Monday January 2 2017

Follow on us:

Contact Us
ganesh kp artical

ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿಯಿಡುತ್ತೇವೆಂದವರು ಮತ್ತು ಕೈಕಟ್ಟಿ ಕುಳಿತವರು

ಗಣೇಶ್ ಕೆ.ಪಿ.

ಗಣೇಶ್ ಕೆ.ಪಿ.

ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿಯಿಡುತ್ತೇವೆ ಎಂಬ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ಮತ್ತು ಆ ಬಳಿಕ ನಡೆದ ಕೆಲವು ವಿದ್ಯಮಾನಗಳು ಜನರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾರ್ತಿಕ್ ರಾಜ್ ಕೊಲೆ ಮತ್ತು ಉಳ್ಳಾಲ ವ್ಯಾಪ್ತಿಯಲ್ಲಿ ನಡೆದ ಚೂರಿ ಇರಿತ ಪ್ರಕರಣಗಳು ಮತ್ತು ಹಲವಾರು ಅಹಿತಕರ ಘಟನೆಗಳು ಜನರ ನೆಮ್ಮದಿಯನ್ನು ಕೆಡಿಸಿದ್ದು, ಇದರ ವಿರುದ್ಧ ಎಷ್ಟು ಪ್ರತಿಭಟನೆಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆರೋಪಿಗಳನ್ನು ಬಂಧಿಸುತ್ತೇವೆಂಬ ಭರವಸೆಗಳು ಬಿಟ್ಟರೆ ಪೊಲೀಸರಿಂದಲೂ ಬೇರೇನೂ ಮಾಡಲು ಸಾಧ್ಯವಾಗಲಿಲ್ಲ. ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೂ ಕಾರಣ ಎಂದೂ ಹೇಳಬಹುದು. ಇದೀಗ ಸಂಸದ ನಳಿನ್ ಕುಮಾರ್ ಕಟೀಲ್ ರ ಆತಂಕಕಾರಿ ಹೇಳಿಕೆಯು ಉಳ್ಳಾಲ ಘಟನೆಗಳ ಬಗೆಗಿನ ಚರ್ಚೆಯನ್ನು ಬೇರೆಡೆಗೆ ತಿರುಗಿಸಿದೆ.

ಪ್ರತಿಭಟನೆಯಲ್ಲಿ ಮಾತನಾಡಿದ್ದ ಸಂಸದ ನಳಿನ್ ಕುಮಾರ್ ಅವರು, ಗೃಹ ಇಲಾಖೆಯನ್ನು ಕೇಳುವ ಹಕ್ಕು ಕೇಂದ್ರಕ್ಕಿದೆ ಎಂದು ಹೇಳಿದ್ದರು. ಹಾಗಿದ್ದರೆ ಈವರೆಗೆ ಉಳ್ಳಾಲದಲ್ಲಿ ನಡೆದಿರುವ ಅಹಿತಕರ ಘಟನೆಗಳ ಬಗ್ಗೆ ಏಕೆ ಗೃಹ ಇಲಾಖೆಗೆ ಸಂಸದರು ಒತ್ತಡವನ್ನು ಹಾಕಲಿಲ್ಲ ಎಂಬ ಜನರ ಪ್ರಶ್ನೆಗೆ ಸಂಸದರು ಉತ್ತರಿಸಲೇ ಬೇಕಿದೆ. ಕೇವಲ ಜನರ ಎದುರಲ್ಲಿ ಮಾತ್ರ ಪೌರುಷ ತೋರಿದರೆ ಸಮಸ್ಯೆಗಳು ಪರಿಹಾರಗೊಳ್ಳುವುದಾದರೂ ಹೇಗೆ? ಸಂಸದರು ಇದೇ ಪ್ರತಿಭಟನೆಯಲ್ಲಿ ಇನ್ನೊಂದು ಮಾತನ್ನು ಹೇಳಿದರು. ಉಳ್ಳಾಲ ಕೇರಳದ ಗಡಿಪ್ರದೇಶವಾಗಿರುವುದರಿಂದಾಗಿ ಕೇರಳದಿಂದ ಬರುತ್ತಿರುವ ಭಯೋತ್ಪಾದಕರು ಉಳ್ಳಾಲದಲ್ಲಿ ಶಾಂತಿಯನ್ನು ಕದಡುತ್ತಿದ್ದಾರೆಂದು. ಆ ಭಯೋತ್ಪಾದಕರನ್ನು ಆಧಾರ ಸಹಿತವಾಗಿ ಬಂಧಿಸಲು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿರುವ ತಾವು ಎಷ್ಟು ಪ್ರಾಮಾಣಿಕವಾದ ಪ್ರಯತ್ನಗಳನ್ನು ಮಾಡಿದ್ದೀರಿ? ರಾಜ್ಯ ಗೃಹ ಇಲಾಖೆಯನ್ನು ನಿಯಂತ್ರಿಸಲು ಕೇಂದ್ರದಿಂದ ಸಾಧ್ಯವಿದೆ ಎಂದು ಹೇಳುವ ನೀವು, ಉಳ್ಳಾಲದಲ್ಲಿರುವ ಸಮಸ್ಯೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರವನ್ನು ಬಳಸಬಹುದಿತ್ತಲ್ಲವೇ? ಅಂದರೆ, ರಾಜ್ಯದ ಗೃಹ ಇಲಾಖೆಯಂತೆ, ಕೇಂದ್ರ ಗೃಹ ಇಲಾಖೆಯೂ ವಿಫಲವಾಗಿದೆ ಎಂದು ಜನರು ತಿಳಿಯಬಹುದಾ? ನಿಮ್ಮ ಜವಾಬ್ದಾರಿ ಕೇವಲ ಒಂದು ಧರ್ಮದ ಹಿತ ಕಾಯುವುದು ಮಾತ್ರವೇ ಎಂಬಂತೆ ವರ್ತಿಸುತ್ತಿರುವುದರಿಂದಾಗಿಯೇ ತಮ್ಮ ರಾಜಧರ್ಮ ಇಂದು ಪ್ರಶ್ನಾರ್ಹವಾಗಿರುವುದು.

