ಆನಂದ್​ ಸಿಂಗ್ ಮನವೊಲಿಕೆಗೆ ಯತ್ನ : ಸಂಧಾನದ ಜವಾಬ್ದಾರಿ ಹೊತ್ತ ಡಿಕೆಶಿ !

0
268

ನ್ಯೂಸ್ ಕನ್ನಡ ವರದಿ : ಕಳೆದ ವಾರ ತಮ್ಮ ಪ್ರಥಮ ಸಂಸತ್ ಭಾಷಣದಲ್ಲಿ ಮಾತನಾಡಿದ್ದ ಯುವ ಸಂಸದ ತೇಜಸ್ವಿ ಸೂರ್ಯ ರಾಜ್ಯದಲ್ಲಿ ಹೊಸ ಸರ್ಕಾರ ಉದಯವಾಗುವ ಬಗ್ಗೆ ಸುಳಿವು ನೀಡಿದ್ದರ ಬೆನ್ನಲ್ಲೇ ಶಾಸಕ ಆನಂದ್​ ಸಿಂಗ್​ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಯಡಿಯೂರಪ್ಪ ಸುದ್ದಿಗೋಷ್ಠಿ ಕರೆದಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು ಕಳೆದ ವರ್ಷ ಅವಿಶ್ವಾಸ ನಿರ್ಣಯ ವೇಳೆ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಆನಂದಸಿಂಗ್ ಅವರ ಮನವೊಲಿಸಿ ವಿಧಾನಸೌಧಕ್ಕೆ ಕರೆತಂದವರೇ ಡಿಕೆಶಿ ಈಗ ಪುನಃ ಇದೇ ಜವಾಬ್ದಾರಿಯನ್ನು ಪುನಃ ಹೊತ್ತ ಡಿಕೆಶಿ ಆನಂದ್ ಸಿಂಗ್ ಮನವೊಲಿಸುವತ್ತ ಸಫಲರಾಗುತ್ತಾರೆಯೇ ಎಂದು ನೋಡಬೇಕಾಗಿದೆ.

ಈಗಾಗಲೇ ಕಾಂಗ್ರೆಸ್​ ನಾಯಕರು ಆನಂದ್​ ಸಿಂಗ್ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದರೂ ಸಂಪರ್ಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್​ ಅವರಿಗೆ ಆನಂದ್​ ಸಿಂಗ್ ಮನವೊಲಿಕೆಯ ಉಸ್ತುವಾರಿ ವಹಿಸಲಾಗಿದೆ. ಜಿಂದಾಲ್​ ಕಂಪನಿಗೆ ಭೂಮಿ ಪರಭಾರೆ ನೀಡಿರುವ ವಿಚಾರವಾಗಿ ಅಸಮಾಧಾನವಿದ್ದರೆ ಅದನ್ನು ಬಗೆಹರಿಸುವ ಬಗ್ಗೆ ಕೆಲ ಕಾಂಗ್ರೆಸ್​ ಮುಖಂಡರು ಆನಂದ್​ ಸಿಂಗ್​ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಜಿಂದಾಲ್ ವಿಚಾರವಾಗಿ ಉಪಸಮಿತಿ ನೇಮಿಸಲಾಗಿದೆ. ತಮ್ಮ ಮನವಿಯನ್ನ ಉಪಸಮಿತಿ ಪರಿಶೀಲನೆ ಮಾಡಲಿದೆ ಎಂದು ಸಂಧಾನಕ್ಕೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆನಂದ್​ ಸಿಂಗ್ ಬೆನ್ನಲ್ಲೇ ಇನ್ನೂ ಆರೇಳು ಶಾಸಕರು ರಾಜೀನಾಮೆ ನೀಡಲು ಮುಂದಾಗಿರುವುದರಿಂದ ಸಚಿವ ಡಿ.ಕೆ. ಶಿವಕುಮಾರ್​ ಅವರ ಹೆಗಲಿಗೆ ಸಂಧಾನದ ಜವಾಬ್ದಾರಿಯನ್ನು ವಹಿಸಲಾಗಿದೆ.

LEAVE A REPLY

Please enter your comment!
Please enter your name here