ವಿರೋಧ ಪಕ್ಷಗಳು ಸಭೆಸೇರಿ ವಿಪಕ್ಷ ನಾಯಕನನ್ನು ಆರಿಸಲಿ, ಪ್ರಧಾನಮಂತ್ರಿಯಲ್ಲ: ಅಮಿತ್ ಶಾ

0
134

ನ್ಯೂಸ್ ಕನ್ನಡ ವರದಿ (16-5-2019): ಇನ್ನೇನು ಚುನಾವಣಾ ಫಲಿತಾಂಶವು ಪ್ರಕಟಗೊಳ್ಳಲು ಕೆಲವೇ ದಿನಗಳು ಬಾಕಿಯಿದ್ದು, ಇನ್ನೊಂದು ಹಂತದ ಮತದಾನ ನಡೆಯಲಿದೆ. ಬಹುಮತಕ್ಕೆ ಬೇಕಾಗಿರುವ ಸಂಖ್ಯೆಯನ್ನು ಆರನೇ ಹಂತದ ಚುನಾವಣೆಯಲ್ಲೇ ನಾವು ದಾಟಿಯಾಗಿದ್ದು, ಕೊನೆಯ ಹಂತದ ಚುನಾವಣೆಯ ನಂತರ ಮುನ್ನೂರಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲುವುದು ನಿಶ್ಚಿತ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅಮಿತ್ ಶಾ, ನೋಡುತ್ತಾ ಇರಿ.. ಈ ಬಾರಿ ವಿರೋಧ ಪಕ್ಷಗಳನ್ನು ಗುಡಿಸಿ ಹಾಕುತ್ತೇವೆ. ಅವರು ಪ್ರಧಾನಿ ಯಾರಾಗಬೇಕೆಂದು ಸಭೆ ಬೇಕಾದರೆ ಕರೆಯಲಿ ಎಂದು ಶಾ ವ್ಯಂಗ್ಯವಾಡಿದ್ದಾರೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತ ಎಂದಿರುವ ಅಮಿತ್ ಶಾ, ಪ್ರಾದೇಶಿಕ ಪಕ್ಷಗಳು ಫೆಡರಲ್ ಫ್ರಂಟ್ ಹುಟ್ಠುಹಾಕಲು ಪ್ರಯತ್ನಿಸುತ್ತಿದ್ದು, ಅದ್ಯಾವುದೂ ನಡೆಯುವುದಿಲ್ಲ ಎಂದು ಹೇಳಿದ್ದಾರೆ. ಎನ್ಡಿಎ ಮೈತ್ರಿಕೂಟದ ಹೊರತಾದ ಪಕ್ಷಗಳು ಎಲ್ಲಾ ಒಂದಾಗಿ, ಯಾರು ವಿರೋಧ ಪಕ್ಷದ ನಾಯಕರಾಗಬೇಕೆಂದು ನಿರ್ಧರಿಸಲಿ, ಪ್ರಧಾನಮಂತ್ರಿಯಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

LEAVE A REPLY

Please enter your comment!
Please enter your name here