Saturday December 24 2016

Follow on us:

Contact Us
Relaxing-Woman-2

ಮನಸ್ಸೇ ರಿಲ್ಯಾಕ್ಸ್ ಪ್ಲೀಸ್‌…

ರಮೇಶ್ ನೆಲ್ಲಿಸರ, ತೀರ್ಥಹಳ್ಳಿ.

ರಮೇಶ್ ನೆಲ್ಲಿಸರ, ತೀರ್ಥಹಳ್ಳಿ.

ಹಕ್ಕಿಯಂತೆ ಹಾರುವುದನ್ನು, ಮೀನಿನಂತೆ ಸ್ವಚ್ಛಂದವಾಗಿ ಈಜುವುದನ್ನು ಯಾರು ಬಯಸುವುದಿಲ್ಲ ಹೇಳಿ?, ದಿನನಿತ್ಯದ ಜಂಜಾಟಗಳಿಂದ ದೂರ ಹೋಗಿ ಒತ್ತಡವಿಲ್ಲದ ಜೀವನ ನಡೆಸಲು ನಮ್ಮಲ್ಲಿ ಎಷ್ಟು ಜನ ತಡಕಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಿದರೆ, ನಮ್ಮಗಳ ಮನಸ್ಸು ಬಂಧಿಯಾಗಿರುವುದು, ಬಳಲಿರುವುದು, ದೈನಂದಿನ ವ್ಯಾಪಾರಗಳಿಂದ ತುಸು ನಿತ್ರಾಣಗೊಂಡಿರುವುದು ಗೋಚರಿಸುತ್ತದೆ. ಮನಸ್ಸು ಚಂಚಲವಾದದು ಕ್ಷಣಿಕ ಸಂತೋಷಕ್ಕೂ ಹಾತೊರೆಯುತ್ತಿರುತ್ತದೆ. ಗಣಿತ ತರಗತಿ ಇಷ್ಟವಾಗಲಿಲ್ಲ ಎಂದರೆ ಅಲ್ಲೆಲ್ಲೋ ಅಂಡಮಾನ್ ದ್ವೀಪಗಳಲ್ಲಿ ಅಲೆದಾಡುತ್ತಿರುತ್ತದೆ. ಇಲ್ಲವೇ ಆಗಸದಲ್ಲಿ ವಿಹರಿಸುತ್ತಿರುತ್ತದೆ. ದೇಹವನ್ನು ಒಂದೆಡೆ ಬಂಧಿಯನ್ನಾಗಿಸಬಹುದು ಆದರೆ, ಮನಸ್ಸನಲ್ಲ. ಅದಕ್ಕೆ ಹಿರಿಯರು ಮನಸ್ಸನು ಹುಚ್ಚುಕುದುರೆಗೆ ಹೋಲಿಸಿದ್ದಾರೆ. ಮನಸೆಂಬುದು ಮಾಯೆಯೆಂದು ದಾಸರು ಹೇಳಿದ್ದಾರೆ. ಮನಸ್ಸು ಮರ್ಕಟವೆಂದು ಹಾಡಿದ್ದಾರೆ.

ನಾವು ಬೆಳಿಗ್ಗೆಯಿಂದ ರಾತ್ರಿಯವರೆಗೂ ಕೆಲಸ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತೇವೆ. ಆದರೆ ಮನಸ್ಸು ಮಲಗುವುದಿಲ್ಲ ಸುಪ್ತಾವಸ್ಥೆಯಲ್ಲಿ ಕಾರ್ಯನಿರತವಾಗಿರುತ್ತದೆ. ಕನಸೆಂದರೆ ಅದೇ ಅಲ್ಲವೇ? ಕನಸಿಗೆ ಮತ್ತು ಮನಸ್ಸಿಗೆ ಬೇಲಿಕಟ್ಟಲು ಅಸಾಧ್ಯ. ಆದರೆ, ಮನಸ್ಸು ನೋವು ನಲಿವನ್ನು ಅನುಭವಿಸುತ್ತದೆ. ಸಣ್ಣ ಸಣ್ಣ ಕಾರಣಕ್ಕೂ ಹ್ಯಾಪುಮೋರೆ ಹಾಕಿಕೊಂಡು ರಚ್ಚೆಹಿಡಿಯುತ್ತದೆ. ನಮ್ಮ ದಿನದ ವೇಳಾಪಟ್ಟಿಯನ್ನು ಅಸ್ತವ್ಯಸ್ತ ಗೊಳಿಸುತ್ತದೆ. ಮನಸ್ಸು ಒತ್ತಡ ಅನುಭವಿಸಿದರೆ ನಾವು  ಖಿನ್ನರಾಗುತ್ತೇವೆ.

