ಕಾಮನ್ ವೆಲ್ತ್ ಗೇಮ್ಸ್: 0.20 ಸೆಕೆಂಡ್ ಅಂತರದಲ್ಲಿ ಪದಕ ವಂಚಿತರಾದ ಮುಹಮ್ಮದ್ ಅನಸ್!

0
584

ನ್ಯೂಸ್ ಕನ್ನಡ ವರದಿ-(10.04.18): 2016 ರ ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಹಾಗೂ 400ಮೀ. ಓಟದ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿದು ಭರ್ಜರಿ ಪ್ರದರ್ಶನ ತೋರಿದ್ದ ಕೇರಳದ ಮುಹಮ್ಮದ್ ಅನಸ್ ಇದೀಗ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಗಮನಾರ್ಹ  ಪ್ರದರ್ಶನ ತೋರಿದ್ದು, ಕೆಲವೇ ಕೆಲವು ಸೆಕುಂಡುಗಳ ಅಂತರದಲ್ಲಿ ಪದಕ ವಂಚಿತರಾಗಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮುಹಮ್ಮದ್ ಅನಸ್ ನೂತನ ದಾಖಲೆ ನಿರ್ಮಿಸಿದ್ದರು. 1958ರಲ್ಲಿ ಮಿಲ್ಖಾ ಸಿಂಗ್ ಬಳಿಕ 400ಮೀ. ರೇಸ್ ನಲ್ಲಿ ಫೈನಲ್ ಹಂತಕ್ಕೆ ಅನಸ್ ತಲುಪಿದ್ದು, ಪದಕ ಗೆಲ್ಲಬಹುದೆಂಬ ನಿರೀಕ್ಷೆಯಿತ್ತು. ಆದರೆ 45.31 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಮುಹಮ್ಮದ್ ಅನಸ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. 0.20 ಸೆಕುಂಡುಗಳಲ್ಲಿ ಪದಕ ಕೈತಪ್ಪಿದರೂ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಟ್ರ್ಯಾಕ್ ನಲ್ಲು ಉತ್ತಮ ಪ್ರದರ್ಶನ ತೋರಿದ ಮುಹಮ್ಮದ್ ಅನಸ್ ಕ್ರೀಡಾಪ್ರೇಮಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here