“ಕೇಜ್ರಿವಾಲ್ ಭಯೋತ್ಪಾದಕ ಅಲ್ಲ ದೇಶಭಕ್ತ ಎಂದು ದೆಹಲಿ ಜನತೆ ತೋರಿಸಿದೆ”

0
16

ನ್ಯೂಸ್ ಕನ್ನಡ ವರದಿ: ಆಮ್ ಆದ್ಮಿ ಪಕ್ಷ 45 ರಲ್ಲಿ ಗೆದ್ದಿದ್ದು ಸರ್ಕಾರ ರಚನೆಗೆ ಅರ್ಹತೆ ಪಡೆದಿದೆ ಇನ್ನೂ 18 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಕಾರಣ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು. ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಅವರ ಹುಟ್ಟುಹಬ್ಬ ಕೂಡ ಇಂದೇ ಆಗಿದೆ. ಹಾಗೂ ಬಿಜೆಪಿ 4 ಸ್ಥಾನ ಗೆದ್ದಿದ್ದು 3ರಲ್ಲಿ ಮುನ್ನಡೆ ಕಾಯ್ದಿರಿಸಿಕೊಂಡಿದೆ. ಕಾಂಗ್ರೆಸ್ ಖಾತೆ ತೆರೆಯದೆ ಮಕಾಡೆ ಮಲಗಿದೆ. ಆಪ್ ಅಭ್ಯರ್ಥಿಗಳ ಮತ್ತು ಫಲಿತಾಂಶದ ಕಂಪ್ಲೀಟ್ ಅಪ್ಡೇಟ್ ಇಲ್ಲಿದೆ.

ಅರವಿಂದ್ ಕೇಜ್ರಿವಾಲ್ ಭಯೋತ್ಪಾದಕ ಅಲ್ಲ ದೇಶಭಕ್ತ ಎಂದು ದೆಹಲಿ ಜನತೆ ತೋರಿಸಿದೆ. ಅವರು ದೇಶವನ್ನು ಕಟ್ಟಲು ಶ್ರಮಿಸುತ್ತಿದ್ದಾರೆ. ಬಿಜೆಪಿ ಏನು ಕೆಲಸ ಮಾಡುತ್ತಿದೆ ಅದು ದೇಶಭಕ್ತಿ ಅಲ್ಲ- ರಾಘವ್ ಚಡ್ಡಾ- ಆಪ್ ಅಭ್ಯರ್ಥಿ

ಅಭಿವೃದ್ಧಿ ಕೆಲಸಗಳಿಗಾಗಿ ಜನರು ಮತ ಹಾಕಿದ್ದಾರೆ, ಇದು ಅಭಿವೃದ್ಧಿಗೆ ಸಂದ ಗೆಲುವು, ಅರವಿಂದ್ ಕೇಜ್ರಿವಾಲ್ ಅವರಿಗೆ ಶುಭಾಶಯ- ತೇಜಸ್ವಿ ಯಾದವ್, ಆರ್‌ಜೆಡಿ ಮುಖಂಡ.

ಕೇಜ್ರಿವಾಲ್‌ಗೆ ಉದ್ಧವ್ ಠಾಕ್ರೆ ಶುಭಾಶಯ

ಕೇಜ್ರಿವಾಲ್ ಗೆಲುವಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಭ ಹಾರೈಸಿದ್ದಾರೆ. ಜನರ ಇಚ್ಛೆಯಂತೆ, ಜನರ ಮಾತಿನಿಂದ ದೇಶವನ್ನು ನಡೆಸಬಹುದು ಎನ್ನುವುದು ಖಾತ್ರಿಯಾಗಿದೆ. ಮನ್‌ಕಿ ಬಾತ್‌ನಿಂದ ಅಲ್ಲ ಜನ್‌ ಕಿ ಬಾತ್‌ನಿಂದ ದೇಶ ನಡೆಸಬಹುದು ಎಂದು ಹೇಳಿದ್ದಾರೆ.

ಪ್ರಚಂಡ ಗೆಲುವಿನ ನಂತರ ಕೇಜ್ರಿವಾಲ್ ಫಸ್ಟ್ ರಿಯಾಕ್ಷನ್.

ಪ್ರಚಂಡ ಗೆಲುವಿಗೆ ಅರವಿಂದ ಕೇಜ್ರಿವಾಲ್ ಅವರು ಮತದಾರರು, ಕಾರ್ಯಕರ್ತರು ಹಾಗೂ ತಮ್ಮ ಕುಟುಂಬಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ‘ನನ್ನ ಮಡದಿಯ ಹುಟ್ಟುಹಬ್ಬ ಸಹ ಇಂದು, ನಾನು ಕೇಕ್ ತಿಂದಿದ್ದೇನೆ. ನಿಮಗೂ ಕೇಕ್ ತಿನ್ನಿಸುತ್ತೇನೆ’ ಎಂದರು.

ಮನೀಷ್ ಸಿಸೋಡಿಯಾಗೆ ಗೆಲುವು
ಪಟ್ಪರ್‌ಗಂಜ್ ಶಾಸಕನಾಗಿ ಪುನಃ ಆಯ್ಕೆಯಾಗಿರುವುದಕ್ಕೆ ಸಂತಸವಾಗಿದೆ. ಬಿಜೆಪಿಯು ಜನರು ಹಾಗೂ ಸರ್ಕಾರದ ನಡುವೆ ಬಿರುಕುಂಟು ಮಾಡಲು ಪ್ರಯತ್ನಿಸಿತ್ತು. ಆದರೆ ಕೊನೆಗೆ ಕೇವಲ ದೆಹಲಿಯ ಅಭಿವೃದ್ಧಿ ಫಲಕೊಟ್ಟಿದೆ. ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ.-ಮನೀಷ್ ಸಿಸೋಡಿಯಾ

ದೇಶ ಒಡೆಯಲು ಹೊರಟಿದ್ದವರಿಗೆ ಪಾಠ
ಇದು ದೆಹಲಿಯ ಅಭಿವೃದ್ಧಿ ಹಾಗೂ ಜನರ ಗೆಲುವು, ದೇಶವನ್ನು ಒಡೆಯಲು ಹೊರಟಿದ್ದವರಿಗೆ ಇದೊಂದು ಪಾಠವಾಗಿದೆ. ಸುಂದರ ದೆಹಲಿ ಕಟ್ಟುವ ಕೇಜ್ರಿವಾಲ್ ಅವರ ಕನಸು ನನಸಾಗಿದೆ.- ಅಖಿಲೇಶ್ ಪಾಟಿ ತ್ರಿಪಾಠಿ , ಮಾಡೆಲ್ ಟೌನ್ ಆಪ್ ಅಭ್ಯರ್ಥಿ

ದೆಹಲಿಯ ಜನತೆ ಬಿಜೆಪಿ ಹಾಗೂ ಅಮಿತ್ ಶಾಗೆ ಶಾಕ್ ಆಗುವಂತೆ ಫಲಿತಾಂಶ ನೀಡಿದ್ದಾರೆ. ದ್ವೇಷ ಸೋತಿದೆ , ಅಭಿವೃದ್ಧಿಯ ಗೆಲುವಾಗಿದೆ. ನಾವಲ್ಲ ಜನತೆಯೇ ದಾಖಲೆ ಮುರಿದಿದ್ದಾರೆ.- ಅಮಾನತುಲ್ಲಾ ಖಾನ್, ಆಪ್ ಅಭ್ಯರ್ಥಿ

LEAVE A REPLY

Please enter your comment!
Please enter your name here