ನಾನೇಕೆ ಶಾಸಕನಾಗಬಾರದು ಎಂದು ಆಮಿಷಗಳ ನೋಟೀಸ್ ಹೊರಡಿಸಿದವನ ವಿರುದ್ಧ ಕೇಸು ದಾಖಲು!

0
501

ನ್ಯೂಸ್ ಕನ್ನಡ ವರದಿ-(07.04.18): ಚುನಾವಣಾ ಪ್ರಣಾಳಿಕೆಗಳನ್ನು ಹಲವು ಪಕ್ಷಗಳು ಹಲವು ರೀತಿಯಲ್ಲಿ ತಯಾರಿಸುತ್ತಾರೆ. ಇವುಗಳಲ್ಲಿ ಸಾಕಷ್ಟು ಆಮಿಷಗಳು ಇರುತ್ತವೆ. ಅವು ನಡೆಯುತ್ತದೋ ಇಲ್ಲವೋ ಬೇರೆ ವಿಷಯ. ಇದೀಗ ವಿಭಿನ್ನವಾಗಿ ವ್ಯಕ್ತಿಯೋರ್ವ ನೋಟೀಸ್ ಮೂಲಕ ಪ್ರಣಾಳಿಕೆಯನ್ನು ಹೊರಡಿಸಿದ್ದು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿತ್ತು. ಮದ್ಯ, ಅನ್ನ, ಸೀರೆ, ಉಚಿತ ಮೊಬೈಲ್ ಡೇಟಾ ಮುಂತಾದ ಆಮಿಷಗಳನ್ನು ಒಡ್ಡಿದ್ದ ಅಭ್ಯರ್ಥಿಯ ವಿರುದ್ಧ ಇದೀಗ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಯನಮಲಪಾಡಿ ಗ್ರಾಮದ ನಿವಾಸಿಯಾಗಿರುವ ಸುರೇಶ್ ಎಂಬಾತ, ಚಿಂತಾಮಣಿ ಕ್ಷೇತ್ರದಿಂದ ತಾನೇಕೆ ಶಾಸಕನಾಗಬಾರದು ಎಂಬ ಹೆಸರಿನಲ್ಲಿ ನೋಟಿಸ್ ಪ್ರಿಂಟ್ ಮಾಡಿ ಪ್ರಚಾರ ಮಾಡಿದ್ದ. ಈ ನೋಟೀಸ್ ವೈರಲ್ ಆಗಿತ್ತು. ಮಹಿಳೆಯರಿಗೆ, ಪುರುಷರಿಗೆ ಮತ್ತು ವಿದ್ಯಾರ್ಥಿಗಳಿಗೆ ನಾನಾ ಬಗೆಯ ಆಮಿಷ ಒಡ್ಡಲಾಗಿತ್ತು. 18 ವರ್ಷದ ಮೇಲಿನ ಎಲ್ಲರಿಗೂ ಉಚಿತ ಮದ್ಯ ವಿತರಿಸುತ್ತೇನೆ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು. ಇದೀಗ ನೀತಿ ಸಂಹಿತೆ ಜಾರಿಯಲ್ಲಿರುವ ವೇಳೆ ಈ ಪ್ರಚಾರ ನಡೆಸಿದ್ದಕ್ಕೆ ಚುನಾವಣಾ ಅಧಿಕಾರಿಗಳು ಈತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here