Thursday July 13 2017

Follow on us:

Contact Us

ಭಾರತಮಾತೆಯ ಮಡಿಲು ಮತ್ತು ಪರಶುರಾಮ ಮೆಟ್ಟಿದ ನಾಡಿಗೆ ಬೆಂಕಿ ಹಚ್ಚಲು ತಯಾರಾದ ಬಿಜೆಪಿ ನಾಯಕರು!

ಇವರು ಅಪ್ಪಟ ದೇಶ ಭಕ್ತರು. ಭಾರತದ ಭೂಮಿ ಇವರಿಗೆ ತಾಯಿ ಸಮಾನ. ಭಾರತ್ ಮಾತಾಕಿ ಜೈ ಹೇಳದೇ ಇದ್ದರೆ ಅಂತವರು ತಕ್ಷಣ ಇವರಿಗೆ ದೇಶದ್ರೋಹಿಗಳಾಗುತ್ತಾರೆ. ದೇಶದ ಭೂಮಿ ಇವರಿಗೆ ಪೂಜನೀಯ.ಪ್ರಕೃತಿ ದೇವಸ್ವರೂಪ. ಇವರಿಗೆ ಮನುಷ್ಯ ಸಂಬಧಗಳ ಬಗ್ಗೆ ಹೆಚ್ಚು ಆಸಕ್ತಿಯಿಲ್ಲ. ಯಾರಾದರು ಕೊಲ್ಲಲ್ಪಟ್ಟಾಗ ಇವರು ಸಕ್ಕರೆಯನ್ನು ಮುತ್ತಿಕೊಳ್ಳುವ ಇರುವೆಗಳಂತೆ ಅಲ್ಲಿ ಸೇರಿಕೊಳ್ಳುತ್ತಾರೆ. ಇವರನ್ನು ಬಿಜೆಪಿ ಅಥವಾ ಸಂಘಪರಿವಾರ ಎಂದು ಜನರು ಗುರುತಿಸುತ್ತಾರೆ. ಭಾರತ ಮಾತೆಯ ಮಡಿಲಿಗೆ ಬೆಂಕಿ ಇಡುವುದು ಇವರ ಈಗಿನ ಗುರಿ. ಅದನ್ನರಿತು ಪುಣ್ಯ ಕೋಟಿ ಕಣ್ಣೀರಿಡುತ್ತಿದೆ. ಬೆಂಕಿ ಹೊತ್ತಿದರೆ ತಾನು ಎಲ್ಲಿ ಅಡಗಿಕೊಳ್ಳಲೀ ಎಂದು.

ಪರಶುರಾಮ ಮೆಟ್ಟಿದ ಊರು ಎಂದು ಹಿಂದೂಗಳು ಭಯ ಭಕ್ತಿಯಿಂದ ಪ್ರೀತಿಸುವ ಕರಾವಳಿಗೆ ಬೆಂಕಿ ಕೊಡುವುದಾಗಿ ಇಲ್ಲಿನ ಸಂಸದ ನಳೀನ್ ಕುಮಾರ್ ಕಟೀಲ್ ಬೆದರಿಸುತ್ತಾರೆ. ಆಧ್ಯಾತ್ಮದ ನೆಲೆಬೀಡು ಎಂದು ಗುರುತಿಸಿರುವ ಉಡುಪಿಯ ಮಠದಲ್ಲಿ ರಕ್ತಪಾತ ಆಗುತ್ತೇ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಸುತ್ತಾನೆ. ಇದೀಗ ಕಲ್ಲಡ್ಕ ಪ್ರಭಾಕರ ಭಟ್ ರನ್ನು ಬಂಧಿಸಿದರೆ ಕರ್ನಾಟಕದಲ್ಲಿ ಬೆಂಕಿ ಹೊತ್ತುತ್ತೇ ಎಂದು ಯಡಿಯೂರಪ್ಪ ಭವಿಷ್ಯ ಹೇಳಿದ್ದಾರೆ. ಒಟ್ಟಿನಲ್ಲಿ ಭಾರತ್ ಮಾತೆಯ ಎದೆಯಲ್ಲಿ ಇವರು ಬೆಂಕಿಯ ಆಟವನ್ನು ಆಡುವ ಅಥವಾ ಮಾತೆಯ ಸೆರಗಿಗೆ ಬೆಂಕಿ ಕೊಡುವ ಎಲ್ಲಾ ಸಾಧ್ಯತೆಗಳನ್ನು ಸೃಷ್ಟಿಸುತ್ತಿದ್ದಾರೆ.ಇಷ್ಟಾಗಿಯೂ ಇವರನ್ನು ಅಪ್ಪಟ ದೇಶ ಭಕ್ತರೆಂದು ಹಾಗೇ ಹಿಂದೂಗಳ ಸಂರಕ್ಷಕರೆಂದು ಇವರೇ ಸಮರ್ಥಿಸುತ್ತಾರೆ. ಇಲ್ಲವೇ ಇಲ್ಲಿನ ಮಾಧ್ಯಮಗಳು ಹಾಗೇ ಬಿಂಭಿಸುತ್ತದೆ.

