Tuesday November 22 2016

Follow on us:

Contact Us
1
    591

ಸರ್ಕಾರಿ ಶಾಲೆಯ ವಿದ್ಯಾರ್ಥಿಯಿಂದ ವಾಟರ್ ಬೈಸಿಕಲ್ ಸಂಶೋಧನೆ

ನ್ಯೂಸ್ ಕನ್ನಡ ವರದಿ-ಭಟ್ಕಳ(22.11.16): ಭಟ್ಕಳ ತಾಲೂಕಿನ ತೆಂಗಿನಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮಾಸ್ಟರ್ ಪುನಿತ್ ಗೊಂಡ ಹಾಗೂ ಆತನ ಸಹಪಾಠಿಗಳು ಸಂಶೋಧಿಸಿರುವ ನೀರಸೈಕಲ್ಲು (ವಾಟರ್ ಬೈಸಿಕಲ್) ರಾಷ್ಟ್ರ ಮಟ್ಟದ `ಇನ್‍ಸ್ಪಾಯರ್ ಅವಾರ್ಡ್’ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಗೊಂಡಿದೆ.

ವಿಜ್ಞಾನಿ ಆರ್ಕಿಮೀಡಿಸ್‍ ನ ತೇಲುವಿಕೆಯ ನಿಯಮ, ತೋರಿಕೆಯ ನಷ್ಟ, ಪ್ಲವನ ಬಲ ಸಿದ್ಧಾಂತದ ಆಧಾರದಲ್ಲಿ ಸಂಶೋಧಿಸಲ್ಪಟ್ಟಿರುವ ಈ ವಾಟರ್ ಬೈಸಿಕಲ್ ಇಂಧನ ರಹಿತವಾಗಿದ್ದು ಪರಿಸರ ಸ್ನೇಹಿಯಾಗಿದೆ.

ದಿನ ಬಳಕೆಯ ವಸ್ತುಗಳನ್ನು ಈ ಸೈಕಲ್ ತಯಾರಿಕೆಯಲ್ಲಿ ಬಳಸಲಾಗಿದೆ. ಇನ್ನೂ ಸೇತುವೆ ಸಂಪರ್ಕದ ಭಾಗ್ಯ ಲಭಿಸದ ಗ್ರಾಮೀಣ ಅಥವಾ ದ್ವೀಪ ಭಾಗದಲ್ಲಿ ನದಿ, ಹೊಳೆ, ಹಳ್ಳಗಳನ್ನು ದಾಟಲು ಈ ಸೈಕಲ್‍ನ್ನು ಉಪಯೋಗಿಸಬಹುದಾಗಿದೆ. ಪ್ರವಾಸಿಗರಿಗೆ ಮನರಂಜನೆಯ ಉಪಕರಣವಾಗಿಯೂ ತೇಲುವ ಸೈಕಲ್ ಗಮನ ಸೆಳೆಯುತ್ತದೆ. ಗಾಳದ ಮೀನುಗಾರಿಕೆಗೂ ಸೈ ಎನ್ನಿಸಿಕೊಂಡಿದೆ. ವಿಶೇಷವಾಗಿ ಈ ಸೈಕಲ್‍ ನ ಮುಂಭಾಗದಲ್ಲಿ ತಂತಿಯಿಂದ ಮಾಡಲ್ಪಟ್ಟ ಜಾಳಿಗೆಯನ್ನು ಅಳವಡಿಸಲಾಗಿದ್ದು, ನದಿ, ಕೆರೆ, ಹೊಳೆಯಲ್ಲಿನ ಕಸ ಕಡ್ಡಿಗಳನ್ನು ತೆಗೆಯಲು ಬಳಸಿಕೊಳ್ಳುವುದರ ಮೂಲಕ ಸ್ವಚ್ಛ ಮಾಡಬಹುದಾಗಿದೆ. ಈ ಸೈಕಲ್ ತಯಾರಿಕಾ ವೆಚ್ಚ ಕೇವಲ 5-6 ಸಾವಿರ ರುಪಾಯಿಗಳು ಮಾತ್ರ.

