Monday November 14 2016

Follow on us:

Contact Us
    3952

11 ರ ಪೋರಿಯ ಚಿತ್ರ ಪ್ರತಿಭೆಗೆ ಮನಸೋತ ಗೂಗಲ್

ನ್ಯೂಸ್ ಕನ್ನಡ ವರದಿ-(14.11.16): ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ  ಆಯೋಜಿಸಲ್ಪಟ್ಟಿದ್ದ ‘ಡೂಡಲ್ ಫಾರ್ ಗೂಗಲ್’ ಎಂಬ ಚಿತ್ರಕಲಾ ಸ್ಪರ್ಧೆಯಲ್ಲಿ 11 ವರ್ಷದ ಬಾಲಕಿ ಅನ್ವಿತಾ ಪ್ರಶಾಂತ್ ತೇಲಂಗ್ ಪ್ರಶಸ್ತಿ ಬಾಚಿಕೊಂಡಿದ್ದಾಳೆ . ‘ಲಿವ್ ಇನ್ ದಿ ಪ್ರೆಸೆಂಟ್’ ಎಂಬ ಥೀಮ್ ನಲ್ಲಿ ಅನ್ವಿತಾ ಬಿಡಿಸಿದ ಚಿತ್ರ ಆಯೋಜಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಮಕ್ಕಳ ದಿನಾಚರಣೆಯ ಪ್ರಯುಕ್ತ ಇಂದು ಗೂಗಲ್ ಇಂಡಿಯಾದ ಹೋಮ್ ಪೇಜ್ ನಲ್ಲಿ ಅನ್ವಿತಾ ಬಿಡಿಸಿದ ಚಿತ್ರವನ್ನು ಪ್ರಕಟಿಸುವ ಮೂಲಕ ಗೂಗಲ್ ಆಕೆಗೆ ಶುಭ ಹಾರೈಸಿದೆ.

ಅನ್ವಿತಾ ಪುಣೆಯ ಬಳೆವಾಡಿಯ ಸಮೀಪದ ವಿಬ್ಜಾರ್ (Vibgyor) ಹೈಸ್ಕೂಲ್ ನಲ್ಲಿ 6ನೇ ತರಗತಿಯ ವಿದ್ಯಾರ್ಥಿನಿ. 11 ವರ್ಷದವಳಾದ್ರೂ ಅವಳ ವಿಚಾರ ಮತ್ತು ಮಾತುಗಳು ದೊಡ್ಡವರ ಚಿಂತನೆಗಳನ್ನೂ ಮೀರಿಸುವಂತಿವೆ. ಜಗತ್ತು ತುಂಬಾನೇ ವೇಗವಾಗಿ ಬೆಳೆಯುತ್ತಿದೆ ಅನ್ನೋದು ಅನ್ವಿತಾಳ ಅಭಿಪ್ರಾಯ, ಪ್ರಕೃತಿ ಮತ್ತು ಬದುಕಿನಲ್ಲಿರುವ ಒಳ್ಳೆಯ ವಿಷಯಗಳನ್ನು ಆಸ್ವಾದಿಸಬೇಕೆಂಬುದು ಆಕೆಯ ಮಹದಾಸೆ. “If I could teach anyone anything, it would be” ಎಂಬ ಅಧ್ಬುತವಾದ ಥೀಮಿನ ಚಿತ್ರದ ಮೂಲಕ ಈ ಪೋರಿ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದಾಳೆ.

ಯುವ ಬಳಕೆದಾರರ ಮತ್ತು ಯುವ ಪ್ರತಿಭೆಗಳ  ಆಸಕ್ತಿಯನ್ನು ಗಣನೆಗೆ ತೆಗೆದುಕೊಂಡು ನಾವು ಪ್ರತಿವರ್ಷ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತೇವೆ. ಈ ವರ್ಷದ ವಿಜೇತೆ ಅನ್ವಿತಾಳಿಗೆ ನಮ್ಮ ತಂಡದ ಪರವಾಗಿ ಶುಭ ಹಾರೈಸುತ್ತೇವೆ ಎಂದು  ಗೂಗಲ್ ಇಂಡಿಯಾದ ಮಾರ್ಕೆಟಿಂಗ್ ಮುಖ್ಯಸ್ಥೆ ಸಪ್ನ ಹೇಳಿದ್ದಾರೆ.

doodle-4-google-childrens-day-2016-india-5995349191688192-hp2x (1)

ಗೂಗಲ್ ತೆರೆದೊಡನೇ ನಮಗೆ ಕಾಣಿಸುವ ಈ ಮೇಲಿನ ಚಿತ್ರ ಅನ್ವಿತಾಳದ್ದು. ಅನ್ವಿತಾಳ ಮುಂದಿನ ಜೀವನ ಉಜ್ವಲವಾಗಲೆಂದು ಗೂಗಲ್ ಹಾರೈಸಿದೆ.

nkhap

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

68 ವರ್ಷಗಳ ಬಳಿಕ ಇಂದು ಭೂಮಿಯ ಸಮೀಪ ಬರಲಿದೆ ಸೂಪರ್ಮೂನ್ ಬಗ್ಗೆ 7 ಮುಖ್ಯ ವಿವರಗಳು

ಮುಂದಿನ ಸುದ್ದಿ »

ಚೀನಾ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್ ಮೃತ್ಯು

ಸಿನೆಮಾ

  • ನಟಿ ಅಪಹರಣ ಪ್ರಕರಣ: 4ನೇ ಬಾರಿಯೂ ದಿಲೀಪ್ ಜಾಮೀನು ಅರ್ಜಿ ವಜಾ!

    September 18, 2017

    ನ್ಯೂಸ್ ಕನ್ನಡ ವರದಿ-(18.9.17): ನಟಿಯೊಬ್ಬಳ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಮತ್ತೆ ತಿರಸ್ಕರಿಸಿದೆ. ಜುಲೈ 10ರಂದು ಬಂಧಿತರಾಗಿದ್ದ ದಿಲೀಪ್ ಈ ಹಿಂದೆ ಜುಲೈ 24ರಂದು ಜಾಮೀನಿಗೆ ಅರ್ಜಿ ...

    Read More
  • ಅ.6: ಗಲ್ಫ್ ನಲ್ಲಿ ಮಾರ್ಚ್ 22 ಸಿನಿಮಾ ಬಿಡುಗಡೆ

    September 17, 2017

    ನ್ಯೂಸ್ ಕನ್ನಡ ವರದಿ-(17.9.17): ರಾಜ್ಯಾದ್ಯಂತ ಭಾರೀ ಸುದ್ದಿ ಮಾಡುತ್ತಿರುವ ಹಾಗು ಮಾಧ್ಯಮಗಳ ಪ್ರಶಂಶೆಯ ಸುರಿಮಳೆಗೆ ಭಾಜನವಾಗಿರುವ  ‘ಮಾರ್ಚ್ 22’  ಸಿನೆಮಾ  ದುಬೈ, ಶಾರ್ಜಾ, ಅಬುಧಾಬಿ ಸೇರಿದಂತೆ ಯುಎಇ(ಗಲ್ಫ್) ಯಾದ್ಯಂತ ಅಕ್ಟೊಬರ್ 6 ರಂದು ಬಿಡುಗಡೆಯಾಗುತ್ತಿದೆ. ಸಿನೆಮಾದ ಪ್ರಥಮ ಪ್ರದರ್ಶನದಲ್ಲಿ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×