೋಟಿಸ್ ಎಂದು ತಿಳಿದಿರುತ್ತಾರೆ. ಪತ್ರಗಳು ಒಂದು ಕಾಲದಲ್ಲಿ ರಾಜ್ಯವನ್ನಾಳಿ ಈಗ ಆಧುನಿಕ ಸಂಪರ್ಕ ಮಾಧ್ಯಮಗಳಿಗೆ ತಮ್ಮ ಸ್ಥಾನವನ್ನು ಬಿಟ್ಟು ಪೆನ್ಶನ್ ಪಡೆಯುವ ರಿಟೈರ್ಡ್ ನೌಕರನಂತೆ ಮೂಲೆ ಸೇರಿವೆ‌.ಒಂದು ಸ್ವಲ್ಪ ನೆನಪಿಸಿಕೊಳ್ಳಿ,ಒಂದು ಕಾಲದಲ್ಲಿ ಅತಿ ಮುಖ್ಯ ವಸ್ತು ಎಂದು ಕರೆಸಿಕೊಳ್ಳುತ್ತಿದ್ದ ‘ಕೆಂಪನೆ ಪೋಸ್ಟ್ ಬಾಕ್ಸ್’ ಈಗ ಅಂಚೆ ಕಚೇರಿಯ ಹೊರತು ಬೇರೆಲ್ಲೂ ಕಾಣುವುದು ಅಪರೂಪವಾಗಿಬಿಟ್ಟಿದೆ. ಎಲ್ಲಾದರೂ ಹಳ್ಳಿಗಳಲ್ಲಿ ಕಂಡರೂ ಅವುಗಳಲ್ಲಿ ನಿಮಗೆ ಸಿಗುವುದು ಗುಟ್ಕಾ ಪೌಚ್ ಗಳು, ಪ್ಲಾಸ್ಟಿಕ್ ಕವರ್ ಗಳು, ಇದಕ್ಕಾಗಿಯೇ ಪೋಸ್ಟ್‌ಮ್ಯಾನ್ ಈ ಬಾಕ್ಸ್ ಗಳತ್ತ ಸುಳಿಯತ್ತಲೂ ಇಲ್ಲ.

ಚಿತ್ರಗಳೆಂದರೆ ಕೇವಲ ಕ್ಯಾಮೆರಾದಿಂದ ತೆಗೆದವುಗಳು ಎಂದರ್ಥವಲ್ಲ,ನಮ್ಮಲ್ಲಿ ಬಹುತೇಕರಿಗೆ ತಮ್ಮ ಜೀವನದ ಬಹುಮುಖ್ಯ ಘಟನೆಗಳಿಗೆ ತಾವು ಸಾಕ್ಷಿಯಾಗಿದ್ದ ಚಿತ್ರಗಳು ಮನದಲ್ಲಿ ಅಚ್ಚಳಿಯದಂತೆ ವಿರಾಜಮಾನವಾಗಿವೆ,ಪ್ರೇಯಸಿ ಟಾಟಾ ಹೇಳಿದ ದಿನವೋ, ಹೈಸ್ಕೂಲಿನ ಗ್ರೂಫ್ ಪೋಟೋ ತೆಗೆಯುವಾಗಿನ ಸಂದರ್ಭವೋ,ಕಡಲಿನ ಎದುರಿಗೆ ತಾವು ಕುಬ್ಜರು ಎಂದು ತಿಳಿದಿದ್ದು,ಮದುವೆಯ ಸುದಿನವೋ  ಇನ್ನೂ ಏನೇನೋ ಚಿತ್ರಗಳಾಗಿ ಮನಸ್ಸಿನಲ್ಲಿ ತರಂಗಗಳನ್ನು ಎಬ್ಬಿಸಿವೆ.

ದಾರಿಬದಿಯಲ್ಲಿ ಕಡಲೆಕಾಯಿ ಮಾರುವ ಅಜ್ಜಿ,ಕಾಲಿಲ್ಲದಿದ್ದರೂ ಸ್ವಾವಲಂಬಿಯಾಗಿ ದುಡಿದು ಬದುಕುವ ಡೇವಿಡ್‌,ಎಷ್ಟೋ ಬಾರಿ ಬಿದ್ದರೂ ಧೂಳು ಕೊಡವಿ ಮೇಲೆದ್ದು ನಡೆಯಲು ಪ್ರಯತ್ನಿಸುವ ಮಗು,ಅಮ್ಮನ ಹರಿದ ಸೀರೆ,ತಂದೆಯ ಬೆವರು ವಾಸನೆಯ ಶರ್ಟು,ಅಣ್ಣನ ಹರಿದ ಸ್ಕೂಲ್ ಬ್ಯಾಗು,ಮಡದಿಯ ಮೊದಲ ಮುತ್ತು ಇವೆಲ್ಲವೂ ನಮ್ಮಲ್ಲೆರಲ್ಲೂ ಇರಬಹುದಾದ ಅಪ್ರಕಟಿತ ಚಿತ್ರಗಳೇ ಅಲ್ಲವೇ?ಯಾವುದಾದರೂ ವಸ್ತುವನ್ನೋ ಅಥವಾ ಸ್ಥಳವನ್ನೋ ನೋಡಿದಕೂಡಲೆ ಮನಪಟಲದ ಮೇಲೆ ಅವುಗಳಿಗೆ ಸಂಬಂಧಿಸಿದ ಚಿತ್ರಗಳು ಅಚ್ಚಾಗುತ್ತವೆ,ನಮಗೆ ಇಷ್ಟವಾದ ಸಂಗತಿಗಳಾದರಂತೂ ಎಷ್ಟೋ ಸಮಯದ ನಂತರವೂ ಅವು ಉಳಿದುಕೊಂಡಿರುತ್ತವೆ ಅಥವಾ ಹಲವು ವರ್ಷಗಳ ನಂತರ ನಾವು ಅದೇ ಪ್ರದೇಶಕ್ಕೆ ಭೇಟಿ ನೀಡಿದಾಗ ಮನದ ಅಕ್ಷಿಪಟಲದಿಂದ ಹೊರ ಇಣುಕುತ್ತವೆ.

