Monday October 2 2017

Follow on us:

Contact Us

ಭಾರತದ ಸ್ವಾತಂತ್ರ್ಯ ಶಿಲ್ಪಿ ಮಹಾತ್ಮ ಗಾಂಧೀಜಿ…

ಭಾರತದ ಸ್ವಾತಂತ್ರ್ಯ ಶಿಲ್ಪಿ, ಅಹಿಂಸಾತ್ಮಕ ಕ್ರಾಂತಿಯಿಂದ ಬ್ರಿಟಿಷರ ಚಕ್ರಾದಿ ಪತ್ಯವನ್ನು ಭಾರತದಲ್ಲಿ ಕೊನೆಗೊಳಿಸಿದ ಕಾರಣ ಪುರುಷ, ತನ್ನ ಇಡೀ ಬಾಳನ್ನು ಸತ್ಯಶೋಧನೆಗಾಗಿ ಮುಡಿಪಿಟ್ಟ ಮಹಾತ್ಮ, ಹಲವಾರು ಶತಮಾನಗಳಿಂದ ನಿಸ್ಸತ್ತ್ವಯತವೂ ನಿರ್ವಿರ್ಯವೂ ವಿವಕ್ತವೂ ಆಗಿ ಪರಿಣಮಿಸಿದ್ದ ಭಾರತೀಯ ಸಮಾಜವನ್ನು ಕ್ರಾಂತಿಕಾರಿ ಪರಿವರ್ತನೆಗಳಿಗೆ ಒಳಪಡಿಸಿದ ದ್ರಷ್ಟಾರ. ಇವರೆ ಮೋಹನ್ ದಾಸ್ ಕರಮ್ಚಂದ ಗಾಂಧಿ.

ಗಾಂಧೀಜಿಯವರು ೧೮೬೯ ಅಕ್ಟೋಬರ್ ರಂದು, ಕಾಠಿಯಾವಾಡದ ಪೋರ್ಬಂದರಿನಲ್ಲಿ, ತಂದೆ ಕರಮ್ಚಂದ ಗಾಂಧೀ ರಾಜಕೋಟೆಯಲ್ಲೂ ವಾಂಕನೀರಿನಲ್ಲೂ ದಿವಾನರಾಗಿದ್ದರು. ಗಾಂಧಿಯವರ ತಾಯಿ ಪುತಲಿಬಾಯಿ. ತಂದೆ ಸ್ವಾಮಿಬಕ್ತಿ, ಸತ್ಯನಿಷ್ಠ, ಧೈರ್ಯಶಾಲಿ, ಉದಾರಿ, ತಾಯಿ ಧರ್ಮಶ್ರದ್ಧೆ ಅನುಪಮವಾದ್ದು, ಗಾಂಧಿಯವರು ತಾಯಿಯಿಂದ ಬಹಳಮಟ್ಟಿಗೆ ಪ್ರಭಾವಿತರಾಗಿದ್ದರು.

ಗಾಂಧಿಯವರ ವಿದ್ಯಾಭ್ಯಾಸ ಪೋರ್ಬಂದರ್ ಮತ್ತು ರಾಜಕೋಟೆಗಳಲ್ಲಿ ನಡೆಯಿತು. ಶಾಲೆಯಲ್ಲಿ ಅವರು ಸಾಮಾನ್ಯ ವಿದ್ಯಾರ್ಥಿಯಾಗಿದ್ದರು. ಎಲ್ಲ ಬಾಲಕರಂತೆ ಅವರೂ ಕೆಟ್ಟ ಸಹವಾಸ ಸೇರಿ ಹೊಗೆ ಸೇದಿದರು, ಕಳ್ಳತನವನ್ನೂ ಮಾಡಿದರು, ಮಾಂಸ ಕೂಡ ತಿಂದರು. ಆದರೆ ಇವು ಮಾಡಬಾರದ ಕೃತ್ಯಗಳೆಂದು ಬಹಳ ಬೇಗ ಅರಿತುಕೊಂಡು, ಪಶ್ಚಾತಾಪಪಟ್ಟು ಇವನ್ನು ತ್ಯಜಿಸಿದರು.

