Monday May 22 2017

Follow on us:

Contact Us

ಪ್ರಚಾರವೊಂದನ್ನು ಬಿಟ್ಟರೆ ಟ್ರಂಪ್ ಯಾರು?

ನ್ಯೂಸ್ ಕನ್ನಡ ವರದಿ-(22.5.17): ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ಪರಸ್ಪರ ವಿರುದ್ಧವಾದ ಎರಡು ಅಭಿಪ್ರಾಯಗಳು ಇವೆ. ಅದು ಎರಡು ಕೂಡಾ ತಪ್ಪಾಗಿದೆ. ರಾಜಕೀಯ ಮಾನದಂಡಗಳಿಗೆ ಟ್ರಂಪ್ ಅತೀತರು. ಕಾನೂನಿನ ಆಳ್ವಿಕೆ, ಮಹಿಳೆಯರಿಗೆ, ಭೂಮಿಯ ಮಾನವರ ವಾಸ್ತವ್ಯಕ್ಕೆ ಅವರು ಬೆದರಿಕೆಯಾಗಿದ್ದಾರೆ ಎನ್ನುವುದು ಈ ಅಭಿಪ್ರಾಯಗಳಾಗಿವೆ. ಆದರೆ, ವಾಷಿಂಗ್ಟನ್‍ನ ಅಧಿಕಾರ ಕೇಂದ್ರಗಳಲ್ಲಿರುವ ಪಾಪದ ತೊಟ್ಟಿಯ ಉಚ್ಚಾಟನೆ ಅವರು ನಿಯುಕ್ತರಾಗಿದ್ದಾರೆ. ಈ ದೃಷ್ಟಿಯಲ್ಲಿಯೇ ಟ್ರಂಪ್ ಸೌದಿಅರೇಬಿಯಕ್ಕೆ ಹೋದ ಮೊದಲ ಸಂದರ್ಶನವನ್ನು ಸಮರ್ಥಿಸುವವರಿದ್ದಾರೆ.

ಅವರ ವಿರೋಧಿಗಳು ಐದು ದಿವಸಕ್ಕಿಂತ ಹೆಚ್ಚುಕಾಲ ದೇಶವನ್ನು ಬಿಟ್ಟಿರಲು ಟ್ರಂಪ್‍ಗೆ ಸಾಧ್ಯವೇ ಎಂದು ಕೇಳಿದ್ದರು. ಅಧಿಕಾರ ಏರಿದ ನಾಲ್ಕೇ ತಿಂಗಳಲ್ಲಿ ಅಧ್ಯಕ್ಷ ಟ್ರಂಪ್‍ರನ್ನು ಇಂಪೀಚ್‍ಮೆಂಟ್ ಮಾಡಲಾಗುವುದು ಎನ್ನುವ ಚರ್ಚೆಗಳು ಈಗಲೂ ನ್ಯೂಯಾರ್ಕಿನಲ್ಲಿ ಸಕ್ರಿಯವಾಗಿದೆ. ಮಾತ್ರವಲ್ಲ ವಿದೇಶ ಪ್ರವಾಸದಿಂದ ಅಮೆರಿಕಕ್ಕೆ ಮರಳಲು ಸಾಧ್ಯವೇ ಎಂದು ಕೆಲವರು ಪ್ರಶ್ನಿಸುವವರೆಗೂ ಹೋಗಿದ್ದಾರೆ.  ಸ್ವಲ್ಪ  ದೂರವಿದ್ದರೆ ಅಧಿಕಾರದಿಂದ ಕೆಳಗಿಳಿಸಲ್ಪಡುವೆನೇ ಎನ್ನುವ ಭೀತಿ ಇರುವ ನಾಯಕನಾಗಿ ಕೆಲವರು ಟ್ರಂಪ್‍ರನ್ನು ಪರಿಗಣಿಸಿದ್ದಾರೆ.

ಆದರೆ ಟ್ರಂಪ್‍ರ ಅಭಿಮಾನಿಗಳ ಲೆಕ್ಕದಲ್ಲಿ ಜಾಗತಿಕ ವೇದಿಕೆಯಲ್ಲಿ ಪ್ರಬಲ ಸ್ಥಾನ ಪಡೆಯಲು ಇರುವ ಅವಕಾಶ ಇದು. ಟ್ರಂಪ್‍ರಿಗೆ ಸೌದಿ ಸರಕಾರ ನೀಡಿದ ಅದ್ದೂರಿ ಸ್ವಾಗತ ಅವರಲ್ಲಿ ಸಂತೋಷ ಮೂಡಿಸಿದೆ. ಈಗ ಟ್ರಂಪ್ ತಾನೊಬ್ಬ ಜಾಗತಿಕ ನಾಯಕ ಎಂದು ಸಾಬೀತುಪಡಿಸುವ ಹಂತದಲ್ಲಿದ್ದಾರೆ ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ.  ಆದರೆ ಇತಿಹಾಸದಲ್ಲಿ ಆದ ಎಲ್ಲ ಅಮೆರಿಕ ಅಧ್ಯಕ್ಷರಂತೆ ಟ್ರಂಪ್ ಕೂಡಾ ಆಗಿದ್ದಾರೆನ್ನುವುದು ಒಂದು ವಾಸ್ತವಿಕತೆಯಾಗಿದೆ.

ಆದರೆ ಹಿಂದಿನ ಅಧ್ಯಕ್ಷರುಗಳಂತೆ ಆಂತರಿಕವಾಗಿ ದೊಡ್ಡ ಸಾಧನೆ ಟ್ರಂಪ್‍ರಿಂದ ಸಾಧ್ಯವಾಗಿಲ್ಲ. ಆರೋಗ್ಯ ಸುರಕ್ಷೆ ಯೋಜನೆಯಲ್ಲಿ ಬದಲಾವಣೆ ಮಾಡಲು ಹೋಗಿ ಬಿಲ್ ಕ್ಲಿಂಟನ್ ಕೂಡಾ ಎಡವಿದ್ದರು. ಆದರೆ ಅಧಿಕಾರವಹಿಸಿಕೊಂಡ ನಂತರ ಟ್ರಂಪ್ ಕೈಗೊಂಡ ಕ್ರಮಗಳಲ್ಲಿ ಅವರೊಬ್ಬ ಕ್ರೂರಿಯೆಂದು ಸಾಬೀತಾಗಿಲ್ಲ. ಜೊತೆ ಅವರನ್ನುಮಹಾನ್ ನಾಯಕ ಎನ್ನುವಂತೆಯೂ ಇಲ್ಲ.

ಮಲಯಾಳಂ ಮೂಲ: ಮಾಧ್ಯಮಂ

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಗೋಡ್ಸೆಯ ಪ್ರತಿಮೆ ನಿರ್ಮಿಸುವುದು ನಾಚಿಗೇಡಿನ ವಿಷಯ: ಸಂಜಯ್ ದತ್

ಮುಂದಿನ ಸುದ್ದಿ »

ಕೇಜ್ರಿವಾಲ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಜೇಟ್ಲಿ!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×