Thursday May 25 2017

Follow on us:

Contact Us

ಉಪವಾಸವೆಂಬ ಕುಲುಮೆಯಲ್ಲಿ ಒಂದು ತಿಂಗಳು…

ತಝ್ಕಿಯಾ ಮತ್ತು ತದ್‍ಸಿಯಾ ಎಂಬೆರಡು ಪದಗುಚ್ಛಗಳ ನಡುವೆ ತಕ್ಷಣಕ್ಕೆ ಇವೆರಡೂ ಒಂದೇ ಎಂದು ಅನಿಸುವಷ್ಟು ಹತ್ತಿರದ ಸಾಮ್ಯತೆ ಇದೆ. ಆದರೆ ವಾಸ್ತವ ಹೀಗಿಲ್ಲ. ಇವೆರಡರ ನಡುವಿನ ಅರ್ಥವ್ಯತ್ಯಾಸ ಬಹಳ ದೊಡ್ಡದು. ತಝ್ಕಿಯಾ ಎಂಬುದು ಸಂಸ್ಕರಣೆ, ಶುದ್ಧೀಕರಣ ಎಂಬ ಅರ್ಥಗಳನ್ನು ಕೊಟ್ಟರೆ ತದ್‍ಸಿಯಾ ಎಂಬುದು ಭ್ರಷ್ಟ ಎಂಬ ಅರ್ಥವನ್ನು ಕೊಡುತ್ತದೆ. ರಮಝಾನ್ ತದ್‍ಸಿಯದಿಂದ ತಝ್ಕಿಯದೆಡೆಗೆ ಸಾಗಲು ಒತ್ತಾಯಿಸುವ ತಿಂಗಳಾಗಿದೆ. ಭ್ರಷ್ಟತನ ಅನ್ನುವುದು ಮಾನವ ಜಗತ್ತಿಗೆ ಹೊಸತಲ್ಲ. ಸಂಸ್ಕರಣೆಯೂ ಹಾಗೆಯೇ. ಆದಿಪಿತ ಆದಮ್‍ರ(ರ) ಕಾಲದಲ್ಲೇ ಭ್ರಷ್ಟತನ ಆರಂಭವಾಗಿದೆ. ಸಂಸ್ಕರಣೆಯೂ ಅವರಿಂದಲೇ ಆರಂಭವಾಗಿದೆ. ಮನುಷ್ಯ ಭ್ರಷ್ಟನಾಗಲಾರ ಎಂದು ಯಾರೂ ಖಾತ್ರಿ ಕೊಡಲಾರರು.

