Tuesday November 28 2017

Follow on us:

Contact Us

ಮರ್ಯಾದಾ ಹತ್ಯೆಯ ನಡುವೆ ಅಶೋಕನ್ ಎಂಬ ಅಪ್ಪ…!

ಹಿಂದೂ ಹೆಣ್ಮಕ್ಕಳ ಮೇಲೆ ದೃಷ್ಟಿ ಬೀರುವ ಮುಸ್ಲಿಂ ಯುವಕರ ಕಣ್ಣು ಕೀಳಬೇಕು’, ‘ಮುಸ್ಲಿಂ ಯುವಕನನನ್ನು ಮದುವೆಯಾದ ಹಿಂದೂ ಯುವತಿಯನ್ನು ಕೊಂದ ಅಪ್ಪನೇ ಗ್ರೇಟ್’, ‘ಹಿಂದೂ ಹೆಣ್ಮಕ್ಕಳನ್ನು ಮತಾಂತರಿಸಿ ಸಿರಿಯಾಕ್ಕೆ ಕಳುಹಿಸಲಾಗುತ್ತದೆ’, ‘ಲವ್ ಜಿಹಾದ್ ಇದೆ…’ ಎಂಬಿತ್ಯಾದಿ ಮಾತುಗಳಿಗೆ ಭಾರೀ ಪ್ರಚಾರ ಸಿಗುತ್ತಿರುವ ಈ ದಿನಗಳಲ್ಲಿ ತನ್ನ ಮಗಳು ಅಖಿಲಾಳು ಹಾದಿಯಾ ಆದ ಬಳಿಕವೂ ಮತ್ತು ಅದರಲ್ಲಿ ಆಕೆ ಸ್ಥಿರವಾಗಿ ಉಳಿಯುವ ಸರ್ವ ಸೂಚನೆಗಳು ಸಿಕ್ಕ ಬಳಿಕವೂ ಆಕೆಯನ್ನು ಜತನದಿಂದ ಕಾಪಾಡಿದ ಆ ತಂದೆ ಅಶೋಕನ್ ರನ್ನು ನಾವು ಅಭಿನಂದಿಸಬೇಕು.

ಇಸ್ಲಾಮನ್ನು ಇಷ್ಟಪಟ್ಟ ಹೆಣ್ಮಕ್ಕಳನ್ನು ಪಳಗಿಸಿ ಮರಳಿ ಹಿಂದೂ ಧರ್ಮಕ್ಕೆ ಕರೆತರಲೆಂದೇ ಹುಟ್ಟಿಕೊಂಡ ಯೋಗ ಶಿಕ್ಷಣ ಕೇಂದ್ರ ಎಂಬ ಸಂಸ್ಥೆ ಕೇರಳದಲ್ಲಿದೆ. ಹಲವು ಹೆಣ್ಮಕ್ಕಳು ಅಲ್ಲಿ ಹಿಂಸೆ ಅನುಭವಿಸಿದ್ದೂ ಸುದ್ದಿಯಾಗಿದೆ. ಇಂಥ ಸ್ಥಿತಿಯಲ್ಲಿ ಅಶೋಕನ್ ಮೇಲೆ ಇದ್ದಿರಬಹುದಾದ ಒತ್ತಡಗಳು ಏನೇನಿರಬಹುದು? ಮರ್ಯಾದೆಗೇಡು ಹತ್ಯೆ ಈ ದೇಶಕ್ಕೆ ಹೊಸತೂ ಅಲ್ಲ. ಅಲ್ಲದೆ, ಹಾದಿಯಾಳ ಮೇಲೆ ಈ ಪ್ರಯೋಗ ಮಾಡುವುದಕ್ಕೆ ಅಶೋಕನ್ ಗೆ ಸರ್ವ ಅವಕಾಶಗಳೂ ಇದ್ದುವು. ಆದರೂ ಆ ತಂದೆ ಅತ್ಯಂತ ಪ್ರಬುದ್ಧತೆಯಿಂದ ನಡೆದುಕೊಂಡಿದ್ದಾರೆ.

ಹೊರಗಿನ ಯಾವ ಒತ್ತಡಗಳಿಗೂ ಮಣಿಯದೆ ಮಗಳ ಆಯ್ಕೆಯ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ- ಇಚ್ಛಿತವೋ ಅಇಚ್ಛಿತವೋ – ಮನ್ನಣೆ ನೀಡಿದ್ದಾರೆ. ತಂದೆಯ ಉಪಸ್ಥಿತಿಯಲ್ಲೇ ಮಾಧ್ಯಮಗಳ ಮುಂದೆ ಮತ್ತು ನ್ಯಾಯಾಲಯದ ಎದುರು, “ತನ್ನ ಆಯ್ಕೆ ಇಸ್ಲಾಮ್” ಎಂದು ಆ ಹೆಣ್ಣು ಮಗಳು ಹೇಳಿದ್ದರೆ ಅದರಲ್ಲಿ ಆಕೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಿದ ತಂದೆ ಅಶೋಕನ್ ಕಾಣಿಸುತ್ತಾರೆ. ಆದ್ದರಿಂದ ಹಾದಿಯಾಳ ಬಗ್ಗೆ ಮಾತಾಡುವಾಗ ಓರ್ವ ತಂದೆಯಾಗಿ ಅಶೋಕನ್ ರ ಭಾವನೆ ಮತ್ತು ತೊಳಲಾಟವನ್ನೂ ನಾವು ಗಮನದಲ್ಲಿಟ್ಟುಕೊಳ್ಳಬೇಕು. ಅಶೋಕನ್ ವಿಲನ್ ಅಲ್ಲ. ತನ್ನ ಇಚ್ಛೆಗೆ ವಿರುದ್ಧವಾಗಿರುವ ಮಗಳಿಗೆ ಕಾವಲು ನಿಂತ ಅಪ್ಪ. ಅವರಿಗೆ ಒಳಿತಾಗಲಿ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

DOs ಮತ್ತು DONTs ಗಳ ಮಧ್ಯೆ ಅನಾಥ ‘ಅಳು’

ಮುಂದಿನ ಸುದ್ದಿ »

ಅಪ್ಪುಗೆ ಭಾವದ ನುಡಿಗಳ ಅಗತ್ಯ ಮತ್ತು ಧರ್ಮ ಸಂಸದ್…

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×