ಬಿಹಾರ ರಾಜ್ಯದ 2100 ರೈತರ ಸಾಲಗಳನ್ನು ತೀರಿಸಿದ ಅಮಿತಾಭ್ ಬಚ್ಚನ್!

0
513

ನ್ಯೂಸ್ ಕನ್ನಡ ವರದಿ: (12.06.19): ಕೃಷಿಗಾಗಿ ಮಾಡಿದ ಸಾಲಗಳನ್ನು ತೀರಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡ ಹಲವಾರು ರೈತರ ಪ್ರಕರಣಗಳನ್ನು ನಾವು ದಿನವೂ ಕೇಳುತ್ತೇವೆ. ಆದರೆ ಇದೀಗ ಬಾಲಿವುಡ್ ನ ಖ್ಯಾತ ಹಾಗೂ ಹಿತಿಯ ನಟ ಅಮಿತಾಭ್ ಬಚ್ಚನ್ ಪ್ರಶಂಸನೀಯ ಕಾರ್ಯವೊಂದನ್ನು ಮಾಡಿದ್ದಾರೆ. ಬಿಹಾರ ರಾಜ್ಯದಲ್ಲಿನ ಒಟ್ಟು 2100 ರೈತರು ಮಾಡಿಟ್ಟಿದ್ದ ಸಾಲವನ್ನು ಅಮಿತಾಭ್ ಬಚ್ಚನ್ ತೀರಿಸಿ ಬ್ಯಾಂಕ್ ಗೆ ಮರುಪಾವತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತಾದಂತೆ ತಮ್ಮ ಬ್ಲಾಗ್ ನಲ್ಲಿ ಅವರು ಉಲ್ಲೇಖಿಸಿದ್ದಾರೆ.

ಇಂದು ನಾನು ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇನೆ. ಬಿಹಾರದಲ್ಲಿ ಸಾಲ ತೀರಿಸಲಾಗದೆ ಪರದಾಡುತ್ತಿರುವ ರೈತರ ಪೈಕಿ 2,100 ರೈತರನ್ನು ಆಯ್ಕೆ ಮಾಡಿ ಅವರ ಸಾಲವನ್ನು ಒನ್​ ಟೈಮ್​ ಸೆಟಲ್​ಮೆಂಟ್​ ಮೂಲಕ ಬ್ಯಾಂಕ್​ಗೆ ಪಾವತಿಸಲಾಗಿದೆ. ಇಂದು ಕೆಲವು ರೈತರನ್ನು ನಮ್ಮ ಮನೆಗೆ ಆಹ್ವಾನಿಸಿ ಅವರಿಗೆ ಸಾಲ ಮರುಪಾವತಿ ಪತ್ರವನ್ನು ವಿತರಿಸಿದ್ದೇವೆ. ಶ್ವೇತಾ ಮತ್ತು ಅಭಿಷೇಕ್​ ಸಾಲ ಮರುಪಾವತಿ ಪತ್ರವನ್ನು ವಿತರಿಸಿದರು ಎಂದು ತಿಳಿಸಿದ್ದಾರೆ.

https://tmblr.co/ZwrX5v2ioJTvF

LEAVE A REPLY

Please enter your comment!
Please enter your name here