ಯಾವುದೋ ಸಂದರ್ಭದಲ್ಲಿ ತೆಗೆಸಿದ ಪೋಟೋಗಳು ಹಲವಾರು  ವರ್ಷಗಳ ನಂತರ ನೋಡಿದರೆ ಅವು ಇತಿಹಾಸವನ್ನೇ ಬಿಚ್ಚಿಡುತ್ತವೆ,ಆ ನಿಟ್ಟಿನಲ್ಲಿ ಪೋಟೋಗಳು ಒಂದು ಉತ್ತಮ ದಾಖಲೆಯಾಗಿ ನಿಲ್ಲಬಲ್ಲವು.ಈಗಂತೂ ಸ್ಮಾರ್ಟ್ಫೋನ್ ಯುಗ ಕ್ಷಣಮಾತ್ರದಲ್ಲಿ ಪೋಟೋಗಳನ್ನು ತೆಗೆದು ಅಳಿಸಬಹುದು. ಇದು ಸೆಲ್ಫಿಯುಗ, ಜನರಿಗೆ ಎಲ್ಲವನ್ನು ತೆರೆದಿಡುವ ಉಮೇದು, ಆದರೂ ಇವುಗಳಲ್ಲಿ ಎಲ್ಲಾ ಚಿತ್ರಗಳೂ ನೆನಪಿನಲ್ಲಿ ಉಳಿಯಲಾರವು, ಆದರೆ ಮನದ ಫ್ರೇಮ್ ನಲ್ಲಿ ಉಳಿಯುವ ಚಿತ್ರಗಳ ಕೊಲಾಜ್ ನಮ್ಮೊಂದಿಗೆ ಕಡೆಯವರೆಗೂ ಉಳಿದು ಬಿಡುತ್ತವೆ.

nkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

67 ಸಾವಿರ ಕೋಟಿ ರೂಪಾಯಿ ವ್ಯವಹಾರದ ಬಳಿಕವೂ ನಾವೇಕೆ ಒಂಟಿ?

ಮುಂದಿನ ಸುದ್ದಿ »

ಗಾಂಧೀಜಿಯ ‘ಬಟ್ಟೆ’ಯಿಂದ ಇಂದಿನ ‘ಮನಸ್ಥಿತಿ’ ವರೆಗೆ

ಸಿನೆಮಾ

 • marali

  “ಮರಳಿ ಮನೆಗೆ” ಧ್ವನಿಸುರುಳಿ ಬಿಡುಗಡೆ ಸಂಭ್ರಮ

  February 24, 2017

  ನ್ಯೂಸ್ ಕನ್ನಡ(24-2-2017): ಖ್ಯಾತ ಬರಹಗಾರ, ಚಿಂತಕ, ರಂಗಕರ್ಮಿ ಯೋಗೇಶ್ ಮಾಸ್ಟರ್ ನಿರ್ದೇಶನದ ಚೊಚ್ಚಲ ಚಲನಚಿತ್ರ “ಮರಳಿ ಮನೆಗೆ”ಯ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಯೋಗೇಶ್ ಮಾಸ್ಟರ್ ನಾದಬ್ರಹ್ಮ ಹಂಸಲೇಖ ಅವರು “ದೇಸಿ ಸಂಗೀತದ ...

  Read More
 • bhavana

  ನಟಿ ಭಾವನಾರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದವನ ಬಂಧನ

  February 18, 2017

  ನ್ಯೂಸ್ ಕನ್ನಡ(18-2-2017): ಚಿತ್ರನಟಿ ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಳಂನಲ್ಲಿ ಭಾವನಾ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನಾ ಅವರ ಕಾರು ಚಾಲಕನಾಗಿದ್ದ ...

  Read More
 • Marali Manege

  ಸೆನ್ಸಾರ್ ಮಂಡಳಿಯವರನ್ನೂ ಕಣ್ಣೀರು ಹಾಕಿಸಿದ ಚಿತ್ರ ಬಿಡುಗಡೆಗೆ ಸಿದ್ಧ

  February 16, 2017

  ಯೋಗೇಶ್ ಮಾಸ್ಟರ್ ನಿರ್ದೇಶನದ ಚಿತ್ರ ಸಂಘಪರಿವಾರ-ಪ್ರಗತಿಪರರ ಅಭಿಪ್ರಾಯವನ್ನೂ ಬದಲಿಸಬಹುದಂತೆ ನ್ಯೂಸ್ ಕನ್ನಡ ವರದಿ(16.02.2017)-ಮಂಗಳೂರು: ಯೋಗೇಶ್ ಮಾಸ್ಟರ್ ಅವರು ನಿರ್ದೇಶಿಸಿರುವ ‘ಮರಳಿ ಮನೆಗೆ’ ಕನ್ನಡ ಚಿತ್ರವು ಇದೀಗ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ನಾಯಕರ ವೈಭವೀಕರಣದ ಚಿತ್ರಗಳನ್ನೇ ನೋಡಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×