Wednesday December 28 2016

Follow on us:

Contact Us

ಕಣಿವೆ ರಾಜ್ಯ ಉತ್ತರಕಾಂಡ್ ವಿಧಾನಸಭಾ ಚುನಾವಣೆಗಳು- ಒಂದು ಟಿಪ್ಪಣಿ!

ku-sa-maddhusudhana-nayar1

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

ಬಹುಶಃ ಇಂಡಿಯಾದಂತಹ ವಿಶಾಲವಾದ ಸಂಯುಕ್ತ ರಾಜ್ಯಗಳ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಮಾತ್ರ ಇಂತಹದೊಂದು ನಿರ್ಲಕ್ಷ್ಯವನ್ನು ಕಾಣಬಹುದೇನೊ. ಹೌದು ನಾನು ಹೇಳುತ್ತಿರುವುದು ಉತ್ತರಕಾಂಡದಂತಹ ತೀರಾ ಪುಟ್ಟದಾದ ರಾಜ್ಯವೊಂದರ ರಾಜಕೀಯ ಚಟುವಟಿಕೆಯನ್ನಾಗಲಿ, ಅಲ್ಲಿ ನಡೆಯುವ ಚುನಾವಣೆಯನ್ನಾಗಲಿ ಗಂಭೀರವಾಗಿ ತೆಗೆದುಕೊಳ್ಳದ ನಾವು ನಮ್ಮ ಫೆಡರಲ್ ವ್ಯವಸ್ಥೆಯನ್ನು ನಾಶ ಪಡಿಸುವತ್ತ ನಡೆಯುತ್ತಿದ್ದೇವೇನೊ ಎನಿಸುತ್ತದೆ. ನಾನು ನೋಡಿದಂತೆ ಯಾವ ಮಾಧ್ಯಮಗಳು ಸಹ ಅಲ್ಲಿಯ ನೈಜ ರಾಜಕಾರಣದ ಚಿತ್ರಗಳನ್ನು ನೀಡುವಲ್ಲಿ ಮತ್ತು ಅಲ್ಲಿಯ ಜನತೆಯ ಆಶೋತ್ತರಗಳನ್ನು ಪ್ರತಿನಿಧಿಸುವ ಕಾರ್ಯವನ್ನು ಮಾಡುತ್ತಿಲ್ಲ.

ಎಲ್ಲವೂ ಅಂದುಕೊಂಡ ಹಾಗೆ ಆದರೆ ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಉತ್ತರಕಾಂಡದ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರವಾದ ಹಣಾಹಣಿ ನಡೆಯುವ ಸಾಧ್ಯತೆ ಇದೆ. ಇನ್ನು  ಅಲ್ಲಿನ ವರ್ತಮಾನದ ರಾಜಕೀಯವನ್ನು ವಿಶ್ಲೇಷಿಸಿ ನೋಡುವ ಮುಂಚೆ ಕಳೆದ ಚುನಾವಣೆ ಮತ್ತದರ ನಂತರದ ಬೆಳವಣಿಗೆಗಳನ್ನು ಒಂದಿಷ್ಟು ನೋಡೋಣ:

70 ಸ್ಥಾನಗಳನ್ನು ಹೊಂದಿರುವ ಉತ್ತರಕಾಂಡ್ ರಾಜ್ಯವಿಧಾನಸಭೆಯಲ್ಲಿ ಇರುವುದು ಕೇವಲ 701 ಸ್ಥಾನಗಳು ಮಾತ್ರ.  ಜನವರಿ 2012ರಲ್ಲಿ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆತಿರಲಿಲ್ಲ. ಆಗ 32 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಬಹುಜನ ಪಕ್ಷ, ಉತ್ತರಕಾಂಡ್, ಕ್ರಾಂತಿದಳ ಮತ್ತು ಪಕ್ಷೇತರರ ನೆರವಿನೊಂದಿಗೆ  ಸರಕಾರವನ್ನು ರಚಿಸಿತ್ತು. ಇನ್ನು 31 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಅಧಿಕೃತ ವಿರೋಧಪಕ್ಷದ ಸ್ಥಾನ ಪಡೆಯಬೇಕಾಗಿ ಬಂದಿತ್ತು. ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಹರೀಶ್ ರಾವತ್  ಮುಖ್ಯಮಂತ್ರಿಯಾಗುವ ನಿರೀಕ್ಷೆ ಎಲ್ಲರಲ್ಲೂ ಸಾಮಾನ್ಯವಾಗಿತ್ತು. ಆದರೆ ಚುನಾವಣೋತ್ತರ ಮೈತ್ರಿ ರಚನೆಯಾದ ನಂತರ ಅನಿರೀಕ್ಷಿತವಾಗಿ ಶ್ರೀವಿಜಯ ಬಹುಗುಣರವರು ಮುಖ್ಯಮಂತ್ರಿಯಾಗಿ   ಅಧಿಕಾರ ಸ್ವೀಕರಿಸಿದರು. ಹರೀಶ್ ರಾವತರು ಕೇಂದ್ರಮಂತ್ರಿಮಂಡಲದಲ್ಲಿ ಸಚಿವರಾಗಿಯೇ ಮುಂದುವರೆಯಬೇಕಾಯಿತು. ಆದರೆ ಬಹುಗುಣರವರು  ಗಾದಿಗೇರುತ್ತಿದ್ದಂತೆಯೇ  ಪಕ್ಷದೊಳಗೆ ಸುಪ್ತವಾಗಿ ಆಂತರಿಕ ಭಿನ್ನಮತದ ಅಲೆ ಏಳತೊಡಗಿತು.

