ನಾನು ರಾಜಕಾರಣಕ್ಕೆ ಬಂದವನು, ಸಮಾಜ ಸೇವೆ ಮಾಡೋದಕ್ಕಲ್ಲ: ಅನಂತ್ ಕುಮಾರ್ ಹೆಗ್ಡೆ

0
2162

ಕೇಂದ್ರ ಕೌಶಲಾಭಿವೃದ್ಧಿ ಸಚಿವ ಹಾಗೂ ಬಿಜೆಪಿ ಮುಖಂಡ ಅನಂತ್ ಕುಮಾರ್ ಹೆಗ್ಡೆ ಈ ಹಿಂದೆ ಹಲವಾರು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದರು. ಬಳಿಕ ಹಲವು ದಿನಗಳ ಕಾಲ ಅವರ ಸುದ್ದಿಯೇ ಇರಲಿಲ್ಲ. ಎಲ್ಲಾ ರೀತಿಯ ವಿವಾದಗಳಿಂದಲೂ ದೂರ ಉಳಿದಿದ್ದರು, ಈ ರೀತಿ ಹೇಳಿಕೆ ನೀಡಬಾರದೆಂದು ಪಕ್ಷದ ಮುಖಂಡರು ತಾಕೀತು ಮಾಡಿದ್ದರು. ಇದೀಗ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಅನಂತ್ ಕುಮಾರ್, ನಾವಿಲ್ಲಿ ರಾಜಕೀಯ ಮಾಡಲು ಬಂದಿದ್ದೇವೆಯೇ ಹೊರತು ಸಮಾಜ ಸೇವೆ ಮಾಡೋದಿಕ್ಕಲ್ಲ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದಾರೆ.

ಶಿರಸಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ”ನಾವು ಇಲ್ಲಿ ಬಂದು ಕುಳಿತಿರುವುದು ರಾಜಕಾರಣ ಮಾಡಲಿಕ್ಕೆ. ರಾಜಕಾರಣ ಬಿಟ್ಟು ಬೇರೆನು ಮಾಡಬೇಕು. ರಾಜಕಾರಣ ಮಾಡುವುದಕ್ಕಾಗಿ ನಾವು ತಾಲೂಕು ಅಧ್ಯಕ್ಷ ಆಗಿದ್ದು, ತಾಲೂಕು ಪ್ರಮುಖ್‌ ಆಗಿದ್ದು, ಜಿಲ್ಲಾ ಪ್ರಮುಖ್‌ ಆಗಿದ್ದು. ನಾವೇನು ಇಲ್ಲಿ ಸಮಾಜ ಸೇವೆ ಮಾಡಲು ಬಂದು ಕುಳಿತಿಲ್ಲ” ಎಂದರು. ‘ಮಾಧ್ಯಮಗಳು ಹೇಗೆ ಬರೆದುಕೊಳ್ಳುತ್ತಾರೋ ಹಾಗೇ ಬರೆದುಕೊಳ್ಳಲಿ’ ಎಂದು ಸವಾಲನ್ನೂ ಹಾಕಿದರು.

LEAVE A REPLY

Please enter your comment!
Please enter your name here