Friday October 2 2015

Follow on us:

Contact Us

ಆ ಪುಣ್ಯಾತ್ಮ ಒಬ್ಬ ಗೋಡ್ಸೆ ಗುಂಡೇಟಿನ ಗಾಯದಿಂದಲೇ ಇನ್ನೂ ಚೇತರಿಸಿಕೊಂಡಿರಲಿಕ್ಕಿಲ್ಲ..

-ರುಕಿಯ್ಯಾ ಎ ರಝಾಕ್

ಅಕ್ಟೋಬರ್ 2 ಗಾಂಧಿ ಜಯಂತಿ.. ಅಹಿಂಸೆ, ಸತ್ಯಾಗ್ರಹ, ಸ್ವಾತಂತ್ರ್ಯ.. ಇವುಗಳೆಲ್ಲಾ ಗಾಂಧಿ ತಾತನೊಂದಿಗೆ ನೆನಪಾಗುವ ಶಬ್ಧಗಳು. ಆದರೆ, ಈ ತತ್ವಗಳನ್ನು ನಾವು ಮರೆತು ತುಂಬಾ ಸಮಯ ಕಳೆದು ಹೋಗಿದೆ.. ಯಾಕೆಂದರೆ, ಗಾಂಧಿ ತತ್ವ ಆದರ್ಶಗಳು ಅವರ ಪುತ್ಥಳಿಗೆ ಹೂ ಹಾರ ಅರ್ಪಿಸಿ, ಅಹಿಂಸೆಯ ಕೆಲವು ಬೊಗಳೆ ಮಾತುಗಳನ್ನಾಡಿ ವೇದಿಕೆಯಿಂದ ಇಳಿಯುವಾಗ ಗಾಂಧಿ ತಾತನನ್ನು ಮರೆತು ಬಿಡುವಷ್ಟಕ್ಕೆ ಮಾತ್ರವೇ ಸೀಮಿತವಾಗಿದೆ. ಗಾಂಧಿ ಎಂದರೆ ಸ್ವಾತಂತ್ರ್ಯಕ್ಕೆ ಮತ್ತೊಂದು ಹೆಸರು. ಜೀವನದ ಏಳುಬೀಳುಗಳ ಹೊರತಾಗಿಯೂ ಧೃಢ ಸಂಕಲ್ಪದಿಂದ ಒಂದು ರಾಷ್ಟ್ರವನ್ನೇ ಪರಕೀಯರಿಂದ ಮುಕ್ತಿಗೊಳಿಸಿದ ಮಹಾತ್ಮ, ದೇಶದ ತಳವರ್ಗವನ್ನು ದೇಶದ ಪ್ರಮುಖ ಸಾಲಿನಲ್ಲಿ ಕಾಣ ಬಯಸಿದ ನಾಯಕ. ದಕ್ಷಿಣ ಆಫ್ರಿಕಾದಲ್ಲಿ ತಾನು ಜನಾಂಗೀಯ ನಿಂದನೆಗೆ ಒಳಗಾಗಿದ್ದರಿಂದಲೇ ತಳವರ್ಗದವರ ನೋವನ್ನು ಅರಿಯಬಲ್ಲವರಾಗಿದ್ದ ಗಾಂಧೀಜಿ, ಜೀವಿತಾವಧಿಯಲ್ಲಿ ಜಾತ್ಯತೀತ ಭಾರತದ ಕನಸುಕಂಡಿದ್ದ ಕರಮಚಂದರು.

ತನ್ನ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಗಾಂಧೀಜೀ ಪರಕೀಯರನ್ನು ತನ್ನ ಅಹಿಂಸಾ ತತ್ವ ಮತ್ತು ಧೃಢ ನಿಲುವಿನಿಂದ ಪರಕೀಯರು ಭಾರತ ತೊರೆಯುವಂತೆ ಮಾಡಲು ಶಕ್ತರಾದರೂ ಕೂಡಾ, ‘ಭಾರತೀಯ’ ರೆನಿಸಿಕೊಂಡವರಿಗೆ ಮಾತ್ರ ಇವರ ಈ ಅಹಿಂಸಾತತ್ವ, ಜಾತ್ಯತೀತ ಅಖಂಡ ಭಾರತದ ಕನಸು ಅಸಹನೀಯ ವೆನಿಸಿದ್ದು… ಪರಕೀಯರ ಗುಂಡು, ಬೆದರಿಕೆ, ದೌರ್ಜನ್ಯಗಳಿಗೆ ನಿರ್ಭಯದಿಂದ ಎದೆಯೊಡ್ಡಿದ್ದ ಆ ಗಟ್ಟಿಗನ ಎದೆ, ‘ಭಾರತೀಯ’ರೆನಿಸಿ ಕೊಂಡವನ ಗುಂಡಿಗೆ ಛಿದ್ರವಾದದ್ದು ಮಾತ್ರ ದೇಶದ ಅತಿ ದೊಡ್ಡ ದುರಂತ. ಆದರೂ.. “ಹೇ ರಾಮ್..” ಎಂದು ಪ್ರಾಣಬಿಡುವಾಗಲೂ ದೇಶದ ಅಸಲಿ ಶತ್ರುವನ್ನು ದೇಶಕ್ಕೆ ಪರಿಚಯ ಮಾಡಿಕೊಟ್ಟಿದ್ದರು ಗಾಂಧಿ.gandhi-001

