Sunday October 9 2016

Follow on us:

Contact Us
praveen1

ಪ್ರವೀಣ್ ಪೂಜಾರಿಯ ತಾಯಿಯ ನೋವು ಕೇಳಿದರೆ ನಿಜಕ್ಕೂ ಕರುಳು ಕಿತ್ತು ಬರುತ್ತದೆ

ಗಣೇಶ್ ಕೆ.ಪಿ.

ಗಣೇಶ್ ಕೆ.ಪಿ.

ತಮ್ಮ ಹೊಟ್ಟೆಪಾಡಿಗಾಗಿ ಒಂದಲ್ಲ ಒಂದು ಕೆಲಸಗಳಲ್ಲಿ ತೊಡಗಿಕೊಂಡಿರುವ ಕರಾವಳಿಯ ಜನತೆ ಇಂದು ಹೈನುಗಾರಿಕೆಯನ್ನು ಮಾಡಬೇಕಾದರೆ, ಭಯಪಡುವಂತಹ ಸನ್ನಿವೇಶ ಬಂದೊದಗಿದೆ. ಒಂದು ಕಡೆಯಿಂದ ಹಸುಗಳನ್ನು ಸಾಕಲೆಂದು ಕೊಂಡು ತರಲೂ ಭಯಪಡುವಂತಹ ವಾತಾವರಣ ಕರಾವಳಿಯಲ್ಲಿ ಆವರಿಸಿದೆ. ಇದಕ್ಕೆಲ್ಲ ಮೂಲ ಕಾರಣ ಸಂಘಪರಿವಾರದ ರೌಡಿಸಂ ಮತ್ತು ನಮ್ಮ ಜಿಲ್ಲೆಯಲ್ಲಿ ಅಧಿಕಾರ ಪಡೆದೂ ಸಂಘಪರಿವಾರಕ್ಕೆ ಭಯಪಡುತ್ತಿರುವ ಜನ ಪ್ರತಿನಿಧಿಗಳ ದುಸ್ಥಿತಿ. ಇದಕ್ಕೆ ಬಲಿಯಾಗುವವರು ಮಾತ್ರ ಅಮಾಯಕ ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿಯಂತವರು. ಒಂದು ಕಡೆಯಿಂದ ಚೂರಿಯಿಂದ ಇರಿದು ಇನ್ನೊಂದು ಕಡೆಯಲ್ಲಿ ಪರಿಹಾರ ನೀಡಿ ಮಡುಗಟ್ಟಿದ ರಕ್ತವನ್ನು ತೊಳೆಯುವ ಕಾರ್ಯವನ್ನು ಮಾಡಿ, ಮಡಿದ ಅಮಾಯಕರನ್ನು “ಹಿಂದೂ ವಿರೋಧಿ ಅದಕ್ಕೆ ಕೊಂದೆವು” ಎಂಬ ಸಮರ್ಥನೆಯನ್ನು ನೀಡುವ ಮೂಲಕ ಸಂಘಪರಿವಾರ ಜನರ ಮನಸ್ಸಿನಿಂದ ಯಶಸ್ವಿಯಾಗಿ ಇದನ್ನು ಕಿತ್ತು ಹಾಕಿ ಸಾಚಾ ಅನ್ನಿಸಿಕೊಳ್ಳುತ್ತಿದೆ.

ಕೆಂಜೂರಿನ ಪ್ರವೀಣ್ ಪೂಜಾರಿಯ ತಾಯಿಯ ಮಾತುಗಳನ್ನು ಕರಾವಳಿಯ ಎಲ್ಲಾ ತಾಯಂದಿರು ಸೂಕ್ಷ್ಮವಾಗಿ ಆಲಿಸಲೇ ಬೇಕು. ಯಾಕೆಂದರೆ ನಿಮ್ಮ ಮಕ್ಕಳು ಸುರಕ್ಷಿತರಾಗಿರಬೇಕಾದರೆ, ಈ ಕೋಮುವಾದದ ಕೊಚ್ಚೆಯಲ್ಲಿ ಬಿದ್ದು ದುರಂತ ನೆನಪಾಗಿ ಕಾಡದೇ ಇರಬೇಕಾದರೆ, ಆ ತಾಯಿಯ ಮಾತುಗಳನ್ನು ನೀವು ಆಲಿಸಲೇ ಬೇಕು.

