ಈ ದೇಶವು ನರೇಂದ್ರ ಮೋದಿಯ ಅಪ್ಪನ ಆಸ್ತಿಯಲ್ಲ, ಇದು ಎಲ್ಲರ ದೇಶ: ಅಮೂಲ್ಯ

0
362

ಈ ದೇಶವು ನರೇಂದ್ರ ಮೋದಿಯ ಅಪ್ಪನ ಆಸ್ತಿಯಲ್ಲ, ಇದು ಎಲ್ಲರ ದೇಶ: ಅಮೂಲ್ಯ
ಉಡುಪಿಯಲ್ಲಿ ಕೇಂದ್ರದ ವಿರುದ್ಧ ಗುಡುಗಿದ ವಿದ್ಯಾರ್ಥಿ ನಾಯಕಿ!

ನ್ಯೂಸ್ ಕನ್ನಡ ವರದಿ: (30.01.2020): ಎನ್ನಾರ್ಸಿ ಮತ್ತು ಸಿಎಎ ಎಂಬ ಸಂವಿಧಾನ ವಿರೋಧಿ ಕಾನೂನನ್ನು ವಿರೋಧಿಸಿ ದೇಶದ ಹಲವೆಡೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದೀಗ ಇಂದು ಉಡುಪಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವಿದ್ಯಾರ್ಥಿ ನಾಯಕಿ ಅಮೂಲ್ಯಾ ಲಿಯೋನಾ, ಜಾಮಿಯಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಮೇಲೆ ಗುಂಡಿಕ್ಕಿದ ಕ್ರಮವನ್ನು ವಿರೋಧಿಸಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾರ ಅಪ್ಪನ ಆಸ್ತಿಯಲ್ಲ ಭಾರತ. ಇಲ್ಲಿ ಎಲ್ಲರಿಗೂ ಅವರದ್ದೇ ಆದ ಹಕ್ಕಿದೆ. ಇದು ಎಲ್ಲರ ದೇಶ. ಜಾಮಿಯಾದಲ್ಲಿ ಮಕ್ಕಳ ಮೇಲೆ ಎನ್ ಕೌಂಟರ್ ಮಾಡಿಸಲಾಗುತ್ತಿದೆ. ಗುಂಡಿಗೆ ಎದೆಯೊಡ್ಡಲು ನಾವೂ ತಯಾರಿದ್ದೇವೆ. ನಾವು ಸಾವರ್ಕರ್, ಗೋಳ್ವಲ್ಕರ್ ಮಕ್ಕಳಲ್ಲ, ನಾವು ಅಂಬೇಡ್ಕರ್ ಮಕ್ಕಳು ಎಂದು ಗುಡುಗಿದರು. ಬಳಿಕ ಮಾತನಾಡಿದ ಅವರು, ಮಾಧ್ಯಮಗಳು ಸರಿಯಿದ್ದರೆ ದೇಶವು ಸರಿಯಾಗುತ್ತದೆ. ಆದರೆ ಕೆಲವು ಮಾಧ್ಯಮಗಳು ಅಧಿಕಾರಿಗಳ ಬೂಟು ನೆಕ್ಕುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here