ಮೋದಿ ತಮ್ಮ ಜನನ ಪ್ರಮಾಣಪತ್ರದ ಜೊತೆ ಕುಟುಂಬದ ದಾಖಲೆಯನ್ನು ದೇಶದ ಮುಂದಿಡಲಿ: ಅನುರಾಗ್ ಕಶ್ಯಪ್ ಸವಾಲ್

0
90

ನ್ಯೂಸ್ ಕನ್ನಡ ವರದಿ: ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯ ಟೀಕಾಕಾರರಲ್ಲಿ ಒಬ್ಬರಾಗಿರುವ ನಿರ್ದೇಶಕ ಅನುರಾಗ್ ಕಶ್ಯಪ್, ಸರಕಾರ ಕಾಯ್ದೆಯನ್ನು ಜನವರಿ 10ರಂದು ಜಾರಿಗೊಳಿಸಿದ ಬೆನ್ನಿಗೇ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿಯ ಶಿಕ್ಷಣದ ಪುರಾವೆ ಪ್ರಸ್ತುತಪಡಿಸುವಂತೆ ಹಾಗೂ ಅವರ `ರಾಜಕೀಯ ಶಾಸ್ತ್ರ’ ಪದವಿಯ ಪ್ರಮಾಣ ಪತ್ರ ನೋಡಬೇಕೆಂದು ಕಶ್ಯಪ್ ಹೇಳಿದ್ದಾರೆ.

ಅಷ್ಟೇ ಅಲ್ಲ, ಪ್ರಧಾನಿ ಮೋದಿ ತಮ್ಮ ಜನನ ಪ್ರಮಾಣಪತ್ರದ ಜತೆಗೆ ತಮ್ಮ ತಂದೆ ಹಾಗೂ ಸಂಪೂರ್ಣ ಕುಟುಂಬದ ಜನನ ಪ್ರಮಾಣಪತ್ರವನ್ನು ದೇಶದ ಮುಂದಿಡಬೇಕು ಹಾಗೂ ನಂತರವಷ್ಟೇ ನಾಗರಿಕರಿಂದ ದಾಖಲೆಗಳನ್ನು ಕೇಳಬೇಕು ಎಂದು ಕಶ್ಯಪ್ ತಮ್ಮ ಟ್ವೀಟ್‍ ನಲ್ಲಿ ಹೇಳಿದ್ದಾರೆ. ಸರಕಾರ ಮೂಕವಾಗಿದೆ ಎಂದು ಹೇಳಿದ ಅವರು ಸಿಎಎಯನ್ನು ಅಮಾನ್ಯೀಕರಣಕ್ಕೆ ಹೋಲಿಸಿದ್ದಾರೆ.

ಅವರಿಗೆ ಮಾತನಾಡಲು ಗೊತ್ತಿದ್ದರೆ ಮಾತುಕತೆ  ನಡೆಸಬಹುದು. ಪ್ಲಾನ್ ಮಾಡಿದ ಪ್ರಶ್ನೆ ಬಿಟ್ಟು ಬೇರೆ ಒಂದೇ ಒಂದು ಪ್ರಶ್ನೆ ಎದುರಿಸಲು ಅವರಿಗೆ ಸಾಧ್ಯವಿಲ್ಲ, ಅವರಿಗೆ ಯಾವುದೇ ಯೋಜನೆ ಹಾಗೂ ವ್ಯವಸ್ಥೆಯಿಲ್ಲ. ಇದೊಂದು ಮೂಕ ಸರಕಾರ, ಅವರ ಸಿಎಎ ಅಮಾನ್ಯೀಕರಣದಂತೆ. ಕೇವಲ ಉಪಟಳ ಎಂದು ಅವರು  ಟ್ವೀಟ್‍ ನಲ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here