ಗಾಂಧಿಯವರು ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ಹದಿಮೂರನೆಯ ವಯಸ್ಸಿನಲ್ಲಿ ಕಸ್ತೂರ ಬಾ ಬಂದಿಗೆ ಅವರ ವಿವಾಹವಾಯಿತು. ಉತ್ತರೋತ್ತರದಲ್ಲಿ ಅವರಿಗೆ ನಾಲ್ವರು ಗಂಡು ಮಕ್ಕಳಾದರು. ಚಿಕ್ಕಂದಿನಲ್ಲಿ ಗಾಂಧಿಯವರ ಮೇಲೆ ಪ್ರಭಾವ ಬೀರಿದ ಎರಡು ಕಥೆಗಳಲ್ಲಿ ಒಂದು, ಕಣ್ಣಿಲ್ಲದ ತಂದೆ ತಾಯಿಯರನ್ನು ಹೆಗಲ ಮೇಲೆ ಕೂಡಿಸಿಕೊಂಡು ಕಾಶಿಯಾತ್ರೆ ಹೋದ ಶ್ರವಣನ ಕಥೆ, ಇನ್ನೊಂದು ಸತ್ಯಕ್ಕಾಗಿ ತನ್ನ ಸಂಪತ್ತು, ಹೆಂಡತಿ, ಮಗ, ಸರ್ವಸ್ವವನ್ನೂ ತ್ಯಾಗ ಮಾಡಿದ ಹರಿಶ್ಚಂದ್ರನ ಕಥೆ.

೧೮೮೭ರಲ್ಲಿ ಮೆಟ್ರಿಕ್ ಮುಗಿಸಿದ ಮೇಲೆ ಭಾವನಗರದ ಕಾಲೇಜನನ್ನು ಗಾಂಧಿ ಸೇರಿದವರಾದರೂ ಅವರಿಗೆ ಓದು ಒಗ್ಗಲಿಲ್ಲ. ಗಾಂಧಿಜಿ ಇಂಗ್ಲೇಂಡಿಗೆ ಹೋಗಿ ಬ್ಯಾರಿಸ್ಟರ ಆಗಿ ಬರಬೇಕು ಎಂಬ ಸಲಹೆ ಬಂತು. ಬಹಳ ಯೋಚಿಸಿ ತಾಯಿ ಒಪ್ಪಿದರು. ಅವರ ತಂದೆ ಅಷ್ಟು ಹೋತ್ತಿಗಾಗಲೇ ಕಾಲವಾಗಿದ್ದರು. ಇಂಗ್ಲೇಂಡಿನಲ್ಲಿರುವಾಗ ಮದ್ಯ, ಮಾಂಸಗಳನ್ನು ಸೇವಿಸುವುದಿಲ್ಲ, ಎಲ್ಲ ಸ್ತ್ರೀಯರನ್ನೂ ತಾಯಿಯಂತೆ ಕಾಣುತ್ತೇನೆ ಎಂದು ತಾಯಿಗೆ ಮಾತು ಕೊಟ್ಟು ಗಾಂಧಿಯವರು ಇಂಗ್ಲೇಂಡಿಗೆ ಪ್ರಯಾಣ ಬೆಳೆಸಿದರು. ತಾಯಿಗೆ ಕೊಟ್ಟ ವಚನವನ್ನು ಮೀರಲಿಲ್ಲ. ೧೮೯೦ರಲ್ಲಿ ಬ್ಯಾರಿಸ್ಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಭಾರತಕ್ಕೆ ಮರಳಿ, ವಕೀಲ ವೃತ್ತಿ ಆರಂಭಿಸಿದರು೧೮೯೩ರಲ್ಲಿ ದಕ್ಷಿಣ ಆಫ್ರಿಕದಲ್ಲಿದ್ದ ಸಿರಿವಂತ ಭಾರತೀಯ ವರ್ತಕ ಅಬ್ದುಲ್ಲಾ ಸೇಠನ ಪರ ವಕಾಲತ್ತು ವಹಿಸಲು ತೆರೆಳಿದರು. ದಕ್ಷಿಣ ಆಫ್ರಿಕ ಗಾಂಧಿಯವರ ಜೀವನದ ದಿಸೆಯನ್ನೇ ಬದಲಾಯಿಸಿತು.

