ಅಮೆರಿಕದ ಇಬ್ಬರು ಪ್ರತಿಷ್ಟಿತ ಆರ್ಥಿಕ ತಜ್ಞರಿಗೆ ಅರ್ಥಶಾಸ್ತ್ರ ನೊಬೆಲ್!

0
112

ನ್ಯೂಸ್ ಕನ್ನಡ ವರದಿ (ಸ್ಟಾಕ್​ಹೋಮ್): ಅಮೆರಿಕದ ಆರ್ಥಿಕ ತಜ್ಞರಾದ ವಿಲಿಯಂ ನಾರ್ಡಾಸ್ ಮತ್ತು ಪಾಲ್ ರೋಮರ್ ಅರ್ಥಶಾಸ್ತ್ರದ ನೊಬೆಲ್ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ನಾರ್ಡಾಸ್ ಮತ್ತು ರೋಮರ್ ಸಿದ್ಧಪಡಿಸಿರುವ ನವೀನ ಮಾದರಿಗಳನ್ನು ಅಳವಡಿಸಿಕೊಂಡರೆ ಜಾಗತಿಕವಾಗಿ ದೀರ್ಘಕಾಲ ಸುಸ್ಥಿರವಾದ ಆರ್ಥಿಕ ಪ್ರಗತಿ ಸಾಧ್ಯವಾಗಲಿದೆ. ಇದರಿಂದ ಇಡೀ ವಿಶ್ವಕ್ಕೆ ಒಳಿತಾಗಲಿದೆ. ಹೀಗಾಗಿ ಇವರಿಬ್ಬರನ್ನು ಪ್ರಶಸ್ತಿಗೆ ಜಂಟಿಯಾಗಿ ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಅಕಾಡೆಮಿ ತಿಳಿಸಿದೆ. ಡಿಸೆಂಬರ್ 10ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕ ವಿಲಿಯಂ ನಾರ್ಡಾಸ್, ಜಾಗತಿಕ ತಾಪಮಾನ ಏರಿಕೆಯಲ್ಲಿ ವಿತ್ತೀಯ ಪಾತ್ರದ ಬಗ್ಗೆ ಉನ್ನತ ಅಧ್ಯಯನ ನಡೆಸಿ ಮಾದರಿಗಳನ್ನು ರೂಪಿಸಿದ್ದಾರೆ. ನ್ಯೂಯಾರ್ಕ್ ವಿವಿಯ ಸ್ಟರ್ನ್ ಸ್ಕೂಲ್ ಆಫ್ ಬಿಸ್ ನೆಸ್​ನಲ್ಲಿ ಪ್ರಾಧ್ಯಾಪಕರಾದ ಪಾಲ್ ರೋಮರ್ ಪ್ರಸ್ತುತ ಪಡಿಸಿದ್ದ ಅಂತರ್ವರ್ಧಕ ಸಿದ್ಧಾಂತವು ಹೆಸರುವಾಸಿಯಾಗಿದೆ. ಹೀಗಾಗಿ ಇವರಿಬ್ಬರಿಗೆ ಪ್ರಶಸ್ತಿಯು ಘೋಷಣೆಯಾಗಿದೆ.

LEAVE A REPLY

Please enter your comment!
Please enter your name here