Sunday January 28 2018

Follow on us:

Contact Us

ಗೋವಿನ ಜೀವಕ್ಕಿಂತಲೂ ಅಗ್ಗವಾಗುತ್ತಿದೆ ವಿದ್ಯಾರ್ಥಿನಿಯರ ಜೀವನ!

ಭಯದ ವಾತಾವರಣದಲ್ಲಿ ಹೆತ್ತವರು ಹೆಣ್ಣು ಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸುವುದಾದರೂ ಹೇಗೆ?. ಒಂದು ಕಡೆ ಶಾಲಾಡಳಿತದ ಕುರಿತು ಅನುಮಾನ ಇನ್ನೊಂದು ಕಡೆ ಶಿಕ್ಷಕರೇ ವಿದ್ಯಾರ್ಥಿನಿಯರ ಪಾಲಿಗೆ ರಾಕ್ಷಸರಾದ ಉದಾಹರಣೆಗಳು ಮತ್ತೊಂದು ಕಡೆ ದಾರಿಹೋಕರಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗುವ ವಿದ್ಯಾರ್ಥಿನಿಯರು. ರಾಜ್ಯದಲ್ಲಿ ಇವರ ಜೀವಕ್ಕೆ ಜಾನುವಾರುಗಳಷ್ಟೂ ಬೆಲೆಯಿಲ್ಲದಾಗಿದೆ. ಈ ವಿದ್ಯಾರ್ಥಿನಿಯರ ಬದಲಾಗಿ ಗೋವುಗಳು ವಿನಾಕಾರಣ ಕೊಲ್ಲಲ್ಪಟ್ಟಿದ್ದರೆ ಈಗ ರಾಜ್ಯವು ರಣರಂಗವಾಗುತ್ತಿತ್ತು. ಬಂದ್ ಮುಷ್ಕರಗಳು ನಡೆಯುತ್ತಿತ್ತು. ರಾಜಕೀಯ ನಾಯಕರು ಸಂಘಟನಾ ವೀರರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ರಂಪಾಟ ನಡೆಸುತ್ತಿದ್ದರು.

ಆದರೆ ತಮ್ಮ ಮುಂದಿನ ಜೀವನದ ಸುಂದರ ಕನಸನ್ನು ಕಾಣುತ್ತಾ, ತಾನು ಕಲಿತು ಮುಂದೆ ತನ್ನ ತಂದೆ ತಾಯಂದಿರ ಕಷ್ಟವನ್ನು ಪರಿಹರಿಸಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಶಾಲಾ ಕಾಲೇಜುಗಳಿಗೆ ಬರುತ್ತಿರುವ ಅಮಾಯಕ ವಿದ್ಯಾರ್ಥಿನಿಯರು ಜಾನುವಾರುಗಳಿಗಿಂತಲೂ ಕಡೆಯಾಗಿ ಶಾಲಾ ಹಾಸ್ಟೆಲ್’ಗಳಲ್ಲಿಯೂ ನಡು ಬೀದಿಗಳಲ್ಲಿಯೂ ಕೊಲೆಯಾಗುತ್ತಿರುವ ದೃಷ್ಯ ನಿಜಕ್ಕೂ ಕರುಣಾಜನಕವಾಗಿದೆ. ಈ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕಾದ ಸರಕಾರ, ಶಿಕ್ಷಣ ಮಂತ್ರಿಗಳು ತಮಗೆ ಸಂಬಂದಪಟ್ಟ ವಿಷಯವಲ್ಲವೆಂಬಂತೆ ವರ್ತಿಸುತ್ತಿದ್ದಾರೆ.