ಈ “ಹೇ ರಾಮ್…” ಅನ್ನು, ಗಾಂಧಿಯ ಅಹಿಂಸೆಯ ತತ್ವವನ್ನು, ಅದೇ ಶತ್ರುಗಳು ತಮ್ಮ ಸ್ವಹಿತಾಸಕ್ತಿಗಾಗಿ ಬಳಸಿಕೊಂಡರು. ಅದು ಅದಕ್ಕಿಂತಲೂ ದೊಡ್ಡ ದುರಂತ. ಉತ್ತರ ಪ್ರದೇಶದ ದಾದ್ರಿಯಲ್ಲಿ ಸೋಮವಾರ  ಅಖ್ಲಾಕ್ ನ ಭೀಕರ ಹತ್ಯೆ ನಡೆದಾಗ ಒಂದು ಕ್ಷಣ ಗಾಂಧಿ ನೆನಪಾದರು. ಭಾರತದಲ್ಲಿ ಅಪೌಷ್ಠಿಕತೆ, ಆಹಾರದ ಕೊರತೆಯಿಂದ ಜನರು ಸಾವಿಗೀಡಾಗುವುದನ್ನು ಬಲವಾಗಿ ವಿರೋಧಿಸುತ್ತಿದ್ದ ಗಾಂಧೀಜಿ,  ಮಾಂಸ ಸೇವಿಸಿದ್ದಕ್ಕಾಗಿ ಒಬ್ಬನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆಮಾಡಿದ್ದನ್ನು ಕಂಡಿರುತ್ತಿದ್ದರೆ ಏನು ಮಾಡುತ್ತಿದ್ದರು? ಮಾಂಸ ಸೇವಿಸುವುದು, ಒಬ್ಬ ಮಾನವನನ್ನು ಥಳಿಸಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡುವುದಕ್ಕಿಂತಲೂ ಹೆಚ್ಚಿನ ಅಪರಾಧವೇ? ಗಾಂಧೀಜಿ ಸಸ್ಯಾಹಾರಿ ಸಂಪ್ರದಾಯಕ್ಕೆ ಸೇರಿದವರಾಗಿದ್ದರು. ಹಾಗಾಗಿ ಅವರು ಸಸ್ಯಾಹಾರವನ್ನು ಮಾತ್ರವೇ ನೆಚ್ಚಿಕೊಂಡಿದ್ದರು. ಅದು ಕ್ರಮೇಣ ಅವರ ಅಹಿಂಸಾ ಚಳುವಳಿಯಲ್ಲಿ ಪ್ರತಿಫಲಿಸಿದೆ. ಹಾಗಂತ ಅವರು ಒಂದು ದೊಡ್ಡ ಸಮುದಾಯದ ಆಹಾರ ಪದ್ಧತಿಯನ್ನೇ ವಿರೋಧಿಸುತ್ತಿರಲಿಲ್ಲ.