ದಕ್ಷಿಣ ಆಫ್ರಿಕದಲ್ಲಿ ಭಾರತೀಯರನ್ನೂ ಇತರ ವರ್ಣಿಯರನ್ನೂ ಬಿಳಿಯರು ತುಂಬ ತಿರಸ್ಕಾರದಿಂದ ಕಾಣುತ್ತಿದ್ದರು. ಅವರು ಮನುಷ್ಯರೇ ಅಲ್ಲ ಎನ್ನುವಂತೆ ನಡೆಸಿಕೊಳ್ಳುತ್ತಿದ್ದರು. ಗಾಂಧಿಜಿಯವರು ಅಹಿಂಸಾಯುತವಾಗಿ ಅದನ್ನು ಮಾರ್ಪಡಿಸುವ ಪ್ರಯತ್ನವೇ ಸತ್ಯಾಗ್ರಹ. ಅಲ್ಲಿನ ಭಾರತೀಯರು ಗಾಂಧಿಜಿಯ ನಾಯಕತ್ವದಲ್ಲಿ ಒಂದಾದರು. ನೆಟಾಲ್ ಭಾರತೀಯ ಕಾಂಗ್ರೆಸ್ ಎಂಬ ಸಂಸ್ಥೆ ಜನ್ಮತಾಳಿತು. ಗಾಂಧಿಜಿ ದಕ್ಷಿಣ ಆಫ್ರಿಕದಲ್ಲೇ ಸೆರೆಮನೆಯ ವಾಸವನ್ನು ಅನುಭವಿಸ ಬೇಕಾಯಿತು. ಪ್ರಧಾನಿ ಸ್ಮಟ್ಸರ ಸರಕಾರ ಗಾಂಧಿಜಿಯೊಡನೆ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಅಲ್ಲದೆ ಭಾರತಿಯರ ಕಷ್ಟನಷ್ಟಗಳನ್ನು ವಿಚಾರಮಾಡಲು ಒಂದು ನಿಯೋಗವನ್ನು ಅದು ನೇಮಿಸಬೇಕಾಯಿತು. ದಕ್ಷಿಣ ಆಫ್ರಿಕದಲ್ಲಿ ಗಾಂಧಿಜಿ ತಮ್ಮ ಜೀವನ್ನೊಂದು ಪ್ರಯೋಗ ಶಾಲೆಯಾಗಿ ಮಾಡಿದರು.

ಇಪ್ಪತ್ತೊಂದು ವರ್ಷಗಳ ಕಾಲ ದಕ್ಷಿಣ ಆಫ್ರಿಕಾದಲ್ಲಿದ್ದು ೧೯೧೪ರ ಜುಲೈ ಒಂದರಂದು ಗಾಂಧಿಜಿ ಭಾರತಕ್ಕೆ ಹೊರಟರು. ಗಾಂಧೀಜಿಯ ಜೀವನದ ಒಂದು ಮಹತ್ತರ ಅಧ್ಯಾಯ ಮುಗಿದು ಇನ್ನೊಂದು ಆರಂಭವಾಯಿತು. ಭಾರತದ ಬಂಧವಿಮೋಚನೆಯ ಕಾರ್ಯಕ್ಕಾಗಿ ಅವರು ಕಂಕಣ ತೊಟ್ಟರು.

ಭಾರತದ ಹಳ್ಳಿ ಹಳ್ಳಿಯನ್ನೂ ಸುತ್ತಿದರು. ಪರಿಸ್ಥಿತಿಯ ಪರಿಚಯ ಪಡೆಯಲು, ಕೆಲಸವಿಲ್ಲದ ಕೋಟಿಗಟ್ಟಲೆ ಜನರಿಗೆ ಉದ್ಯೋಗ ದೊರಕಿಸಲು ಗ್ರಾಮ ಕೈಗಾರಿಕೆಗಳ, ಗ್ರಾಮಗಳ ಅಭಿವೃದ್ಧಿಯ ಕಾರ್ಯಕ್ರಮ ಸೂಚಿಸಿದರು. ಸ್ವಾತಂತ್ರ್ಯ ಸಮಸ ಸಾರಲು ಗಾಂಧಿಜಿ ಅಹಮದಾಬಾದಿನ ಹತ್ತಿರ ಸಬರಮತಿ ದಂಡೆಯ ಮೇಲೆ ಸತ್ಯಾಗ್ರಹ ಆಶ್ರಮವನ್ನು ತೆರೆದರು. ಗಾಂಧೀಜಿಯವರ ಪ್ರಯತ್ನದಿಂದಾಗಿ, ಅವರ ಉಪವಾಸ ವ್ರತದ ಫಲವಾಗಿ ಕೆಲವೊಂದು ಹಿಂದೂ ದೇವಾಲಯಗಳಲ್ಲೂ ಹರಿಜನರಿಗೆ ಪ್ರವೇಶ ದೊರಕಿತು. ಕೆರೆ ಬಾವಿಗಳ ನೀರು ಹರಿಜನರಿಗೂ sಸಿಗುವಂತಾಯಿತು. ಸಹಪಂಕ್ತಿ ಭೋಜನ ಕೂಟಗಳು ನಡೆದವು.