ಮಂಗಳೂರು ಅತ್ತಾವರದಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನಾಡಿನ ವಿವಿದೆಡೆಯಿಂದ ಬಂದ 271 ಸಂಶೋಧನಾ ಪರಿಕರಗಳನ್ನು ಪ್ರದರ್ಶಿಸಲಾಗಿದ್ದು, ಭಟ್ಕಳ ವಿದ್ಯಾರ್ಥಿಗಳ ನೀರಿನ ಮೇಲೆ ಓಡಬಲ್ಲ ಸೈಕಲ್‍ ಗೆ 5ನೇ ಸ್ಥಾನ ಲಭಿಸಿದೆ. ಡಿಸೆಂಬರ್ 10 ಮತ್ತು 11ರಂದು ರಾಷ್ಟ್ರ ಮಟ್ಟದ ಪ್ರದರ್ಶನವನ್ನು ದೆಹಲಿಯ ನ್ಯಾಶನಲ್ ಫಿಸಿಕಲ್ ಲ್ಯಾಬೋರೇಟರಿಯಲ್ಲಿ ಆಯೋಜಿಸಲಾಗಿದೆ.

ಪರಿಶಿಷ್ಠ ಪಂಗಡಕ್ಕೆ ಸೇರಿದ ವಿದ್ಯಾರ್ಥಿಯೊಬ್ಬ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಇಂತಹ ಸಾಧನೆ ಕೈಗೊಂಡಿರುವುದು ಗ್ರಾಮೀಣ ಭಾಗದಲ್ಲಿನ ಪ್ರತಿಭೆಗಳಿಗೆ ಮಾದರಿಯಾದಂತಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ತಾವೇನೂ ಕಡಿಮೆಯಲ್ಲ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.

ಎಂ.ಆರ್.ಮಾನ್ವಿ

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಗ್ರಾಮೀಣ ಭಾಗಗಳಿಗೆ ಹೊಸ ನೋಟುಗಳನ್ನು ತಲುಪಿಸಲು ಕ್ರಮ: ಜೇಟ್ಲಿ

ಮುಂದಿನ ಸುದ್ದಿ »

ಜೆಟ್‍ನಲ್ಲಿ 5.5 ಕೋಟಿ ರೂ. ಸಾಗಿಸುತ್ತಿದ್ದ ಉದ್ಯಮಿಯ ಬಂಧನ

ಸಿನೆಮಾ

  • 3

    ನನಗೂ ತುಳು ಸಿನಿಮಾದಲ್ಲಿ ನಟಿಸುವ ಆಸೆ: ಶಿವರಾಜ್ ಕುಮಾರ್

    January 19, 2017

    – ಶಫೀ ಉಚ್ಚಿಲ ನ್ಯೂಸ್ ಕನ್ನಡ ವರದಿ (19-1-17): ಕಾಪು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಟಗರು ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಟಗರು’ ತಂಡ ಎರಡನೇ ಹಂತವನ್ನು ಕಾಪು ಸಮೀಪದ ಉಚ್ಚಿಲದಲ್ಲಿ ಚಿತ್ರೀಕರಿಸುತ್ತಿದ್ದು, ...

    Read More
  • Chennai-Express-First-Look-tbwm

    ಚೆನ್ನೈ ಎಕ್ಸ್ ಪ್ರೆಸ್ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ

    January 18, 2017

    ನ್ಯೂಸ್ ಕನ್ನಡ(18-1-2017): ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರ “ಚೆನ್ನೈ ಎಕ್ಸ್ ಪ್ರೆಸ್”ನ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 25 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿರುವುದಾಗಿ ದೂರು ದಾಖಲಾಗಿದ್ದು, ...

    Read More
  • ra-one

    “ರಾ ಒನ್” ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ಅನಿಮೇಟರ್ ನಿಧನ

    January 18, 2017

    ನ್ಯೂಸ್ ಕನ್ನಡ(18-1-2017): ರಾ ಒನ್ ಚಿತ್ರದ ಅನಿಮೇಷನ್ ಗಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಚಾರು ಖಂದಾಲ್ ನಿಧನರಾಗಿದ್ದಾರೆ. 4 ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾರು ದೀರ್ಘಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಶಾರುಕ್ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×