ಪೋಲಿಸರು ಆರೋಪಿಗಳಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದರೂ ನಮ್ಮ ನ್ಯಾಯವ್ಯವಸ್ಥೆಯು ಸಮರ್ಪಕ ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣ ನೀಡಿ ಆರೋಪಿಗಳಿಗೆ ಕಲವೇ ದಿನಗಳಲ್ಲಿ ಜಾಮೀನಿನ ಭಾಗ್ಯ ನೀಡುತ್ತದೆ. ಅಪರಾಧ ಕೃತ್ಯಗಳಲ್ಲಿ ಒಮ್ಮೆ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದ ಆರೋಪಿಗಳು ಪುನಃ ಇಂತಹ ಅಪರಾಧ ಕೃತ್ಯಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿರುವುದು ನಾವು ಕಾಣುತ್ತಿದ್ದೇವೆ. ಆದುದರಿಂದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನಮ್ಮ ಕಾನೂನಿಗೆ ತಿದ್ದುಪಡಿ ಅತೀ ಅವಶ್ಯಕವಾಗಿದೆ.

ಅತ್ಯಾಚಾರವೆಸಗಿ ಕೊಲೆ ಮಾಡಿದ ವ್ಯಕ್ತಿಯನ್ನು ಸೌದಿ ಅರೇಬಿಯಾದಲ್ಲಿ ಸಾರ್ವಜನಿಕವಾಗಿ ನೇಣು ಹಾಕುತ್ತಾರೆ ಅಥವಾ ಆತನ ಕತ್ತನ್ನು ಕೊಯ್ಯುತ್ತಾರೆ. ಈ ಶಿಕ್ಷೆಯನ್ನು ಜಾರಿ ಮಾಡುವುದಕ್ಕಿಂತ ಮೊದಲು ಮೈಕ್ ಮೂಲಕ ಆತ ಮಾಡಿದ ಅಪರಾಧವನ್ನು ಕೂಗಿ ಹೇಳುತ್ತಾರೆ. ಇದು ಅಲ್ಲಿ ನೋಡಲು ನೆರದವರಲ್ಲಿ ಭಯ ಹಾಗೂ ಜಾಗೃತಿಯನ್ನು ಮೂಡಿಸುವ ಒಂದು ತಂತ್ರದ ಭಾಗವಾಗಿದೆ. ನಾನು ನೋಡಿದ ಮಟ್ಟಿಗೆ ಕಳೆದ ಹದಿನೈದು ವರ್ಷದಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ.

ಇನ್ನು ಇರಾನ್ ಹಾಗೂ ಟರ್ಕಿಯಲ್ಲಿ ಅತ್ಯಾಚಾರಿಯನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ಯಲಾಗುತ್ತದೆ. ಇಲ್ಲಿ ಆತನು ಮಾಡಿದ ತಪ್ಪನ್ನು ನೆರೆದಿರುವವರಿಗೆ ಕೂಗಿ ಹೇಳಲಾಗುತ್ತದೆ. ನಂತರ ನೆರೆದಿರುವ ಸಾರ್ವಜನಿಕರು ದೂರದಿಂದ ಆತನಿಗೆ ಕಲ್ಲನ್ನು ಹೊಡೆಯುವುದರ ಮೂಲಕ ಕೊಂದು ಹಾಕುತ್ತಾರೆ. ಈ ಎರಡೂ ದೇಶದಲ್ಲಿಯೂ ಕೂಡ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ನಡೆಯುವುದು ಬಲು ಅಪರೂಪ.

ಆದರೆ ನಮ್ಮ ರಾಜ್ಯದಲ್ಲಿ ಕಳೆದ ಒಂದೇ ವಾರದಲ್ಲಿ ವಿದ್ಯಾರ್ಥಿನಿಯರ ಎರಡು ಸಂಶಯಾಸ್ಪದ ಸಾವುಗಳು ಹಾಗೂ ಒಂದು ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣವು ನಡೆದಿದ್ದು ಈ ಮೂರು ಪ್ರಕರಣದ ತನಿಖೆಯು ಆಮೆ ಗತಿಯಲ್ಲಿ ಸಾಗುತ್ತಿದೆ. ಝೈಬುನ್ನೀಸಾಳ ಸಾವಿನ ಸುತ್ತ ಶಿಕ್ಷಕ ರವಿಯ ವಿರುದ್ಧ ಆರೋಪ ಕೇಳಿಬಂದರೆ, ರಚನಾ ಸಾವಿನ ಸುತ್ತ ಶಾಲಾಡಳಿತದ ವಿರುದ್ಧ ಅನುಮಾನ ವ್ಯಕ್ತವಾಗುತ್ತಿದೆ.

