Sunday November 5 2017

Follow on us:

Contact Us

ಹೌ ಬ್ರೇವ್ ಶಿ ಈಸ್!

ಬೆಟ್ಟವೇ ಕುಸಿದು ತಲೆ ಮೇಲೆ ಬಿದ್ರೂ ಬಲಮೊಣಗೈ ನೆಲಕ್ಕೂರಿ ಎಡಗೈಯಿಂದ ಬೆಟ್ಟ ಸರಿಸಿ ಈಚೆ ಬಂದೇನು ಅನ್ನುವಷ್ಟು ಆತ್ಮವಿಶ್ವಾಸ. ಎಂತಹಾ ಕಗ್ಗಾಡಲ್ಲೂ ಒಬ್ಬಳೇ ಇರಬಲ್ಲೆ ಎಂಬ ಧೈರ್ಯ. ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುವುದೆಂದರೆ ಎಲ್ಲಿಲ್ಲದ ಖುಶಿ. ಎದುರಿಗಿರುವವರ ಕಣ್ಣಲ್ಲಿ ‘how brave she is!’ ಅನ್ನುವ ಒಂದು ಮೆಚ್ಚುಗೆ ಇರಬೇಕು ಅಷ್ಟೆ.

ಕೆಲವು ಹುಡುಗಿಯರು ಇರುವುದೇ ಹೀಗೆ. ಅಪಾರ ಆತ್ಮವಿಶ್ವಾಸ, ಎಲ್ಲವನ್ನೂ ಎದುರಿಸಬಲ್ಲೆನೆಂಬ ಕಿಚ್ಚು. ಅವರೆಂದೂ ಯಾರ ಮುಂದೆಯೂ ಕಣ್ಣೀರುಗೆರೆದಿರುವುದಿಲ್ಲ, ಬದುಕಿನ ಬಗ್ಗೆ complaint ಗೊಣಗಿರುವುದಿಲ್ಲ. ಕಷ್ಟ ಬಂದಾಗ ‘ನನಗೇ ಏಕೆ ಹೀಗಾಯಿತು’ ಎಂದು ಹಳಹಳಿಸುವುದಿಲ್ಲ. ಹತ್ತು ಮಂದಿಯ ಗುಂಪಿನಲ್ಲಿದ್ದರೂ ಪ್ರತ್ಯೇಕ ಅಸ್ತಿತ್ವ ಕಾಪಾಡಿಕೊಂಡು ಬಂದಿರುತ್ತಾರೆ. ಎಲ್ಲರನ್ನೂ ತನ್ನತ್ತ ಸೆಳೆಯುವ ಒಂದು ಶಕ್ತಿ ಅವರಲ್ಲಿರುತ್ತದೆ. ಯಾವುದೇ ಕಾರಣಕ್ಕೂ ಎದೆಗುಂದಲಾರೆ ಎನ್ನುವ ಹಠ, ಎಲ್ಲಕ್ಕೂ ಮುನ್ನುಗ್ಗುವ ಛಾತಿ, ಒಂದು ಅಭೂತಪೂರ್ವ ನಾಯಕತ್ವ ಗುಣ, ತನ್ನ ನಿರ್ಭಯ ಮಾತಿನಿಂದಲೇ ಎಲ್ಲರ ಗಮನ ಸೆಳೆಯುವ ಕಲೆ ಅವರಿಗೆ ಒಲಿದಿರುತ್ತದೆ, ಅಥವಾ ಅವರ ವ್ಯಕ್ತಿತ್ವವೇ ಹಾಗಿರುತ್ತದೆ. ಅಂತಹ ಹುಡುಗಿಯರನ್ನು ಸಮಾಜ ‘ಬ್ರೇವ್ ಗರ್ಲ್’ ಎಂದೇ ಕರೆಯುತ್ತದೆ.