ಮನುಷ್ಯ ಹೃದಯಗಳಲ್ಲಿ ವಿಷಬೀಜ ಬಿತ್ತಿ ಸಂಬಂಧಗಳನ್ನು ನಾಶ ಮಾಡಿದ ಬಿಜೆಪಿ ಮತ್ತು ಪರಿವಾರ ಈಗ ತಮ್ಮ ರಾಜಕೀಯ ಉಳಿವಿಗಾಗಿ ಜನರ ಬದುಕಿಗೆ ಬೆಂಕಿ ಕೊಡುವ ಮಹಾ ಸಾಹಸಕ್ಕೆ ಇಳಿದಿದೆ. ಇವರು ಭಾರತ ಮಾತೆಯ ಮಡಿಲಿಗೆ ಕೊಡುವ ಬೆಂಕಿಯಿಂದ ಪಾಕಿಸ್ಥಾನ ನಾಶವಾಗುತ್ತದೆ. ಇವರು ಇಲ್ಲಿನ ಮುಸ್ಲಿಮರ ಮೇಲೆ ಕತ್ತಿ ಬೀಸಿದಾಗ ಜಗತ್ತಿನ ಭಯೋತ್ಪಾದನೆ ನಾಶವಾಗುತ್ತದೆ. ಇವರು ಇಲ್ಲಿ ಪಾಕಿಸ್ಥಾನಕ್ಕೆ ದಿಕ್ಕಾರ ಕೂಗಿದಾಗ ಕರಾಚಿಯಲ್ಲಿ ಕಂಪನ ಉಂಟಾಗುತ್ತದೆ. ದಿನಂಪ್ರತೀ ಆತ್ಮಹತ್ಯೆ ಮಾಡುವ ರೈತರ ಕುಟುಂಬ ಇವರಿಗೆ ಹಿಂದುವಾಗಿ ಕಾಣುವುದಿಲ್ಲ. ಮುಸ್ಲಿಮರನ್ನು ವಿರೋಧಿಸುವ ಮತ್ತು ಮುಸ್ಲಿಮರಿಂದ ಹತ್ಯೆಯಾಗುವ ಹಿಂದೂ ಹೆಸರಿನ ಸಹೋದರರನ್ನು ಇವರು ಹಿಂದೂಗಳಾಗಿ ಕಾಣುತ್ತಾರೆ.ಇವರು ಹಿಂದೂ ಸಮಾಜೋತ್ಸವ ಮಾಡಿ ಮುಸ್ಲಿಮ್ ಕಲ್ಯಾಣದ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಇವರದು ವಿಚಿತ್ರವಾದ ಸ್ವಭಾವ. ಬುದ್ದಿಗೆ ನಿಲುಕದ ಇವರ ವರ್ತನೆಗೆ ಅಂಧ ಹಿಂಬಾಲಕರು ಇರುವುದು ವಿಪರ್ಯಾಸ.

ಕಾಂಗ್ರೇಸ್ಸನ್ನು ಇಲ್ಲವಾಗಿಸಲು ಮುಸ್ಲಿಮರನ್ನು ಇವರು ಗುರಾಣಿ ಮಾಡುತ್ತಾರೆ.ಹಿಂದೂಗಳನ್ನು ಸಂಘಟಿಸಲು ಮುಸ್ಲಿಮರ ಕುರಿತು ಭಯ ಹುಟ್ಟಿಸುತ್ತಾರೆ. ಉಡುಪಿಯಲ್ಲಿ ಇಂದು ಒಂದೇ ಕುಟುಂಬದ ನಾಲ್ವರು ಆತ್ಮ ಹತ್ಯೆ ಮಾಡಿದರು ಅದರ ಬಗ್ಗೆ ಇವರಿಗೆ ಖೇದವಿಲ್ಲ ಆದರೆ ಮುಸ್ಲಿಮರಿಂದ ಹಲ್ಲೆಯಾದ ಹಾಗೂ ಹತ್ಯೆಯಾದ ಯಾರಾದರು ಇದ್ದರೆ ಅದು ಇವರಿಗೆ ದುಃಖ ಮತ್ತು ಸಾಂತ್ವನ ಕೊಡುವ ಕುಟುಂಬವಾಗಿರುತ್ತದೆ.ಬಂಟ್ವಾಳದ ಹರೀಶ್ ಹತ್ಯೆಯಾದಗಲೂ ಇವರು ಹೀಗೇ ಲಾಭ ಪಡೆಯಲು ಹೋಗಿ ಮಾನ ಕಳೆದುಕೊಂಡಿದ್ದರು.ಅನಂತರ ಕೋಣಾಜೆಯಲ್ಲಿ ಕಾರ್ತಿಕ್ ರಾಜ್ ಕೊಲೆಯನ್ನೂ ಇವರು ರಾಜಕೀಯ ಬೇಲೆ ಬೇಯಿಸಲು ಉಪಯೋಗಿಸಿ ಮುಖ ಮುಚ್ಚಿದರು.ಆಧ್ಯಾತ್ಮದ ಈ ಮಣ್ಣಿನಲ್ಲಿ ಇವರ ಮಾನ ಹರಾಜು ಆಗಿದ್ದೇ ಹೆಚ್ಚು.ಕರಾವಳಿಯಲ್ಲಿ ಪುತ್ತೂರು,ಮಂಗಳೂರು,ಸುರತ್ಕಲ್ ಕ್ಷೇತ್ರವನ್ನು ಕಳೆದುಕೊಂಡು ಶಾಪಕ್ಕೆ ತುತ್ತಾದ ಈ ಬಿಜೆಪಿ ಇದೀಗ ಕರ್ನಾಟಕಕ್ಕೆ ಬೆಂಕಿ ಕೊಟ್ಟು ಆಹುತಿಯಾಗುವ ಸಾಹಸಕ್ಕೆ ಇಳಿದಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ದಕ್ಷಿಣಕನ್ನಡ ಜಿಲ್ಲೆಯನ್ನು ಹಿಂಸೆಮುಕ್ತ ಮಾಡುವುದು ಹೇಗೆ?

ಮುಂದಿನ ಸುದ್ದಿ »

ಕರಾವಳಿಯ ದೈವಾರಾಧನೆ ಮತ್ತು ಪ್ರಾಣಿ ಜನಪದದ ಕುರಿತು ನಿಮಗೆಷ್ಟು ಗೊತ್ತು?

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×