ಒಂದು ವೇಳೆ ಮಹಾತ್ಮಾ ಮಾಂಸಾಹಾರಿಯಾಗಿದ್ದರೆ? ಆಗ ಅವರು ಮಾಂಸಾಹಾರವನ್ನು ತ್ಯಜಿಸಿ ಸಂಪೂರ್ಣವಾಗಿ ಅಹಿಂಸೆ ಪ್ರತಿಪಾದಿಸಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಎಂಬ ಪ್ರಶ್ನೆ ಏಳುತ್ತದೆ. ಏನೇ ಆಗಲಿ, ಗಾಂಧೀಜೀಯವರ ಈ ‘ಅಹಿಂಸೆ’ ತತ್ವವನ್ನು ಬೇರೆಯಾವುದಕ್ಕೆ ಬಳಸಿಕೊಳ್ಳದಿದ್ದರೂ ಪರವಾಗಿಲ್ಲ, ಕೋಮು ವಿಷ ಬೀಜ ಬಿತ್ತುವವರು, ಬಹುಜನರ ಆಹಾರ ಪದ್ಧತಿಯನ್ನು ನಿಷೇಧಿಸಲು ಮಾತ್ರ ಆ ತತ್ವ ವನ್ನು ಚೆನ್ನಾಗಿ ಉಪಯೋಗಿಸಿಕೊಂಡರು. ಸ್ವಾತಂತ್ರ್ಯದ 70ರ ಹೊಸ್ತಿಲಲ್ಲಿರುವ ಭಾರತ, ಗಾಂಧೀಜಿಯವರ ಪ್ರತಿ ಮಾತು, ಪ್ರತಿ ಆಶಯ, ಪ್ರತಿ ಆದರ್ಶಗಳಿಗೆ ವ್ಯತಿರಿಕ್ತವಾಗಿ ಚಲಿಸಲಾರಂಭಿಸಿದೆ. “ಯಾವ ದಿನ ಮಹಿಳೆ, ಅಪರಾತ್ರಿಯಲ್ಲೂ ಒಬ್ಬಂಟಿಯಾಗಿ, ನಿರ್ಭಯವಾಗಿ ನಡೆದು ಹೋಗುವಷ್ಟು ಶಕ್ತಳಾಗುತ್ತಾಳೋ, ಆದಿನ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ದೊರೆತಂತೆ” ಇದು ಗಾಂಧಿಯ ಆಶಯವಾಗಿತ್ತು. ಅಂದರೆ ಗಾಂಧಿ ಭಾರತವನ್ನು ಅಷ್ಟು ಸ್ವತಂತ್ರವಾಗಿ ಕಾಣಬಯಸಿದ್ದರು. ಆದರೆ ಆ ಮೌಲ್ಯಯುತ ಮಾತುಗಳು ಅತ್ಯಾಚಾರಗೊಂಡ ಮಹಿಳೆಯ ಚೀತ್ಕಾರದ ನಡುವೆ ಉಡುಗಿಹೋಗಿದೆ. ಅಸಂಖ್ಯಾತ ನಿರ್ಭಯರ ದಾರುಣ ಕೊಲೆಗಳೊಂದಿಗೆ, ಗಾಂಧಿ ಮೌಲ್ಯಗಳು ಅಂತ್ಯಕಾಣುತ್ತಿದೆ. ಹರಿಜನ, ರೈತ ಸಹಿತ ತಳವರ್ಗದ ಜನರ ಅಭಿವೃದ್ಧಿಯನ್ನು ದೇಶದ ನೈಜ ಅಭಿವೃದ್ಧಿ ಎಂದು ನಂಬಿದ್ದ ಗಾಂಧೀಜಿಯವರ ಆಶಯವನ್ನು ರಾಜಕಾರಣಿಗಳು ಅದ್ಯಾವಾಗಲೋ ಗಾಳಿಗೆ ತೂರಿಯಾಗಿದೆ. ಅಳಿದುಳಿದ ಮೌಲ್ಯಗಳು ಆತ್ಮಹತ್ಯೆ ಮಾಡುತ್ತಿರುವ ರೈತನೊಂದಿಗೇ ಅಸುನಿಗುತ್ತಿದೆ.

