ಎಸ್ಪಿ ಅಣ್ಣಾಮಲೈಗಾಗಿ ಅಭಿಮಾನಿಯಿಂದ ಸ್ಪೆಷಲ್ ಹಾಡು ರಚನೆ!

0
1682

ನ್ಯೂಸ್ ಕನ್ನಡ ವರದಿ : ಪ್ರತಿ ಕ್ಷೇತ್ರದಲ್ಲಿಯೂ ಅಭಿಮಾನಿಗಳ ಬಳಗ ಇರುವುದು ಸಾಮಾನ್ಯ. ಆದರೆ ಪೋಲೀಸ್ ಅಧಿಕಾರಿಯ ಅಭಿಮಾನಿಯಾಗಿ ತನ್ನ ಮೆಚ್ಚಿನ ನಾಯಕನಿಗಾಗಿ ಶ್ರಮ ವಹಿಸಿ ಹಾಡು ಬರೆದ ಅಭಿಮಾನಿ ಅಂದರೆ ಗಮನಾರ್ಹ ವಿಷಯವೇ. ಅಣ್ಣಾಮಲೈ ಇವರ ಹೆಸರು ಕೇಳಿದರೆ ಸಾಕು ಅಪರಾಧಿಗಳು ಬೆಚ್ಚಿ ಬೀಳ್ತಾರೆ. ತಮ್ಮ ಕರ್ತವ್ಯ ನಿಷ್ಠೆ, ಖಡಕ್​ ಮಾತುಗಾರಿಕೆ ಮೂಲಕ ಚಿಕ್ಕಮಗಳೂರಿನಲ್ಲೇ ಅಲ್ಲದೆ, ಕರ್ನಾಟಕದಾದ್ಯಂತ ಇವರು ಸಖತ್​ ಫೇಮಸ್​. ಇವರಿಗೆ ಲಕ್ಷಾಂತರ ಫ್ಯಾನ್​ ಫಾಲೋಯರ್ಸ್​ ಇದ್ದಾರೆ. ಅವರಲ್ಲಿ ಅಭಿಮಾನಿಯೊಬ್ಬ ಇವರ ಕಾರ್ಯವೈಖರಿ ಮತ್ತು ಪೋಲಿಸ್ ಇಲಾಖೆಯಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಮೆಚ್ಚಿ ಅವರಿಗಾಗಿಯೇ ಒಂದು ಹಾಡು ಬರೆದಿದ್ದಾನೆ.

ಸಿಂಗಂ..ಸಿಂಗಂ..ಸಿಂಗಂ.. ಅಣ್ಣಾಮಲೈ… ಹಿ ಈಸ್​ ರಿಯಲಿ ಸಿಂಗಂ ಅಣ್ಣಾಮಲೈ… ಎಂದು ಆರಂಭವಾಗುವ ಈ ಹಾಡು ಎಸ್ಪಿ ಅಣ್ಣಾಮಲೈ ಅವರಂತೆಯೇ ಖಡಕ್ ಆಗಿದ್ದು, ಕೇಳಲು ತುಂಬಾ ಚೆನ್ನಾಗಿದೆ. ಆದರೆ ಶ್ರಮವಹಿಸಿ ಹಾಡು ಬರೆದು, ಹಾಡಿ ಅಣ್ಣಾಮಲೈರನ್ನು ಕೊಂಡಾಡಿರುವ ಅಭಿಮಾನಿ ತನ್ನ ಹೆಸರು ತಿಳಿಯಬಾರದು ಎಂದೂ ಮನವಿ ಮಾಡಿದ್ದಾನೆ. ರಿಯಲ್​ ಹೀರೋ ಅಣ್ಣಾಮಲೈರ ಕುರಿತಾದ ಈ ಹಾಡು ಈಗ ಎಲ್ಲೆಡೆ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ಅಣ್ಣಾಮಲೈ ಅಭಿಮಾನಿಗಳಿಗೆ ಈ ಹಾಡು ಅಂದರೆ ಖುಷಿಯೇ ಖುಷಿ.

cts: eenadu

LEAVE A REPLY

Please enter your comment!
Please enter your name here