ಶ್ರೀಮಂತರಿಗೆ, ಕ್ರಿಕೆಟ್ ಆಟಗಾರರಿಗೆ, ಸಿನಿಮಾ ಮಂದಿಗೆ ಮಾನಸಿಕ ಒತ್ತಡ ಕಡಿಮೆ ಎಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವದಲ್ಲಿ ಅವರೂ ಮಾನಸಿಕ ಒತ್ತಡವನ್ನು ತೀವ್ರತರವಾಗಿ ಅನುಭವಿಸುತ್ತಾರೆ. ರಾತ್ರಿ ಬೆಳಗಾಗುವುದೊರೊಳಗೆ ಪ್ರಖ್ಯಾತನಾದ ಸಿನಿಮಾ ನಟ ಅವಕಾಶಕ್ಕಾಗಿ, ಪ್ರಸಿದ್ದಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಅಲ್ಲದೇ ಕೌಟುಂಬಿಕ ಕಲಹಗಳನ್ನು ನಿವಾರಿಸಲು ಹೆಣಗುತ್ತಾನೆ.(ಕೌಟುಂಬಿಕ ಕಲಹ ಇಂದಿನ ನಟ ನಟಿಯರಲ್ಲಿ ಟ್ರೆಂಡಿಯಾಗಿದೆ),ಇನ್ನು ಕ್ರಿಕೆಟ್‌ ಆಟಗಾರರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು, ಉತ್ತಮ ಪ್ರದರ್ಶನ ನೀಡುವ ಒತ್ತಡ ಎದುರಿಸುತ್ತಾರೆ. ಉದ್ಯಮಿಗಳು ಉದ್ಯಮ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಮಾನಸಿಕ ಸಮತೋಲನ ಕಂಡುಕೊಂಡವನು ಡಾ‌.ರಾಜ್ ಕುಮಾರ್ ರಂತೆ ಯಶಸ್ವಿಯಾಗಬಹುದು. ಇಲ್ಲವೇ ಚೈತ್ರದ ಪ್ರೇಮಾಂಜಲಿಯ ರಘುವೀರ್ ನಂತೆ ವಿಫಲರಾಗಬೇಕಾಗುತ್ತದೆ. ಕ್ರಿಕೆಟ್ ನಲ್ಲಿ ಸಫಲತೆಗೆ ವಿರಾಟ್ ಕೊಹ್ಲಿ ಉದಾಹರಣೆಯಾದರೆ(ಪ್ರೇಯಸಿಯನ್ನು ನಿಭಾಯಿಸಿ!) ಸಾಮರ್ಥ್ಯವಿದ್ದು ವಿಫಲರಾದ ವಿನೋದ್ ಕಾಂಬ್ಳಿ ವಿಫಲತೆಗೆ ಉದಾಹರಣೆಯಾಗಿ ನಿಲ್ಲುತ್ತಾರೆ. ಇನ್ನು ಉದ್ಯಮ ರಂಗದಲ್ಲಿ ಯಶಸ್ವಿಯಾದವರಿಗಿಂತ ಸೋಲುಂಡವರೇ ಅಧಿಕ. ಆದರೂ ಛಲಬಿಡದೆ ವ್ಯವಹಾರಿಕ ಮರ್ಮವನ್ನು ತಿಳಿದು ಮುನ್ನಡೆದವನು ಅಂಬಾನಿಯೋ, ಟಾಟಾನೋ ಆಗುತ್ತಾನೆ ಇಲ್ಲವೇ ಉದ್ಯಮಕ್ಕೆ ಟಾಟಾ ಹೇಳಬೇಕಾಗುತ್ತದೆ.

ನಾವು ದುಡಿದು ಉಳಿಸುವ ಭರದಲ್ಲಿ ಮನಸ್ಸಿನ ಮೇಲುಂಟಾಗುವ ಒತ್ತಡವನ್ನು ಪ್ರಯತ್ನ ಪೂರ್ವಕವಾಗಿ ದೂರ ತಳ್ಳುತ್ತೇವೆ. ಇಲ್ಲವೇ ಅದನ್ನು ತಲೆಮೇಲೆ ಹೊತ್ತುಕೊಂಡು ಮಾನಸಿಕ ಖಿನ್ನತೆಗೆ ಒಳಗಾಗುತ್ತೇವೆ. ಹಣ ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಅಶಕ್ತವಾದರೂ ಬಹುತೇಕ ಸಮಸ್ಯೆಗಳನ್ನು ಪರಿಹರಿಸಲು ನಮ್ಮನ್ನು ಸಜ್ಜುಗೊಳಿಸುತ್ತದೆ ಎನ್ನುವುದೂ ಅಷ್ಟೇ ನಿಜ.