“ನನ್ನ ಮಗನನ್ನು ಬಾಡಿಗೆಗೆಂದು ಕರೆದುಕೊಂಡು ಹೋಗಿದ್ದರು. ಇವರು ಹೇಳೋದು ಒಂದು ಮಾಡುವುದು ಒಂದು. ನನ್ನ ಮಗ ಯಾರಿಗೂ ಅನ್ಯಾಯ ಮಾಡಿದವನು ಅಲ್ಲ. ಎಲ್ಲರಿಗೂ ಉಪಕಾರ ಮಾಡುತ್ತಿದ್ದ. ಕೋಳಿ ಫಾರಂ ಇಟ್ಟಿದ್ದ ಮತ್ತು ಗಾಡಿ ಇಟ್ಟುಕೊಂಡು ಬಾಡಿಗೆಗೆ ಹೋಗಿ ಜೀವನ ನಡೆಸುತ್ತಿದ್ದ. ದನದ ಹೆಸರಲ್ಲಿ ನನ್ನ ಮಗನನ್ನು ಆ ಸಂಘ ಪರಿವಾರದ ರೌಡಿಗಳು ಕೊಂದರು. ನಾನು ಕೂಡ ಸಾಲ ಮಾಡಿಕೊಂಡು ದನ ಸಾಕುತ್ತಿದ್ದೇನೆ. ದನದ ಬಗ್ಗೆ ಅವರಿಗೇನು(ಕೊಂದವರಿಗೆ) ಗೊತ್ತು? ಅವರು ರೌಡಿಗಳು.. “ನಾನು ಬಾಡಿಗೆಗೆ ಬಂದಿದ್ದು ನಾನು ವ್ಯಾಪಾರಿ ಅಲ್ಲ ಬೇಕಾದ್ರೆ ಪೊಲೀಸ್ ಗೆ ಒಪ್ಪಿಸಿ” ಅಂದರೂ ಕೇಳದೆ ಹೊಡೆದರಂತೆ… ಅವರಿಗೆ “ಮನುಷ್ಯರಿಗಿಂತ ದನವೆ ಮುಖ್ಯ ಆಯ್ತಾ?” ಎಲ್ಲಿ ನೋಡಿದ್ರು ಹುಡುಗ ಹುಡುಗಿಯನ್ನು ಕೊಲ್ಲುವುದು ನಡೀತಿದೆ ನಾನೂ ಗಮನಿಸಿದ್ದೀನಿ… ಅವರಿಗೆ ಮನುಷ್ಯತ್ವ ಇಲ್ಲ… ಪ್ರವೀಣ್ ಗೆ ಮದುವೆ ಮಾಡಿಸಲು ಹುಡುಗಿ ಹುಡುಕುತ್ತಿದ್ವಿ, ತಂಗಿ ಮದುವೆ ಮಾಡಿದ್ದ ಸಾಲ ಇನ್ನೂ ತೀರಿಲ್ಲ… ನನ್ನ ಮಗ ಯಾರ ಸಹವಾಸಕ್ಕೆ ಹೋಗದೆ ನಮ್ಮ ಸಂಸಾರ ನೋಡಿಕೊಳ್ಳುತ್ತಿದ್ದ. ನನ್ನ ಕಷ್ಟ ಯಾವ ತಾಯಿಗೂ ಬರುವುದು ಬೇಡ. ದಿನ ಅಳುವುದೆ ಆಗಿದೆ”.

“ನಿಜವಾಗಿ ಕರುಳುಕಿತ್ತು ಬರಬೇಕಾಗಿದ್ದು ಈ ದಾರುಣ ಅನ್ಯಾಯಕ್ಕೆ ಕಣ್ರಿ…” ನಮ್ಮ ದೇಶದ ಗಡಿಯಲ್ಲಿ ಸೈನಿಕರು ಹಗಲು ರಾತ್ರಿ ಕಾಯುತ್ತಾರೆ. ಯಾಕೆಂದರೆ ಹೊರಗಿನ ಶತ್ರುಗಳು ನಮ್ಮ ದೇಶದ ಮೇಲೆ ದಾಳಿ ಮಾಡದಿರಲಿ ಎಂದು. ಆದರೆ, ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರದ ಅಂಗ ಸಂಸ್ಥೆಯಾದ ಸಂಘಪರಿವಾರದ ಗೂಂಡಾಗಳು ದೇಶದ ಅಮಾಯಕರನ್ನು ಕೊಲ್ಲುವ ಮೂಲಕ ಸೈನಿಕರ ಕಾಯುವಿಕೆಗೆ ಅರ್ಥವಿಲ್ಲದಂತೆ ಮಾಡಿದ್ದಾರೆ. ನಿಜಕ್ಕೂ ಪ್ರವೀಣ್ ಪೂಜಾರಿ ತಾಯಿಯ ಮಾತುಗಳನ್ನು ಕೇಳಿದರೆ, ಆತನನ್ನು ಕೊಂದವರನ್ನು ಸಾರ್ವಜನಿಕವಾಗಿ ನೇಣಿಗೇರಿಸುವ ಶಿಕ್ಷೆಯನ್ನು ನ್ಯಾಯಾಲಯ ನೀಡಿದರೂ ಕಡಿಮೆಯೇ. ಆದರೆ, ಬಂಟ್ವಾಳದ ಹರೀಶ್ ಪೂಜಾರಿಯನ್ನು ಕೊಂದವರು ಜಾಮೀನಿನಲ್ಲಿ ಹೊರಬಂದು ನೆಮ್ಮದಿಯಲ್ಲಿದ್ದಾರೆ. ಯಾವುದೇ ಪಶ್ಚಾತಾಪವಿಲ್ಲದೇ ಎದೆಯುಬ್ಬಿಸಿ ನಡೆಯುತ್ತಿದ್ದಾರೆ. ಹರೀಶ್ ಪೂಜಾರಿಗೆ ನ್ಯಾಯ ಸಿಗಬಹುದೇ?  ನಿಜಕ್ಕೂ ಕರುಳು ಕಿತ್ತು ಬರುತ್ತದೆ ಕಣ್ರಿ… ಹರೀಶ್ ಪೂಜಾರಿಯ ಹೆತ್ತವರು ಸಹೋದರಿಯ ಕಂಡು.

ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ ಕರಾವಳಿಯ ದುರಂತ ಉದಾಹರಣೆಯಾಗಿ ಉಳಿದುಕೊಂಡಿದ್ದಾರೆ. ಇಂತಹ ನೋವು ಇನ್ನೊಂದು ಹೆತ್ತವರಿಗೆ ಬರಬಾರದು. ಕರಾವಳಿಯ ಕೋಮುವಾದಿ ಮನಸ್ಥಿತಿಯು ಬದಲಾಗಿ ಕರಾವಳಿ ಶಾಂತಿಗೆ ಹೆಸರಾಗಬೇಕು. ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿಯ ಹೆತ್ತವರಿಗೆ ನೀವೂ ಜೊತೆಯಾಗಿ. ಈ ಅಮಾಯಕರ ಕುಟುಂಬದ ನೋವಿಗೆ ಜೊತೆಯಾಗುವವರು ದಲಿತ ದಮನಿತರ ಸ್ವಾಭಿಮಾನಿ ಜಾಥಾದಲ್ಲಿ ಪಾಳ್ಗೊಳ್ಳಿ ಆ ಮೂಲಕ ಈ ಅನ್ಯಾಯದ ವಿರುದ್ಧ ಧ್ವನಿಯೆತ್ತಿ ಅವರ ಕಣ್ಣೀರಿಗೆ ಅರ್ಥ ಕಲ್ಪಿಸಿ.

ಕರ್ನಾಟಕದ ಇನ್ನೊಂದು ದುರಂತವೇನೆಂದರೆ, ಇಲ್ಲಿರುವ ಬಹುತೇಕ ಟಿವಿ ಮಾಧ್ಯಮಗಳ ಸಂಪಾದಕರುಗಳು ಕೇವಲ ಕಾಗೆ ಹಾರಿಸುವ ಸುದ್ದಿಗಳನ್ನು ನೀಡಲು ಸೀಮಿತವಾಗಿದ್ದಾರೆ. ಸತ್ತ ನಾಯಿಗೆ ಮಾಯಾ ಶಕ್ತಿಯಿತ್ತು, ಅದು ಜನರ ಸಂಕಷ್ಟ ಪರಿಹರಿಸುತ್ತಿತ್ತು! ಅದನ್ನು ಭಾರೀ ವೈಭವೋಪೇತವಾಗಿ ಅಂತ್ಯ ಸಂಸ್ಕಾರ ಮಾಡಲಾಯಿತು. ಕಾರಿನಲ್ಲಿ ಕಾಗೆ ಕುಳಿತುಕೊಂಡಿತು ಇನ್ನು ಸಿಎಂಗೆ ಶನಿ ಕಾಟ. ಬೆಳಗ್ಗೆ ಎದ್ದು ಟಿವಿ ನೋಡಿದರೆ, ಜೋಕರ್ ಭವಿಷ್ಯಕೋರರು… ಇಂತಹ ಕಾರ್ಯಕ್ರಮಗಳನ್ನೇ ಬೆಳಗ್ಗಿಂದ ಸಂಜೆ ವರೆಗೆ ತೋರಿಸುವ ಇವರು, ಕರ್ನಾಟಕದ ದಲಿತ, ದಮನಿತರ ಒಂದೇ ಒಂದು ಪ್ರತಿಭಟನೆಗಳಾಗಲಿ, ಜಾಥಾದ ಸುದ್ದಿಗಳನ್ನಾಗಲಿ ಕೊಡುವಲ್ಲಿ ಬೇಧಭಾವ ತೋರಿಸುತ್ತಿದ್ದಾರೆ. ದಲಿತ ದಮನಿತರ ಕಾರ್ಯಕ್ರಮಕ್ಕೆ ಎಲ್ಲಾ ಚಾನೆಲ್ ಗಳು ಬಂದರೂ, ಪತ್ರಕರ್ತರು ಸುದ್ದಿಗಳನ್ನು ಕಳುಹಿಸಿದರೂ ಅದು ಪ್ರಸಾರವಾಗುತ್ತಿಲ್ಲ. ಇದು, ಒಳಗೊಬ್ಬ ಕೋಮುವಾದಿ ಸಂಪಾದನಿದ್ದಾನೆಯೇ ಎಂಬ ಸಂಶಯವನ್ನು ಹುಟ್ಟುಹಾಕಲು ಕಾರಣವಾಗಿದೆ. ದಲಿತರ ದಮನಿತರ ಸ್ವಾಭಿಮಾನಿ ಚಳುವಳಿ ಅಕ್ಟೋಬರ್ ನಾಲ್ಕರಿಂದ ಆರಂಭವಾಗಿದೆ. (ಇಂದು) ಭಾನುವಾರ ಉಡುಪಿಯಲ್ಲಿ ಜಾಥಾ ನಡೆಯಲಿದೆ. ಈ ಜಾಥಾದಲ್ಲಿ ಹತ್ತು ಜನರು ಸೇರಲಿ, ಹತ್ತು ಸಾವಿರ ಜನರು ಸೇರಲಿ ಕೋಮುವಾದದ ವಿರುದ್ಧ ಇರುವ ಆಕ್ರೋಶ ವ್ಯಕ್ತವಾಗಲಿದೆ.