ಆದರೆ ಹೀಗೆ ದಿಟ್ಟ ಹುಡುಗಿ ಅನ್ನಿಸಿಕೊಳ್ಳುವುದು ಸುಲಭವೇನಲ್ಲ. ತೀರಾ ಕಣ್ಣೀರು ನುಗ್ಗಿ ಬರುವಾಗಲೂ ತುಟಿ ಕಚ್ಚಿ ಸಹಿಸಿಕೊಳ್ಳಬೇಕು, ಅದೆಷ್ಟೇ ನೋವು ತನ್ನನ್ನು ಕೊರೆಯುತ್ತಿದ್ದರೂ ನಗುವಿನ ಮುಖವಾಡ ಹಾಕಿಕೊಳ್ಳಬೇಕು, ಸಮಸ್ಯೆಗಳ ಮಧ್ಯೆ ಬೇಯುತ್ತಿರುವಾಗಲೂ ಏನೂ ನಡೆದೇ ಇಲ್ಲವೆಂಬಂತೆ ನಡೆದುಕೊಳ್ಳಬೇಕು, ಎಲ್ಲಕ್ಕಿಂತ ಮುಖ್ಯವಾಗಿ ನೋವಾದಾಗ ಅಳುವ, ದುಃಖ ತೋಡಿಕೊಳ್ಳುವ ಯಾವ ಸ್ವಾತಂತ್ರ್ಯವೂ ಅವರಿಗಿರುವುದಿಲ್ಲ. ಒಂದರ್ಥದಲ್ಲಿ ಬ್ರೇವ್ ಗರ್ಲ್ ಅನ್ನಿಸಿಕೊಳ್ಳುವ ಭರದಲ್ಲಿ ತನ್ನತನವನ್ನೇ ಕಳೆದುಕೊಂಡು ಬದುಕುತ್ತಾರೆ. ಯಾರದೋ ನೋವು, ಯಾರದೋ ಸಂಕಟಗಳಿಗೆ ಧ್ವನಿಯಾಗುತ್ತಾ ತನ್ನ ಬೇಕು ಬೇಡಗಳಿಗೆಲ್ಲಾ ಮೌನವಾಗಿ ಸಮಾಧಿ ಕಟ್ಟುತ್ತಾರೆ. ಹಾಗಂತ ಅಂತಹವರು ಸದಾ ನಾಟಕವಾಡುತ್ತಿರುತ್ತಾರೆ ಅಂತಲ್ಲ.

ಬಾಲ್ಯದಲ್ಲಿ ಕೇಳಿದ ಯಾವುದೋ ಕಥೆ ಅಥವಾ ನೋಡಿದ ಯಾವುದೋ ಘಟನೆ, ಅಳುವುದು ಹೇಡಿತನ ಎಂಬ ಭಾವನೆ ಬೆಳೆಯುವಂತೆ ಮಾಡಿರುತ್ತದೆ. ಹಲವು ಬಾರಿ ಪೋಷಕರೇ ಎಳೆಯ ಮಕ್ಕಳ ಮನಸ್ಸಿನಲ್ಲಿ ಅಂಥದ್ದೊಂದು ಕಲ್ಪನೆಯ ಬೀಜ ಬಿತ್ತುತ್ತಾರೆ. ಕೆಲವೊಮ್ಮೆ ತಾನು ಹೇಡಿ ಅಂತ ಸಮಾಜ ಮಾತಾಡಿಕೊಳ್ಳಬಾರದು ಅನ್ನುವ ಭಾವವೇ ಬಲಿತು ‘ಬ್ರೇವ್ ಗರ್ಲ್’ ಅನ್ನಿಸಿಕೊಳ್ಳಲೇಬೇಕು ಎಂಬ ಹಂತದವರೆಗೆ ತಂದು ನಿಲ್ಲಿಸುವುದೂ ಇದೆ.