ಇನ್ನು ಬೀದರ್’ನ ಅಕ್ಕಮಹಾದೇವಿ ಕಾಲೇಜಿನ ವಿದ್ಯಾರ್ಥಿನಿ ಪೂಜಾಳನ್ನು ಸಂಶುದ್ದೀನ್ ಎಂಬ ಪಾತಕಿ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಖಾತ್ರಿಯಾಗಿದೆ. ಈ ಪ್ರಕರಣಗಳಲ್ಲಿ ಪೋಲಿಸರು ಆರೋಪಿಗಳನ್ನು ಕಾಟಾಚಾರಕ್ಕಾಗಿ ಬಂಧಿಸುತ್ತಾರೆ, ಸರಕಾರ ಹಾಗೂ ಜಿಲ್ಲಾಡಳಿತಗಳು ಕೆಲವು ಲಕ್ಷಗಳ ಪರಿಹಾರ ಮೊತ್ತವನ್ನು ವಿದ್ಯಾರ್ಥಿನಿಯರ ಕುಟುಂಬಗಳಿಗೆ ನೀಡುತ್ತಾರೆ, ಆರೋಪಿಗಳು ಕೆಲವೇ ದಿನಗಳಲ್ಲಿ ನ್ಯಾಯಾಲದ ಜಾಮೀನು ಪಡೆದು ಹೊರಬರುತ್ತಾರೆ ಇಲ್ಲಿಗೆ ಈ ಪ್ರಕರಣಗಳು ಮುಚ್ಚಿಹೋಗುತ್ತದೆ.

ಆದರೆ ಈ ಮೇಲಿನ ಮೂರು ಪ್ರಕರಣಗಳು ಹಾಗಾಗಬಾರದು ಇದು ರಾಜ್ಯದಲ್ಲಿ ಎಲ್ಲರಿಗೂ ಒಂದು ಪಾಠವಾಗಬೇಕು. ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು. ಯಾರದೇ ಹಣ ಅಮಿಷ ಒತ್ತಡಕ್ಕೊಳಗಾಗದೇ ತನಿಖೆ ನಡೆಯಲಿ. ಮೂರು ಪ್ರಕರಣದ ತಪ್ಪಿತಸ್ಥರಿಗೆ ಒಂದೇ ದಿನ ಗಲ್ಲು ಶಿಕ್ಷೆಯಾಗಲಿ. ಇವರ ನರಕಯಾತನೆಯಲ್ಲಿ ಸಿಕ್ಕಿ ಸತ್ತು ಹೋದ ಆ ಅಮಾಯಕ ಆತ್ಮಗಳಿಗೆ ಈ ಕಾರಣದಿಂದಾದರೂ ಚಿರಶಾಂತಿ ಸಿಗುವಂತಾಗಲಿ.ಈ ಕಾರಣದಿಂದಾದರೂ ಮುಂದಕ್ಕೆ ಅಮಾಯಕ ವಿದ್ಯಾರ್ಥಿನಿಯರ ಅಮಾನುಷ ಹತ್ಯೆಗೆ ನಮ್ಮ ರಾಜ್ಯದಲ್ಲಿ ಕಡಿವಾಣ ಬೀಳಲಿ.!!!

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ವಿಷದ ಮೂಲವನ್ನು ಹುಡುಕುತ್ತಾ ಕಳೆದ 770 ದಿನಗಳು!

ಮುಂದಿನ ಸುದ್ದಿ »

ಝೈಬುನ್ನಿಸಾ ಬಚ್ಚಿಟ್ಟುಕೊಂಡಿರಬಹುದಾದ ರಹಸ್ಯ ಯಾವುದು?

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×