1339159671783057768ಇನ್ನು, ಭ್ರಷ್ಟಾಚಾರ ಮುಕ್ತ, ಪಾರದರ್ಶಕ, ಸ್ವಚ್ಛ ಆಡಳಿತ ನೀತಿ, ಜಾತಿ ಬೇಧ, ಸಾಮರಸ್ಯ, ಎಲ್ಲವನ್ನೂ ಪಕ್ಷ ಬೇಧ ಮರೆತು ನಮ್ಮ ನಾಯಕರೆನಿಸಿಕೊಂಡವರು ದೊಡ್ಡ ಗೋರಿ ತೋಡಿ ದಫನ್ ಮಾಡಿ ಬಿಟ್ಟಿದ್ದಾರೆ. ಪ್ರತಿಯೊಂದು ಪಕ್ಷವೂ ಸುಳ್ಳು ಆಶ್ವಾಸನೆಯ ಮೆಟ್ಟಿಲು ಹತ್ತಿ ಕುರ್ಚಿ ಪಡೆಯುವ ಕಸರತ್ತು ನಡೆಸುತ್ತಿದೆ. ಅನೈತಿಕ ಮೈತ್ರಿಗಳು, ಪಕ್ಷಾಂತರ ಆಪರೇಷನ್ ಗಳು, ಅದೆಲ್ಲಕ್ಕಿಂತಲೂ ಹೆಚ್ಚಾಗಿ ಪ್ರಜೆಗಳನ್ನು ಜಾತಿ ಧರ್ಮಗಳಂತಹ ಸೂಕ್ಷ್ಮ ವಿಚಾರಗಳನ್ನು ಮುಂದಿಟ್ಟು ಪರಸ್ಪರ ವೈರಿಗಳಾಗಿ ಮಾರ್ಪಡಿಸಿ ಅವರ ಗಲಭೆಗಳಿಂದ ತಮ್ಮ ಹೊಟ್ಟೆತುಂಬಿಸುವುದು. ಅವರು ಪರಸ್ಪರ ರಕ್ತದಾಹಿ ಗಳಾಗುವುದನ್ನು, ಶತ್ರುಗಳಂತೆ ಕಾದಾಡುವುದನ್ನು ದೂರ ಕುಳಿತು ತಮಾಷೆ ನೋಡುವುದು..ಇದೆಲ್ಲಾ ನಮ್ಮ ನಾಯಕರೆನಿಸಿಕೊಂಡವರ ಘನ ಕಾರ್ಯಗಳು. ನಾವು ಪ್ರಜೆಗಳೂ ರಾಜಕಾರಣಿಗಳ ಇಂತಹ ಎಡಬಿಡಂಗಿತನಕ್ಕೆ ನಮ್ಮನ್ನು ನಾವು ಒಗ್ಗಿಸಿಕೊಂಡಿದ್ದೇವೆ. ಜಾತಿ, ಮತ ಬೇಧವಿಲ್ಲದೆ ನಾವು ಸಂಪೂರ್ಣವಾಗಿ ಲೂಟಿ ಮಾಡಲ್ಪಡುತ್ತಿದ್ದೇವೆ ಎಂಬ ಯಕಃಶ್ಚಿತ್ ಅರಿವೂ ಇಲ್ಲದಷ್ಟು ವಿವೇಚನಾ ಶೂನ್ಯರಾಗಿ ಈ ರಾಜಕೀಯದಾಟದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ.

ಅಕ್ಟೋಬರ್ ಬಂತು. ನಮಗೀಗ ಎರಡನೇ ತಾರೀಖಿನಂದು ಸಿಗುವ ರಜೆಗಾಗಿ ಮಾತ್ರವೇ ಗಾಂಧಿ ತಾತಾ ನೆನಪಾಗುತ್ತಾರೆ ಅಷ್ಟೇ. ಮರುದಿನ ಮತ್ತೆ ಅದೇ ದಿನಚರಿ. ಅದೇ ಹಿಂಸೆ, ಅದೇ ಭ್ರಷ್ಟಾಚಾರ, ಅದೇ ಅಸುರಕ್ಷೆಯ ಭೀತಿಯಲ್ಲಿ ಮತ್ತೆ ಬದುಕುವ ಸಂಘರ್ಷ.. ಈಗಿನ ರಾಜಕೀಯ ಸಾಮಾಜಿಕ ಅರಾಜಕತೆಯನ್ನು ನೋಡಿ ಮತ್ತೆ ಗಾಂಧಿ ಹುಟ್ಟಿಬರಲಿ, ಮತ್ತೆ ಅಹಿಂಸೆಯ ಮಂತ್ರ ಜಪಿಸಲಿ ಈ ಬಾರಿ ಆಂತರಿಕ ಶತ್ರುಗಳಿಂದ ಭಾರತಕ್ಕೆ ಮುಕ್ತಿ ನೀಡಲಿ ಅನಿಸುತ್ತಿದೆಯೇ? ಖಂಡಿತಾ ಬೇಡ.. ಆ ಪುಣ್ಯಾತ್ಮ ಒಬ್ಬ ಗೋಡ್ಸೆ ಗುಂಡೇಟಿನ ಗಾಯದಿಂದಲೇ ಇನ್ನೂ ಚೇತರಿಸಿಕೊಂಡಿರಲಿಕ್ಕಿಲ್ಲ..

nksw

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪ್ರಧಾನಿಯವರು ಹಾಗೂ ಅವರ ವ್ಯಾಮೋಹಗಳು…

ಮುಂದಿನ ಸುದ್ದಿ »

ಗಾಂಧಿ ಜಯಂತಿ ಮುಗಿದ ಮೇಲೆ…

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×