ನಿತ್ಯದ ಬದುಕಿನ ನಡುವೆ ಮನುಷ್ಯ ಭ್ರಷ್ಟ ಆಗುವುದಕ್ಕೆ ನೂರಾರು ದಾರಿಗಳಿವೆ. ಹಣ ಅದರ ಅತೀ ಸಣ್ಣ ಭಾಗ ಮಾತ್ರ. ಮಾತಿನಲ್ಲೂ ಮನುಷ್ಯ ಭ್ರಷ್ಟ ಆಗಬಹುದು. ನೋಟದಲ್ಲಿ, ನಡತೆಯಲ್ಲಿ, ಭಾವನೆಯಲ್ಲಿ, ನಗುವಿನಲ್ಲಿ, ವ್ಯಾಪಾರದಲ್ಲಿ, ಆಲೋಚನೆಯಲ್ಲಿ… ಹೀಗೆ ದಾರಿಗಳು ಅನೇಕ. ಮನುಷ್ಯ ಭ್ರಷ್ಟನಾಗಲಾರ ಎಂದು ಪವಿತ್ರ ಕುರ್‍ಆನ್ ಹೇಳಲಿಲ್ಲ. ಅದರ ಬದಲು ಸಂಸ್ಕರಣೆಯ ಹತ್ತಾರು ವಿಧಾನಗಳನ್ನು ಹೇಳಿಕೊಟ್ಟಿದೆ. ದಾನವು ಮನುಷ್ಯನನ್ನು ಶುದ್ಧೀಕರಿಸುತ್ತದೆ (9:103) ಎಂದು ಅದು ಹೇಳಿದೆ. ತನ್ನ ಆತ್ಮವನ್ನು ಸಂಸ್ಕರಿಸಿಕೊಂಡವ ವಿಜಯಿಯಾದ (91:9) ಎಂದು ಅಭಿಪ್ರಾಯಪಟ್ಟಿದೆ. ತನ್ನನ್ನು ಸಂಸ್ಕರಿಸಿಕೊಂಡವರಿಗೆ ಸ್ವರ್ಗ ಇದೆ (20:76) ಎಂದು ಮಾತ್ರವಲ್ಲ, ಪ್ರವಾದಿಗಳು ಬಂದಿರುವುದೇ ಸಂಸ್ಕರಿಸುವ ವಿಧಾನ ತಿಳಿಸಲು (3:164) ಎಂದು ವಿವರಿಸಿದೆ. ಅದೇವೇಳೆ, ವಿವೇಚಿಸುವ ಸಾಮರ್ಥ್ಯವುಳ್ಳ ಹೃದಯವಿದ್ದೂ ವಿವೇಚಿಸದ ಮನುಷ್ಯರನ್ನು ಅದು ತರಾಟೆಗೆ ಎತ್ತಿಕೊಂಡಿದೆ. ಅವರ ಹೃದಯಕ್ಕೆ ಬೀಗ ಜಡಿದಿದೆಯೇ (47:24) ಎಂಬ ಮಾರ್ಮಿಕ ಪ್ರಶ್ನೆಯ ಜೊತೆಗೆ ಅವರ ಹೃದಯಕ್ಕೆ ತುಕ್ಕು ಹಿಡಿದಿದೆ (83:15) ಎಂಬ ಷರಾವನ್ನು ಬರೆದಿದೆ.

ಪ್ರವಾದಿ ಮುಹಮ್ಮದರು(ಸ) ಒಂದು ಅತಿ ಸರಳ ಮತ್ತು ಮಾರ್ಮಿಕ ಮಾತನ್ನು ಹೇಳಿದ್ದಾರೆ- ಮನುಷ್ಯನ ಶರೀರದಲ್ಲಿ ಮಾಂಸದ ಮುದ್ದೆಯೊಂದು ಇದೆ. ಅದು ಆರೋಗ್ಯ ಪೂರ್ಣವಾಗಿದ್ದರೆ ಇಡೀ ಶರೀರವೇ ಆರೋಗ್ಯಪೂರ್ಣವಾಗಿರುತ್ತದೆ. ಅದು ಅನಾರೋಗ್ಯಕ್ಕೀಡಾದರೆ ಇಡೀ ಶರೀರದ ಆರೋಗ್ಯವೇ ಕೆಡುತ್ತದೆ. ಅದುವೇ ಹೃದಯ ಎಂದು ವಿವರಿಸಿದ್ದಾರೆ.