ಅಖಂಡ ಉತ್ತರಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಕಾಂಗ್ರೆಸ್ಸಿನ  ಹೆಚ್.ಎನ್.ಬಹುಗುಣರವರ ಪುತ್ರರಾದ ವಿಜಯಬಹುಗುಣ ಜನಸಮುದಾಯದ ನಾಯಕರಾಗಿರಲಿಲ್ಲ, ಮುಖ್ಯಮಂತ್ರಿಯಾದ ನಂತರವು ಪಕ್ಷದ ನಾಯಕರುಗಳ ಮತ್ತು ಜನರ ವಿಶ್ವಾಸಗಳಿಸುವಲ್ಲಿ ವಿಫಲರಾಗುತ್ತ ಹೋದರು.  ಅತೃಪ್ತ ಕಾಂಗ್ರೆಸ್ಸಿಗರ ಕೂಗಿಗೆ ಅನುಗುಣವಾಗಿ  ವಿಜಯ ಬಹುಗುಣ ಅಧಿಕಾರ ಕಳೆದುಕೊಂಡು ತಮ್ಮ ಬದ್ಧವೈರಿ ಹರೀಶ್ ರಾವತ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕಾಯಿತು. ಆದರೆ 2014ರಲ್ಲಿ ಕೇಂದ್ರದಲ್ಲಿ ಸ್ಪಷ್ಟ ಬಹುಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬಂದ ನಂತರದ ಮೊದಲ ದಿನದಿಂದಲೇ ಅರುಣಾಚಲ ಪ್ರದೇಶ ಮತ್ತು ಉತ್ತರಕಾಂಡದಂತಹ ಪುಟ್ಟ ರಾಜ್ಯಗಳ ಚುನಾಯಿತ ಸರಕಾರಗಳನ್ನು  ಬೀಳಿಸುವ  ತಂತ್ರಗಾರಿಕೆ ಪ್ರಾರಂಭವಾಯಿತು.  ಕಾಂಗ್ರೆಸಿನ ಒಂಭತ್ತು ಸದಸ್ಯರನ್ನು  ಪಕ್ಷದ ವಿರುದ್ಧ ಬಂಡೇಳುವಂತೆ ಉತ್ತೇಜಿಸಿದ ಬಿಜೆಪಿ ರಾಜ್ಯಪಾಲರ ಮೂಲಕ ಅವರ ಸದಸ್ಯತ್ವವನ್ನು ಅನರ್ಹಗೊಳಿಸುವ ಕೆಲಸಕ್ಕೆ ಕೈ ಹಾಕಿತು. ಆಗ ನಿಜವಾದ ರಾಜಕೀಯದ ಸಂಚುಗಳು ಶುರುವಾದವು. ಈ ನಡುವೆ ಕ್ಲಿಷ್ಟಗೊಂಡ ಪರಿಸ್ಥಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡ ಬಿಜೆಪಿ 356ನೇ ವಿಧಿಯ ಪ್ರಕಾರ ರಾಜ್ಯ ಸರಕಾರವನ್ನು ವಜಾಗೊಳಿಸಿತ್ತು. ಈ ನಡುವೆ ಶಾಸಕರುಗಳಿಗೆ ರಾವತ್ ಹಣದ  ಆಮಿಷ ಒಡ್ಡುತ್ತಿರುವ  ವೀಡಿಯೊಗಳು ಕೂಡ ಹರಿದಾಡಿ ರಾಜಕೀಯ ವಲಯದಲ್ಲಿ ಭಾರೀ ಬಿರುಗಾಳಿಯೇ ಎದ್ದಿತ್ತು.   ನಂತರ ಈ ಪ್ರಕರಣ  ಸುಪ್ರೀಂ ಕೋರ್ಟ್ ಗೆ ಹೋಯಿತು. ಕೇವಲ 27 ಶಾಸಕರನ್ನು ಹೊಂದಿದ ಕಾಂಗ್ರೆಸ್ ಮಿತ್ರ ಪಕ್ಷಗಳ ಸಹಕಾರದಿಂದ ಸದನದಲ್ಲಿ ಬಹುಮತ ಸಾಬೀತು ಪಡಿಸಿ ತೋರಿಸಿತು. ಸುಪ್ರೀಂ ಕೋರ್ಟ್ ಸಹ ಹರೀಶ್ ರಾವತ್ ಸರಕಾರವನ್ನು ಮರುಸ್ಥಾಪಿಸಲು ಆದೇಶಿಸಿ  ಬಿಜೆಪಿಯ ಮುಖಭಂಗಕ್ಕೆ ಕಾರಣವಾಯಿತು.