ಸಂಸದರ ಹೇಳಿಕೆಗೆ ಪ್ರತಿ ಹೇಳಿಕೆ ನೀಡಿರುವ ಕಾಂಗ್ರೆಸಿಗರು, ನಾವು ಬೆಂಕಿಯನ್ನು ನಂದಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ನಿಮ್ಮ ಕಾಳಜಿ ನಿಜಕ್ಕೂ ಮೆಚ್ಚಲೇ ಬೇಕಾಗಿದೆ. ಆದರೆ, ಉಳ್ಳಾಲದಲ್ಲಿ ಚೂರಿ ಇರಿತಗಳ ಸರಣಿ ಪ್ರಕರಣಗಳು ನಡೆದಾಗ “ಆರೋಪಿಗಳು ಯಾರೇ ಆಗಿದ್ದರೂ ಬಂಧಿಸುತ್ತೇವೆ” ಎಂದು ಹೇಳಿ ಆ ಬಳಿಕ ಮರೆತು ಬಿಟ್ಟ ನಿಮ್ಮನ್ನು ಜನರು ನಂಬುವುದಾದರೂ ಹೇಗೆ? ಯಾರ ತಂಟೆಗೂ ಹೋಗದ ಓರ್ವ ಅಮಾಯಕ ಕಾರ್ತಿಕ್ ರಾಜ್ ರನ್ನು ಅಮಾನುಷವಾಗಿ ಹತ್ಯೆ ಗೈದಿದ್ದಾರೆ, ಕೆಲವರ ಹತ್ಯೆಗೆಗೂ ಪ್ರಯತ್ನಿಸಿದ್ದಾರೆ, ಈ ಆರೋಪಿಗಳನ್ನು ಬಂಧಿಸಲು ಈವರೆಗೆ ನಿಮ್ಮ ಕೈಲಾಗಿಲ್ಲ. ಜಿಲ್ಲೆಯಲ್ಲಿರುವ ಜನಪ್ರತಿನಿಧಿಗಳಾದ ನಿಮ್ಮ ಕೆಲಸ ಕೇವಲ ಹೇಳಿಕೆ ಕೊಡುವುದು ಮಾತ್ರವೇ? ಉರಿಸುತ್ತೇವೆ, ಆರಿಸುತ್ತೇವೆ ಎಂಬ ಡೈಲಾಗ್ ನಿಂದ ಜಿಲ್ಲೆಯ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವೇ? ಕಾರ್ತಿಕ್ ರಾಜ್ ಸಾವಿಗೆ ನ್ಯಾಯಕೇಳಿ ನಡೆದಿದ್ದ ಪ್ರತಿಭಟನೆಯಲ್ಲಿ ಮುಖಂಡರೋರ್ವರು, ನಾವು ಈವರೆಗೆ ಆರೋಪಿಗಳ ಬಂಧನವಾಗುತ್ತದೆ ಎಂದು ಕಾದು ನೋಡಿದ್ದೇವೆ. ನಾವು ಎಷ್ಟು ಪ್ರಮಾಣದಲ್ಲಿ ತಗ್ಗಬೇಕೋ ಅಷ್ಟು ಪ್ರಮಾಣದಲ್ಲಿ ಸರಕಾರಕ್ಕೆ ತಗ್ಗಿ ನಡೆದಿದ್ದೇವೆ. ನಮ್ಮ ಶಾಸಕರಿಗೆ, ಉಸ್ತುವಾರಿ ಸಚಿವರಿಗೆ ಕೊಲೆ ಆರೋಪಿಗಳನ್ನು ಬಂಧಿಸಲು ಶಕ್ತಿ ಇಲ್ಲವೇ?” ಎಂದು ಪ್ರಶ್ನಿಸಿದ್ದಾರೆ. ನಿಜಕ್ಕೂ ಇದು ಓರ್ವ ಜನಸಾಮಾನ್ಯನ ಪ್ರಶ್ನೆಯಾಗಿದೆ. ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈಯವರು ಇಂದು ಮಾತನಾಡುತ್ತಾ, ನಾವು ಬೆಂಕಿಯನ್ನು ಆರಿಸಲು ಸಿದ್ಧರಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಜಿಲ್ಲೆ ಬೆಂಕಿಗೆ ಸುಟ್ಟು ಹೋದ ಬಳಿಕ ನೀವು ಆರಿಸಿದರೇನು ಪ್ರಯೋಜನ? ಸಾಮರ್ಥ್ಯವಿದ್ದರೆ ಜಿಲ್ಲೆಯನ್ನು ಸುಡುವ ಮುನ್ನ ಅಂತಹ ಭಯೋತ್ಪಾದಕರನ್ನು ಬಂಧಿಸಿ ಕಾನೂನಿಗೆ ಒಪ್ಪಿಸಿ. ಉಳ್ಳಾಲ ಎಂಬ ಸಣ್ಣ ವ್ಯಾಪ್ತಿಯಲ್ಲಿ ಕಾರ್ತಿಕ್ ರಾಜ್ ರನ್ನು ಹತ್ಯೆಗೈದ ಆರೋಪಿಗಳನ್ನೇ ನಿಮ್ಮಿಂದ ಬಂಧಿಸಲು ಸಾಧ್ಯವಾಗಿಲ್ಲವೆಂದ ಮೇಲೆ ಜಿಲ್ಲೆಯನ್ನು ಸುಡುತ್ತೇನೆಂದವರನ್ನು ನಿಮ್ಮಿಂದ ನಿಯಂತ್ರಿಸಲು ಸಾಧ್ಯವೇ?  ಇದು ಹಾಸ್ಯಾಸ್ಪದ ಎಂದು ನಿಮಗೇ ಅನ್ನಿಸುತ್ತಿಲ್ಲವೇ?