ಗಾಂಧಿಜಿ ಯಾವಾಗಲೂ ರೈಲುಗಾಡಿಯ ಮೂರನೆಯ ಡಬ್ಬಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಒಮ್ಮೆ ಒಬ್ಬರು, “ಮೂರನೇ ಡಬ್ಬಿಯಲ್ಲೇ ಯಾಕೆ?” ಎಂದು ಕೇಳಿದಾಗ,  “ನಾಲ್ಕನೇ ಡಬ್ಬಿಯಿಲ್ಲ, ಅದಕ್ಕೆಎಂದು ಹೇಳಿ ನಕ್ಕರು. ರಾಜಕೀಯ ರಂಗವನ್ನು ಗಾಂಧೀಜಿ ಪ್ರವೇಶಿಸಿದರು. ಅವರ ಗುರಿ ಭಾರತದ ಸ್ವಾತಂತ್ರ್ಯ, ಬ್ರಿಟಿಷ್ ಸರಕಾರದ ವಿರುದ್ಧ ಕಾಯಿದೆ ಭಂಗ, ಅಸಹಕಾರ, ಸತ್ಯಾಗ್ರಹ ಮೊದಲಾದ ಚಳುವಳಿಗಳನ್ನು ದೇಶದಾದ್ಯಂತ ನಡೆಸಿದರು. ದೇಶಕ್ಕೆ ದೇಶವೇ ಅವರನ್ನು ಹಿಂಬಾಲಿಸಿತು. ಅವರನ್ನುಮಹಾತ್ಮಎಂದು ಕರೆಯಿತು. ೧೯೨೨ ರಲ್ಲಿ ಗಾಂಧಿಜಿಗೆ ಆರು ವರ್ಷಗಳ ಕಠಿಣ ಶಿಕ್ಷೆಯಾಯಿತು.

೧೯೩೦ರಲ್ಲಿ ಆರಂಭವಾಯಿತು ಉಪ್ಪಿನ ಸತ್ಯಾಗ್ರಹ. ಆಂಗ್ಲ ಸರಕಾರ ಉಪ್ಪಿನ ಮೇಲೆ ಕರ ವಸೂಲು ಮಾಡುತ್ತಿತ್ತು. ಗಾಂಧೀಜಿ ಉಪ್ಪನ್ನು ತಾವೇ ಸ್ವತಃ ತಯಾರಿಸಲು ಹೊರಟು. ಕಾನೂನನ್ನು ಮುರಿದರು. ಭಾರತದ ಸ್ವಾತಂತ್ರ್ಯವನ್ನೇ ಗುರಿಯಾಗಿ ಇಟ್ಟುಕೊಂಡಿದ್ದ ಸಂಸ್ಥೆ ಭಾರತ ರಾಷ್ಟ್ರೀಯ ಕಾಂಗ್ರೆಸ್. ಕಾಂಗ್ರೆಸ್ಸಿಗೆ ಹೊಸದೊಂದು ಚೇತನವನ್ನು ತಂದು ಕೊಟ್ಟರು ಗಾಂಧಿಜಿ. ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸಿನ ಅಧಿವೇಶನಕ್ಕೆ ಗಾಂಧಿಜಿಯವರನ್ನೇ ಅಧ್ಯಕ್ಷರನ್ನಾಗಿ ಆರಿಸಿದರು.

ಗಾಂಧೀಜಿಯವರಿಂದ ಸ್ವದೇಶಿ ಚಳುವಳಿ ಪ್ರಾರಂಭವಾಯಿತು. ಜನ ಖಾದಿ ತೊಟ್ಟರು. ವಿದೇಶಿ ಉಡುಪುಗಳು ಅಗ್ನಿಗಾಹುತಿಯಾದುವು೧೯೪೨ರಲ್ಲಿ ಸಭೆ ಸೇರಿದ ಅಖಿಲ ಭಾರತ ಕಾಂಗ್ರೆಸ್ಸಿನಲ್ಲಿ ಗಾಂಧಿಜಿನಾವು ದಾಸ್ಯದಲ್ಲಿ ಬದುಕುವುದು ಇನ್ನು ಸಾಕು. ಮಾಡಿರಿ ಇಲ್ಲವೆ ಮಡಿಯಿರಿ ಬ್ರಿಟಿಷರೇ ಭಾರತದಿಂದ ಹೊರಡಲಿಎಂದು ಸಂದೇಶವಿತ್ತರು. ಕಾಂಗ್ರೆಸ್ ಸಂಸ್ಥೆ ಶಾಸನ ಸಮ್ಮತವಲ್ಲವೆಂದು ಸರಕಾರ ಸಾರಿತು. ಆದರೆಭಾರತದಿಂದ ಹೊರಡಿಚಳುವಳಿ ದೇಶದ ಮೂಲೆ ಮೂಲೆಗೂ ಹಬ್ಬಿತು. ಇಡೀ ಜನತೆ ಕಾರ್ಯೋನ್ಮುಖವಾಯಿತು. ಇನ್ನು ಭಾರತವನ್ನು ಆಳುವುದು ಅಸಾಧ್ಯವೆಂದು ಬ್ರಿಟಿಷ ಸರಕಾರ ಮನಗಂಡು, ಭಾರತದ ನಾಯಕರೊಂದಿಗೆ ಮಾತುಕತೆ ಪ್ರಾರಂಭಿಸಿತು.