ಆ ದಿನಗಳಲ್ಲಿ ಹರೀಶ್ ರಾವತ್ ವಿಧಾನಸಭೆಯನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಿ ಜನಾದೇಶ ಪಡೆಯಬೇಕೆಂಬ ಕೂಗು ವ್ಯಾಪಕವಾಗಿ ಕೇಳಿ ಬಂದಿತಾದರು ಅವರು ಹಾಗೆ ಮಾಡಲಿಲ್ಲ. ಹಾಗೆ ಮಾಡಿದ್ದರೆ ಜನತೆಯ ಅನುಕಂಪ ಕಾಂಗ್ರೆಸ್ ಪರವಾಗಿದ್ದು, ಸ್ಪಷ್ಟವಾದ ಬಹುಮತವನ್ನು ಅವರು ಪಡೆಯಬಹುದಿತ್ತು. ಇದೀಗ ಇನ್ನೇನು ಕೆಲ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ  ಎಲ್ಲ ಪಕ್ಷಗಳು ಬಿರುಸಿನ ಚಟುವಟಿಕೆಯಲ್ಲಿ ತೊಡಗಿಕೊಂಡಿವೆ. ಕಳೆದ ಬಾರಿಯಂತೆ ಈ ಬಾರಿಯೂ ಯಾವುದೇ ಪಕ್ಷಕ್ಕೂ ಸ್ಪಷ್ಟ ಜನಾದೇಶ ಸಿಗುವುದು ಕಷ್ಟವೆನ್ನುವುದು ರಾಜಕೀಯ ವೀಕ್ಷಕರ ಅನಿಸಿಕೆಯಾಗಿದೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರಕಾಂಡದ ಒಟ್ಟು 5 ಸ್ಥಾನಗಳಲ್ಲಿ ಬಿಜೆಪಿ ಎಲ್ಲ 5 ಸ್ಥಾನಗಳನ್ನು ಗೆದ್ದಿತ್ತು. ಆ ಗೆಲುವಿನ ಬಲದಿಂದಲೇ ಅದು ರಾಜ್ಯಸರಕಾರವನ್ನು ಉರುಳಿಸುವ ಪ್ರಯತ್ನ ನಡೆಸಿತ್ತು. ಆದರೆ  ಸರಕಾರ ಬೀಳಿಸುವ ಕೆಲಸದಲ್ಲಿ ಅದು ವಿಫಲವಾದ ನಂತರ  ಅಲ್ಲಿ ಬಿಜೆಪಿಯ ಜನಪ್ರಿಯತೆ ಕಡಿಮೆಯಾಗಿದ್ದು, ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಮತ್ತು ಬೇರೆ ರಾಜ್ಯಗಳಲ್ಲಿ ಬಳಸುತ್ತಿರುವಂತೆ ಸರ್ಜಿಕಲ್ ಸ್ಟ್ರೈಕ್, ನೋಟುಬ್ಯಾನ್ ನಂತಹ ವಿಷಯಗಳನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುತ್ತಿದೆ. ಇನ್ನು ಕಾಂಗ್ರೆಸ್, ಬಿಜೆಪಿ ಕೇಂದ್ರ ಸರಕಾರದ ಎರಡೂವರೆ ವರ್ಷಗಳ ಶೂನ್ಯ ಸಾಧನೆಯನ್ನು ಮತ್ತು ಕಳೆದ ವರ್ಷ ತನ್ನ ಸರಕಾರವನ್ನು ಉರುಳಿಸಲು ಅದು ನಡೆಸಿದ   ಕಸರತ್ತುಗಳನ್ನು ಜನರಿಗೆ ವಿವರಿಸುತ್ತ ಸಹಾನುಭೂತಿ ಮತಗಳನ್ನು ಗಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕಳೆದ ವರ್ಷ ರಾವತ್ ಸರಕಾರ ಪುನರ್ ಸ್ಥಾಪನೆಯಾದ ತಕ್ಷಣ ನಡೆದ ಒಂದು ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ 36 ಸ್ಥಾನಗಳು, ಬಿಜೆಪಿಗೆ 29 ಸ್ಥಾನಗಳು ದೊರೆಯುತ್ತವೆ ಎಂದು ಹೇಳಲಾದ ವರದಿಯನ್ನು ಕಾಂಗ್ರೇಸ್ ನಿಜ ಮಾಡಲು ಪ್ರಯತ್ನಿಸುತ್ತಿದೆ. ಈ ನಡುವೆ ಕಳೆದ ಬಾರಿ ಘಟಿಸಿದ ಚುನಾವಣೋತ್ತರ ಮೈತ್ರಿ ಈ ಬಾರಿ ಚುನಾವಣಾ ಪೂರ್ವಮೈತ್ರಿಯನ್ನಾಗಿಸುವ ಪ್ರಯತ್ನವೂ ನಡೆಯುತ್ತಿದ್ದು, ಇದೇನಾದರು ಯಶಸ್ವಿಯಾದರೆ ಬಿಜೆಪಿಗೆ ಅಧಿಕಾರವೆನ್ನುವುದು ಕನಸಾಗಲಿದೆ. ಈ ನಡುವೆ ಉತ್ತರಕಾಂಡದ ಡೆಹ್ರಾಡೂನಿಗೆ ಭೇಟಿ ನೀಡಿ ರ್ಯಾಲಿ ನಡೆಸಿದ ಪ್ರಧಾನಮಂತ್ರಿಯವರು ಮಾಮೂಲಿಯಂತೆ ಸೈನಿಕರ ಬಲಿದಾನ, ಸರ್ಜಿಕಲ್ ಸ್ಟ್ರೈಕ್ ನಂತಹ ವಿಷಯಗಳನ್ನು ಪ್ರಸ್ತಾಪಿಸಿ, ಜನರ ಭಾವನೆಗಳನ್ನು ಮತಗಳನ್ನಾಗಿಸುವ  ಪ್ರಯತ್ನ ನಡೆಸಿದ್ದಾರೆ.