ಶುದ್ಧೀಕರಣ ಪ್ರಕ್ರಿಯೆಯು ಮಾನವ ಉಗಮದಿಂದಲೇ ಆರಂಭವಾಗಿದೆ. ಆದ್ದರಿಂದಲೇ ಶುದ್ಧೀಕರಣಕ್ಕೆ ಅಕಾಲ ಅಂತ್ಯ ಎಂಬುದಿಲ್ಲ. ಮಾನವ ಅಸ್ತಿತ್ವ ಇರುವವರೆಗೆ ತಝ್ಕಿಯಾ ಮತ್ತು ತದ್‍ಸಿಯಾ ಅಸ್ತಿತ್ವದಲ್ಲಿ ಸದಾ ಇದ್ದೇ ಇರುತ್ತದೆ. ಹಾಗಂತ ಮನುಷ್ಯ ರಮಝಾನ್ ತಿಂಗಳಲ್ಲಿ ಮಾತ್ರ ಸಂಸ್ಕರಣೆಗೆ ತೆರೆದುಕೊಳ್ಳಬೇಕು, ಉಳಿದ 11 ತಿಂಗಳು ಭ್ರಷ್ಟನಾಗಬಹುದು ಎಂದಲ್ಲ. ಪ್ರತಿದಿನ ಮನುಷ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು. ದಿನದಲ್ಲಿ ತಾನು ಎಷ್ಟೆಷ್ಟು ಪ್ರಮಾಣದಲ್ಲಿ ಭ್ರಷ್ಟನಾದೆ/ಳಾದೆ ಎಂದು ಆತ್ಮ ನಿವೇದನೆ ಮಾಡಿಕೊಳ್ಳುವ ಪರಿಪಾಠ ಬೆಳೆಸಿಕೊಂಡರೆ, ಆತ್ಮ ಶುದ್ಧೀಕರಣವೆಂಬುದು ತೀರಾ ಸಲೀಸು. ಭ್ರಷ್ಟತನ ಎಂಬುದು ನಿರ್ದಿಷ್ಟ ಧರ್ಮದ ಸೊತ್ತಲ್ಲ. ಸಂಸ್ಕರಣೆಯೂ ಹಾಗೆಯೇ. ಯಾವಾಗೆಲ್ಲ ಮಾನವ ಸಮೂಹದಲ್ಲಿ ಸಂಸ್ಕರಣೆಯ ಪ್ರಜ್ಞೆ ಜಾಗೃತವಾಗಿರುತ್ತದೋ ಆವಾಗೆಲ್ಲ ಆ ಸಮೂಹ ಉತ್ಕೃಷ್ಟವಾಗಿ ಗುರುತಿಸಿಕೊಂಡಿರುತ್ತದೆ.

ರಮಝಾನ್ ತಿಂಗಳ ಉಪವಾಸವು ಈ  ಉತ್ಕೃಷ್ಟ ಸಮೂಹದ ನಿರ್ಮಾಣವನ್ನು ಗುರಿಯಾಗಿಸಿಕೊಂಡಿದೆ. ಮುಂಜಾನೆಯಿಂದ ಮುಸ್ಸಂಜೆಯ ವರೆಗಿನ ಅನ್ನ-ಪಾನೀಯಗಳ ತ್ಯಜಿಸುವಿಕೆಯು ಆ ಉದ್ದೇಶ ಸಾಧನೆಗಾಗಿರುವ ಒಂದು ಷರತ್ತು. ವ್ಯಕ್ತಿಯನ್ನು ಪಳಗಿಸುವ ವಿಧಾನ. ಪವಿತ್ರ ಕುರ್‍ಆನಿನ ಮೇಲೆ ವಿಶ್ವಾಸವಿಟ್ಟವರೆಲ್ಲರೂ ಉಪವಾಸವೆಂಬ ಈ ಕುಲುಮೆಯಲ್ಲಿ ಒಂದು ತಿಂಗಳು ಬೇಯಬೇಕು. ಹಾಗೆ ತಿಂಗಳ ಬಳಿಕ ಪುಟಕ್ಕಿಟ್ಟ ಚಿನ್ನವಾಗಿ ಹೊರಬರಬೇಕು. ಇದುವೇ ಅವರ ಸಾಮಾಜಿಕ ಗುರುತು. ಒಂದು ವೇಳೆ, ಸ್ವಸಂಸ್ಕರಣೆಗೆ ನಾವು ಸಿದ್ಧವಾಗದಿದ್ದರೆ ಉಪವಾಸವೆಂಬ ಕುಲುಮೆಯಲ್ಲಿ ಒಂದು ತಿಂಗಳು ಬೇಯಬೇಕಾದ ಅಗತ್ಯವೇ ಇಲ್ಲ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ರಮಝಾನ್ ಹಬ್ಬವಲ್ಲ..!!