ಒಟ್ಟಿನಲ್ಲಿ ಕಾರ್ತಿಕ್ ರಾಜ್ ಹತ್ಯೆಯ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಬೇಜಾಬ್ದಾರಿಯ ಹೇಳಿಕೆ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಯ ಹಿಂದೆ ಬಿದ್ದಿರುವ ಕಾಂಗ್ರೆಸಿಗರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದಿದ್ದರೂ, ವರ್ಣರಂಜಿತ ಹೇಳಿಕೆಗಳ ಮೂಲಕ ಜನರ ಕಿವಿಗೆ ಹೂವಿಡಲು ಪ್ರಯತ್ನಿಸುತ್ತಿದ್ದಾರೆನ್ನುವುದು ಸ್ಪಷ್ಟ. ಕಾರ್ತಿಕ್ ರಾಜ್ ಪರವಾದ ಹೋರಾಟದ ಬಗ್ಗೆ ಚರ್ಚೆಯಾಗುತ್ತಿರುವುದಕ್ಕಿಂತಲೂ ಹೆಚ್ಚು ಸಂಸದರ ಹೇಳಿಕೆಯೇ ಚರ್ಚೆಗೊಳಗಾಗುತ್ತಿದೆ. ಕಾಂಗ್ರೆಸ್-ಬಿಜೆಪಿಗರ ದೊಡ್ಡ ದೊಡ್ಡ ಡೈಲಾಗ್ ಗಳ ನಡುವೆ ಕಾರ್ತಿಕ್ ರಾಜ್ ಗೆ ನ್ಯಾಯ ಒದಗಿಸುವ ಹೋರಾಟದ ಧ್ವನಿ ಮಂಕಾಗಿದೆ. ಜನರು ಯಾವುದೇ ಪಕ್ಷದ ಮೇಲೆ ವ್ಯಾಮೋಹ ಬೆಳೆಸಿಕೊಳ್ಳದೇ ಜಿಲ್ಲೆಯನ್ನು ಶಾಂತಿಯುತವಾಗಿರಿಸಲು ರಾಜಕಾರಣಿಗಳಿಗೆ ಹೋರಾಟದ ಬಿಸಿ ತಟ್ಟಿಸುವ ಅಗತ್ಯವಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇನ್ನಾದರೂ ಬಂಟ್ವಾಳ ಕ್ಷೇತ್ರದಿಂದ ಹೊರ ಬಂದು ಜಿಲ್ಲೆಯ ಜನರ ಸಮಸ್ಯೆಗೆ ಸ್ಪಂದಿಸಲಿ.