ಒಟ್ಟಿನಲ್ಲಿ ಬೇರೆ ರಾಜ್ಯಗಳಂತೆಯೇ ಉತ್ತರಕಾಂಡಕ್ಕೂ ಅದರದೇ ಆದ ಸ್ಥಳೀಯ ಸಮಸ್ಯೆಗಳು ಸಾವಿರ ಇದ್ದರೂ, ನಮ್ಮ  ರಾಷ್ಟ್ರೀಯ ಪಕ್ಷಗಳು ಅವನ್ನು ಪ್ರಸ್ತಾಪಿಸದೆ, ಉಳಿದೆಲ್ಲ ವಿಚಾರಗಳ ಬಗ್ಗೆ  ಭಾಷಣ ಬಿಗಿಯುತ್ತಿದ್ದಾರೆ. ಇದರ ಜೊತೆಗೆ ಪಕ್ಕದ ಉತ್ತರಪ್ರದೇಶದ  ರಾಜಕಾರಣವೂ  ಸ್ವಲ್ಪ ಮಟ್ಟಿಗೆ ಉತ್ತರಕಾಂಡದ ರಾಜಕೀಯದ ಮೇಲೆ ಪ್ರಭಾವ ಬೀರಲಿದ್ದು ಅದರ ಪರಿಣಾಮಗಳನ್ನು ನೋಡಬೇಕಾಗಿದೆ. ಒಟ್ಟಿನಲ್ಲಿ ಸದ್ಯಕ್ಕೆ ಸಮಬಲವಿರುವಂತೆ ಕಾಣುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿಯ ಕೊನೆಯ ಕ್ಷಣದ ಪ್ರಚಾರದ ವೈಖರಿ ಗೆಲ್ಲುವವರನ್ನು ನಿರ್ಧರಿಸಲಿವೆ.

nkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

50 ದಿನಗಳು ಮತ್ತು ಎರಡು ಪ್ರಶ್ನೆಗಳು 

ಮುಂದಿನ ಸುದ್ದಿ »

ಕಾಂಗ್ರೆಸ್ ಕಾರ್ಯಕರ್ತರಾಗುವುದು ಹೆಮ್ಮೆಯ ವಿಚಾರ: ಬಿ.ಟಿ. ಪ್ರದೀಪ್

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×