ನಿಜಕ್ಕೂ ಭಾನುವಾರ(ಅ.9) ತಿಳಿಯಲಿದೆ, ಬರೇ ಕಾಗೆ ಹಾರಿಸುವ ಸಂಪಾದಕರು ಯಾವ್ಯಾವ ಚಾನೆಲ್ ನಲ್ಲಿದ್ದಾರೆಂದು.

nkmgm

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಈಶ್ವರಪ್ಪನವರ ‘ಹಿಂದ’ದ ಹಿಂದಿರುವ ಶಕ್ತಿಗಳು

ಮುಂದಿನ ಸುದ್ದಿ »

ಜರ್ನಲಿಸಂ ಪಾಠವನ್ನು ಹೇಳಿಕೊಟ್ಟ ಸರ್ಜಿಕಲ್ ಸ್ಟ್ರೈಕ್ 

ಸಿನೆಮಾ

 • kattappa

  ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಕರ್ನಾಟಕದಲ್ಲಿ!

  March 18, 2017

  ನ್ಯೂಸ್ ಕನ್ನಡ ವರದಿ(18.03.2017)-ಬೆಂಗಳೂರು: ಬಾಹುಬಲಿ-2 ಚಿತ್ರಕ್ಕೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ನಿಷೇಧ ಮಾಡುವಂತೆ ಭಾರೀ ಒತ್ತಾಯಗಳು ಕೇಳಿ ಬಂದಿದೆ. ತಮಿಳು ನಟ ಸತ್ಯರಾಜ್ ಕಾವೇರಿ ಹೋರಾಟದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಕನ್ನಡಿಗರ ...

  Read More
 • eega

  ಕಿಚ್ಚ ಸುದೀಪ್ ಗೆ ಆಂಧ್ರ ಸರಕಾರದ ನಂದಿ ಪ್ರಶಸ್ತಿ

  March 1, 2017

  ನ್ಯೂಸ್ ಕನ್ನಡ(1-3-2017): 2012-13ನೆ ಸಾಲಿನ “ನಂದಿ ಪ್ರಶಸ್ತಿ”ಯನ್ನು ಆಂಧ್ರಪ್ರದೇಶ ಸರಕಾರ ಘೋಷಿಸಿದ್ದು, “ಅಭಿನಯ ಚಕ್ರವರ್ತಿ” ಕಿಚ್ಚ ಸುದೀಪ್ ಅತ್ಯುತ್ತಮ ಖಳನಟನಾಗಿ ಆಯ್ಕೆಯಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ, ಎಸ್.ಎಸ್. ರಾಜಮೌಳಿ ನಿರ್ದೇಶನದ “ಈಗ” ಚಿತ್ರದ ನಟನೆಗಾಗಿ ಸುದೀಪ್ ಅವರಿಗೆ “ನಂದಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×