nkibk

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಆಗಬೇಕಿದೆ ಮನಸ್ಸುಗಳ ಜೀರ್ಣೋದ್ಧಾರ…

ಮುಂದಿನ ಸುದ್ದಿ »

ವಿದ್ಯುತ್ ಹರಿಸುವ ಶಿಕ್ಷಕ ಯಾರನ್ನು ಪ್ರತಿನಿಧಿಸುತ್ತಾನೆ?

ಸಿನೆಮಾ

 • marali

  “ಮರಳಿ ಮನೆಗೆ” ಧ್ವನಿಸುರುಳಿ ಬಿಡುಗಡೆ ಸಂಭ್ರಮ

  February 24, 2017

  ನ್ಯೂಸ್ ಕನ್ನಡ(24-2-2017): ಖ್ಯಾತ ಬರಹಗಾರ, ಚಿಂತಕ, ರಂಗಕರ್ಮಿ ಯೋಗೇಶ್ ಮಾಸ್ಟರ್ ನಿರ್ದೇಶನದ ಚೊಚ್ಚಲ ಚಲನಚಿತ್ರ “ಮರಳಿ ಮನೆಗೆ”ಯ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಯೋಗೇಶ್ ಮಾಸ್ಟರ್ ನಾದಬ್ರಹ್ಮ ಹಂಸಲೇಖ ಅವರು “ದೇಸಿ ಸಂಗೀತದ ...

  Read More
 • bhavana

  ನಟಿ ಭಾವನಾರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದವನ ಬಂಧನ

  February 18, 2017

  ನ್ಯೂಸ್ ಕನ್ನಡ(18-2-2017): ಚಿತ್ರನಟಿ ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಳಂನಲ್ಲಿ ಭಾವನಾ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನಾ ಅವರ ಕಾರು ಚಾಲಕನಾಗಿದ್ದ ...

  Read More
 • Marali Manege

  ಸೆನ್ಸಾರ್ ಮಂಡಳಿಯವರನ್ನೂ ಕಣ್ಣೀರು ಹಾಕಿಸಿದ ಚಿತ್ರ ಬಿಡುಗಡೆಗೆ ಸಿದ್ಧ

  February 16, 2017

  ಯೋಗೇಶ್ ಮಾಸ್ಟರ್ ನಿರ್ದೇಶನದ ಚಿತ್ರ ಸಂಘಪರಿವಾರ-ಪ್ರಗತಿಪರರ ಅಭಿಪ್ರಾಯವನ್ನೂ ಬದಲಿಸಬಹುದಂತೆ ನ್ಯೂಸ್ ಕನ್ನಡ ವರದಿ(16.02.2017)-ಮಂಗಳೂರು: ಯೋಗೇಶ್ ಮಾಸ್ಟರ್ ಅವರು ನಿರ್ದೇಶಿಸಿರುವ ‘ಮರಳಿ ಮನೆಗೆ’ ಕನ್ನಡ ಚಿತ್ರವು ಇದೀಗ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ನಾಯಕರ ವೈಭವೀಕರಣದ ಚಿತ್ರಗಳನ್ನೇ ನೋಡಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×