ಒಟ್ಟಿಗೆ ಊಟಮಾಡಿದ ರಾಜಕೀಯ ಬದ್ಧವೈರಿಗಳಾದ ಯೋಗಿ ಆದಿತ್ಯನಾಥ್ ಹಾಗೂ ಅಖಿಲೇಶ್ ಯಾದವ್?

0
1087

ನ್ಯೂಸ್ ಕನ್ನಡ ವರದಿ (16-5-2019): ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರು ಟ್ವಿಟ್ಟರ್ ನಲ್ಲಿ ಶೇರ್ ಮಾಇರುವ ಫೋಟೊವೊಂದು ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡುತ್ತಾ ಇದೆ. ಕಾರಣವೇನು ಗೊತ್ತೇ? ಉತ್ತರ ಪ್ರದೇಶದ ಮುಖ್ಯಮಂತ್ರಿ, ಬದ್ಧ ವೈರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಕುಳಿತು ಪೂರಿ, ಸಬ್ಜಿ ತಿನ್ನುತ್ತಿದ್ದಾರೆ. ಆದರೆ ಆ ಚಿತ್ರದಲ್ಲಿರುವುದು ಯೋಗಿ ಆದಿತ್ಯನಾಥ್ ಅಲ್ಲ, ಬದಲಾಗಿ ಅವರನ್ನೇ ಹೋಲುವ ಸುರೇಶ್ ಠಾಕೂರ್.

ಈ ಚಿತ್ರವನ್ನು ಅಖಿಲೇಶ್ ಯಾದವ್ ಅವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, “ಮುಖ್ಯಮಂತ್ರಿಗಳ ಮನೆಯನ್ನು ನಾನು ಖಾಲಿ ಮಾಡಿದ ಬಳಿಕ ಗಂಗಾಜಲದಿಂದ ತೊಳೆದಿದ್ದರು, ಆಗ ನಾನು ನಿರ್ಧರಿಸಿದ್ದೆ ಅವರಿಗೆ ಪೂರಿ ತಿನ್ನಿಸುತ್ತೇನೆ” ಎಂದು ಗೇಲಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here