ಮುಂದಿನ ಸುದ್ದಿ »

ಗೋವಿಗಾದರೂ ಬಾಯಿ ಬರುತ್ತಿದ್ದರೆ…

ಸಿನೆಮಾ

  • ಸರಳವಾಗಿ ರಿಜಿಸ್ಟರ್ ಮದುವೆಯಾದ ಮುಸ್ತಫಾ-ಪ್ರಿಯಾಮಣಿ

    August 23, 2017

    ಬೆಂಗಳೂರು: ತಮಿಳು, ತೆಲುಗು, ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾದಲ್ಲಿ ನಟಿಸಿದ್ದ ಬಹುಭಾಷಾ ತಾರೆ ಪ್ರಿಯಾಮಣಿ ಇಂದು ತಮ್ಮ ಹಲವು ಕಾಲದ ಗೆಳೆಯ ಮುಸ್ತಫಾರಾಜಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಜಯನಗರ ರಿಜಿಸ್ಟರ್ ಆಫೀಸಿಗೆ ನಟಿ ...

    Read More
  • ಈ ಬಾರಿ ಗಣೇಶೋತ್ಸವ ಆಚರಿಸದ ಸಲ್ಮಾನ್ ಖಾನ್: ಕಾರಣವೇನು ಗೊತ್ತೇ?

    August 22, 2017

    ನ್ಯೂಸ್ ಕನ್ನಡ-(22.08.17): ಬಾಲಿವುಡ್ ನಟ ಸಲ್ಮಾನ್ ಖಾನ್ ಗಣಪತಿ ಭಕ್ತನಾಗಿದ್ದು, ಪ್ರತೀವರ್ಷವೂ ತಮ್ಮ ಮನೆಯಲ್ಲಿ ಗಣೇಶೋತ್ಸವವನ್ನು ಆಚರಿಸುತ್ತಾರೆ. ಆದರೆ ಈ ಬಾರಿ ಸತತ 15ವರ್ಷಗಳಿಂದ ತಮ್ಮ ಮನೆಯಲ್ಲಿ ನಡೆಸುತ್ತಾ ಬಂದಿದ್ದ ವೈಭವದ ಗಣೇಶೋತ್ಸವವನ್ನು ಕೈಬಿಟ್ಟು ಸಲ್ಮಾನ್ ಖಾನ್ ...

    Read More
  • ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಗೈದ ತಮಿಳು ನಟ ಆರ್ಯ

    August 21, 2017

    ನ್ಯೂಸ್ ಕನ್ನಡ ವರದಿ-(21.08.17): ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಖ್ಯಾತ ಯುವನಟ ಆರ್ಯ ಮಮ್ಮೂಟಿ ಅಭಿನಯದ ಗಾಡ್ ಫಾದರ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಕೇರಳದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ಇದೀಗ ಸೂಪರ್ ಹಿಟ್ ಚಿತ್ರವಾದ ...

    Read More
  • ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಲಿರುವ ಕ್ರಿಕೆಟಿಗ ಶ್ರೀಶಾಂತ್!

    August 16, 2017

    ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್‌ ಆರೋಪಗಳಿಂದ ಕಂಗಾಲಾಗಿದ್ದ ಕೇರಳ ಮೂಲದ ವೇಗಿ, ರಾಜಸ್ಥಾನ್ ರಾಯಲ್ಸ್‌ನ ಮಾಜಿ ಆಟಗಾರ ಶ್ರೀಶಾಂತ್ ಇತ್ತೀಚೆಗಷ್ಟೆ ನಿರಾಳರಾಗಿದ್ದಾರೆ. ಅವರ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಜೀವ ನಿಷೇಧ ಹೇರಿತ್ತು. ಇತ್ತೀಚೆಗಷ್ಟೇ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×