ಹಾಗೆ ಒಮ್ಮೆ ಅನ್ನಿಸಿಕೊಂಡಮೇಲೆ ಶುರುವಾಗುವುತ್ತದೆ ನೋಡಿ ಆ ಪಟ್ಟವನ್ನು ಉಳಿಸಿಕೊಳ್ಳುವ ಹೋರಾಟ. ಅನ್ನಿಸಿದ್ದನ್ನು ಮಾಡಲಾಗದ ಅಸಹಾಯಕತೆ, ತನ್ನ ಭಾವನೆಗಳನ್ನು ಮುಕ್ತವಾಗಿ ತೆರೆದಿಡಲಾರದ ಬಿಗುವು , ಸದಾ ನಗುವಿನ ಮುಖವಾಡ ಧರಿಸಿರಲೇಬೇಕಾದ ಅನಿವಾರ್ಯತೆ, ಎಲ್ಲಾ ನೋವುಗಳನ್ನು ತನ್ನೊಳಗೇ ಹೊತ್ತುಕೊಳ್ಳಬೇಕಾದ ಅನಿವಾರಣೀಯತೆ, ಎಲ್ಲಾ ಅಳುಕುಗಳನ್ನೂ ಮೆಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಮಾನಸಿಕ ಒತ್ತಡವನ್ನು ಸೃಷ್ಟಿಬಿಡಿಸುತ್ತದೆ. ಸದಾ ನಗುವ ಹುಡುಗಿಯ ಮನದ ನವಿರು ಭಾವಗಳು ಗೊತ್ತೇ ಆಗದಂತೆ ಸಾಯತೊಡಗುತ್ತದೆ. ಕೊನೆಗೊಂದು ದಿನ, ಎಲ್ಲಾ ಒತ್ತಡ, ಖಿನ್ನತೆಗಳು ಒಳಗೊಳಗೇ ಕುದಿದು ಸ್ಪೋಟವಾಗುತ್ತದೆ. ಅಲ್ಲಿಗೆ ಆ ಹುಡುಗಿಯ ಸ್ವಾಭಿಮಾನ ಮುಂದೆಂದೂ ಚೇತರಿಸಿಕೊಳ್ಳಲಾಗದಷ್ಟು ಘಾಸಿಗೊಳ್ಳುತ್ತದೆ.

ಹಾಗಂತ ಬ್ರೇವ್ ಗರ್ಲ್ ಆಗಿರುವುದೇ ತಪ್ಪು ಅಂತಲ್ಲ. ಸುಖಾ ಸುಮ್ಮನೆ ಸೋಲೊಪ್ಪುವುದು, ಪ್ರಯತ್ನವನ್ನೇ ಪಡದೆ ಕೈಚೆಲ್ಲುವುದು, ‘ತನ್ನಿಂದಾಗದು’ ಅನ್ನುವ ಭಾವನೆಯನ್ನು ಬೆಳೆಸಿಕೊಳ್ಳುವುದು, ವಿಪರೀತ ಕೀಳರಿಮೆಯಿಂದ ನರಳುವುದು… ಎಲ್ಲಾ ತಪ್ಪೇ. ಬದುಕನ್ನು ಎದುರಿಸುವ ಧೈರ್ಯ, ಸಮಸ್ಯೆಗಳನ್ನು ಪರಿಹರಿಸುವ ಛಾತಿ, ಸ್ವತಂತ್ರ ಯೋಚನಾಕ್ರಮವನ್ನು ಪ್ರತೀ ಹುಡುಗಿಯೂ ಬೆಳೆಸಿಕೊಳ್ಳಲೇಬೇಕು. ಆದರೆ   ಶರಣಾಗತಿಯೊಂದೇ ಬದುಕಲ್ಲ ಅನ್ನುವುದು ಎಷ್ಟು ನಿಜವೋ, ಪ್ರತಿ ಸಂದರ್ಭದಲ್ಲೂ ಗೆಲುವು ನಮ್ಮದಾಗಬೇಕು ಅಂತ ಬಯಸಲೂಬಾರದು ಅನ್ನುವುದೂ ಅಷ್ಟೇ ನಿಜ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಈ 10 ಸಾವಿರ ಮಂದಿ ಒಂದು ಕಾಲಂ ಸುದ್ದಿಗೂ ಅರ್ಹವಾಗುವುದಿಲ್ಲವಲ್ಲ, ಯಾಕೆ?

ಮುಂದಿನ ಸುದ್ದಿ »

ಶತಚಂಡಿ ಯಾಗ ಮಾಡಿಸಿದ ಟಿಪ್ಪು ಸುಲ್ತಾನ್ ಮತಾಂಧನೇ?

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×