ಭಾರತದ ವಿಭಜನೆಗೆ ಗಾಂಧಿಜಿ ಮೊದಲು ಒಪ್ಪದಿದ್ದರೂ ಪರಿಸ್ಥಿತಿಯ ಕಾರಣದಿಂದ ಸಮ್ಮತಿಸಬೇಕಾಯಿತು. ಭಾರತ, ಪಾಕಿಸ್ತಾನ ಎಂದು ಎರಡು ರಾಷ್ಟ್ರಗಳಾದವು. ಗಾಂಧೀಜಿ ಆರಂಭೀಸಿದ ಸತ್ಯಾಗ್ರಹದಿಂದ, ಸ್ವದೇಶಿ ಚಳುವಳಿಯಿಂದ, ಹೋರಾಟದಿಂದ ಭಾರತ ೧೯೪೭ ಅಗಸ್ಟ್ ಹದಿನಯದರಂದು ಸ್ವಾತಂತ್ರವಾಯಿತು. ಭಾರತ ಸ್ವತಂತ್ರವಾದ ಮೇಲೆ ಗಾಂಧಿಜಿ ಬಹಳದಿನ ಬದುಕಲಿಲ್ಲ. ೧೯೪೮ ಜನೆವರಿ ೩೦, ದಿನದ ಪ್ರಾರ್ಥನೆಗಾಗಿ ಗಾಂಧಿಜಿ ಸಂಜೆ ಹೊರಟರು. ಪ್ರಾರ್ಥನಾ ಸ್ಥಳಕ್ಕೆ ಸ್ವಲ್ಪ ದೂರದಲ್ಲಿದ್ದಂತೆ ಗೋಡ್ಸೆ ಎಂಬ ಹತ್ಯಾಕಾರ ನೊಬ್ಬನ ಗುಂಡು ಹಾರಿತು. “ರಾಮ್, ರಾಮ್ಎನ್ನುತ್ತ ಗಾಂಧಿಜಿ ಅಲ್ಲಿಯೇ ಕುಸಿದರು.

ಅವರು ತಮಗಾಗಿ ಏನನ್ನೂ ಬಯಸಲಿಲ್ಲ. ತಾವು ಸ್ವಾತಂತ್ರ್ಯ ತಂದು ಕೊಟ್ಟ ದೇಶದಲ್ಲಿ ಯಾವ ಅಧಿಕಾರ ಪದವಿಗಳನ್ನೂ ಅಪೇಕ್ಷಿಸಲಿಲ್ಲ. ಸತ್ಯಕ್ಕಾಗಿ, ಅಹಿಂಸೆಗಾಗಿ, ಇತರರ ಸೇವೆಗಾಗಿ ಬದುಕಿದರು, ಪ್ರತಿಯೊಬ್ಬರ ಕಣ್ಣಿರನ್ನೂ ಒರೆಸುವುದಕ್ಕಾಗಿ ಜೀವಿಸಿದರು. ಎರಡು ಮಹಾಯುದ್ಧಗಳು, ಸಾಮ್ರಾಜ್ಯಶಾಹಿಗಳ ಸ್ವಾರ್ಥ ಇವುಗಳಿಂದ ಮನುಷ್ಯನ ಪಾಶವೀ ಸ್ವಭಾವವೇ ಮರೆಯುತ್ತಿದ್ದ ಕಾಲದಲ್ಲಿ ಜಗತ್ತಿಗೆ ರಕ್ತ ಸ್ನಾನವಾಗುತ್ತಿದ್ದಾಗ, ಪ್ರೇಮತ್ಯಾಗಗಳ ಸಂದೇಶವನ್ನು ಕೊಟ್ಟು ಸಂದೇಶದ ಜೀವಂತ ಮೂರ್ತಿಯಾಗಿ ಬಾಳಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪ್ರಧಾನಿಯವರೇ… ದಯವಿಟ್ಟು ವಾಸ್ತವಕ್ಕೆ ಮುಖಾಮುಖಿಯಾಗಿ

ಮುಂದಿನ ಸುದ್ದಿ »

ರೋಹಿಂಗ್ಯ: ಇತಿಹಾಸ ಮತ್ತು ವರ್ತಮಾನ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×