ನಮ್ಮ ಕೆಲಸಗಳನ್ನು ಸಾಧ್ಯವಾದಷ್ಟು ಯೋಜಿಸಿ, ಯೋಚಿಸಿ ಕೈಗೊಂಡರೆ ಬಹುತೇಕ ಸಮಸ್ಯೆಗಳ ಪರಿಹಾರ ಸಾಧ್ಯ. ಇದು ಸಾಧ್ಯವಾಗುವುದು ನಮ್ಮ ಮನಸ್ಸು ರಿಲ್ಯಾಕ್ಸ್ ಇದ್ದಾಗ ಮಾತ್ರ. ಮನಸ್ಸು ಸ್ವಂತವಾಗಿ, ಸ್ವತಂತ್ರವಾಗಿ ಯೋಚಿಸುತ್ತಿದೆ ಎಂದಾದರೆ ನೀವು ಸಂದರ್ಭವನ್ನು ಎದುರಿಸುವ ಇಚ್ಚಾಶಕ್ತಿಯನ್ನು ಹೊಂದಿದ್ದೀರಾ ಎಂದೇ ಅರ್ಥವಾಗುತ್ತದೆ. ಯಾವುದೋ ಸಂಗೀತ, ಪುಸ್ತಕ, ನಮ್ಮವರ ಸಾಂತ್ವಾನ, ಮಕ್ಕಳ ನಗು ನಮ್ಮ ಖಿನ್ನತೆಯನ್ನು ದೂರ ಓಡಿಸಬಲ್ಲದು. ಎಲ್ಲವೂ ನಮ್ಮ ಕೈಯಲ್ಲಿಯೇ ಇದೆ. ಮನಸ್ಸೂ ಶಾಂತತೆಯನ್ನು ಬಯಸುತ್ತದೆ.

ಮನಸ್ಸೇ ರಿಲ್ಯಾಕ್ಸ್ ಪ್ಲೀಸ್…

nkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಚರ್ಚೆಗೊಳಗಾಗಬೇಕಾದ 500 ಮೀಟರ್ ಆಚೆಗಿನ ನಶೆ

ಮುಂದಿನ ಸುದ್ದಿ »

50 ದಿನಗಳು ಮತ್ತು ಎರಡು ಪ್ರಶ್ನೆಗಳು 

ಸಿನೆಮಾ

 • kattappa

  ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಕರ್ನಾಟಕದಲ್ಲಿ!

  March 18, 2017

  ನ್ಯೂಸ್ ಕನ್ನಡ ವರದಿ(18.03.2017)-ಬೆಂಗಳೂರು: ಬಾಹುಬಲಿ-2 ಚಿತ್ರಕ್ಕೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ನಿಷೇಧ ಮಾಡುವಂತೆ ಭಾರೀ ಒತ್ತಾಯಗಳು ಕೇಳಿ ಬಂದಿದೆ. ತಮಿಳು ನಟ ಸತ್ಯರಾಜ್ ಕಾವೇರಿ ಹೋರಾಟದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಕನ್ನಡಿಗರ ...

  Read More
 • eega

  ಕಿಚ್ಚ ಸುದೀಪ್ ಗೆ ಆಂಧ್ರ ಸರಕಾರದ ನಂದಿ ಪ್ರಶಸ್ತಿ

  March 1, 2017

  ನ್ಯೂಸ್ ಕನ್ನಡ(1-3-2017): 2012-13ನೆ ಸಾಲಿನ “ನಂದಿ ಪ್ರಶಸ್ತಿ”ಯನ್ನು ಆಂಧ್ರಪ್ರದೇಶ ಸರಕಾರ ಘೋಷಿಸಿದ್ದು, “ಅಭಿನಯ ಚಕ್ರವರ್ತಿ” ಕಿಚ್ಚ ಸುದೀಪ್ ಅತ್ಯುತ್ತಮ ಖಳನಟನಾಗಿ ಆಯ್ಕೆಯಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ, ಎಸ್.ಎಸ್. ರಾಜಮೌಳಿ ನಿರ್ದೇಶನದ “ಈಗ” ಚಿತ್ರದ ನಟನೆಗಾಗಿ ಸುದೀಪ್ ಅವರಿಗೆ “ನಂದಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×