ಕೋಹ್ಲಿ ನಂತರ ಈ ಕನ್ನಡಿಗನೇ ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ನಾಯಕ!: ಆಕಾಶ್ ಚೋಪ್ರ

0
17

ನ್ಯೂಸ್ ಕನ್ನಡ ವರದಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬಳಿಕ ನಾಯಕತ್ವವನ್ನು ಕೆಎಲ್ ರಾಹುಲ್ ವಹಿಸಿಕೊಳ್ಳುವ ಅವಕಾಶವಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಫೇಸ್‍ಬುಕ್‍ನಲ್ಲಿ ಅಭಿಮಾನಿಗಳೊಂದಿಗೆ ಚಾಟ್ ನಡೆಸಿದ ಆಕಾಶ್ ಚೋಪ್ರಾ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಟೀಂ ಇಂಡಿಯಾ ನಾಯಕತ್ವ ಸ್ಥಾನದಿಂದ ಕೊಹ್ಲಿ ಕೆಳಗಿಳಿಯುವ ವೇಳೆಗೆ ಜವಾಬ್ದಾರಿ ವಹಿಸಿಕೊಳ್ಳಲು ರಾಹುಲ್ ಸಿದ್ಧರಾಗಿರುತ್ತಾರೆ ಎಂದಿದ್ದಾರೆ.

ಐಪಿಎಲ್ 2020ರ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕ್ಯಾಪ್ಟನ್ ಆಗಿ ಹೇಗೆ ಮುನ್ನಡೆಸಲಿದ್ದಾರೆ. ಭವಿಷ್ಯದಲ್ಲಿ ಭಾರತದ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಚೋಪ್ರಾ, ರಾಹುಲ್ ನಾಯಕನಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂಬ ನಂಬಿಕೆ ಇದೆ. ಆತನ ನಾಯಕತ್ವದ ಭವಿಷ್ಯ ಬಗ್ಗೆ ಈ ಬಾರಿಯ ಟೂರ್ನಿಯಲ್ಲಿ ಸ್ಪಷ್ಟತೆ ಸಿಗಲಿದೆ. ಈ ಟೂರ್ನಿಯಿಂದ ರಾಹುಲ್‍ಗೆ ನಾಯಕತ್ವದ ಕುರಿತು ಹೆಚ್ಚಿನ ಜಾಗೃತಿ ಮೂಡಲಿದೆ. ಎದುರಾಳಿ ತಂಡದ ವಿರುದ್ಧ ಎಂತಹ ವ್ಯೂಹ ರಚಿಸಲಿದ್ದಾರೆ, ಹೇಗೆ ರನ್ ಗಳಿಸಲಿದ್ದಾರೆ ಎಂಬುವುದು ತಿಳಿಯಲಿದೆ ಎಂದಿದ್ದಾರೆ.

ಕೊಹ್ಲಿ, ರೋಹಿತ್ ಅವರನ್ನು ಗಮನಿಸಿದರೆ ಒಂದು ಅಂಶ ನಮಗೇ ಸ್ಪಷ್ಟವಾಗುತ್ತದೆ. ಇಬ್ಬರೂ ಒಂದೇ ವಯಸ್ಸಿನವರಾಗಿದ್ದು, ಒಂದು ಹಂತಕ್ಕೆ ಬಂದ ಬಳಿಕ ನಾಯಕರಾಗಿ ಗುರುತಿಸಿಕೊಂಡಿದ್ದರು. ಧೋನಿರಂತೆ ಕೊಹ್ಲಿ ಕೂಡ ಒಂದು ದಿನ ನಾಯಕತ್ವದ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ನೀಡಬೇಕಾಗುತ್ತದೆ. ಆ ಸಂದರ್ಭದಲ್ಲಿ ರಾಹುಲ್ ಮೊದಲ ಸ್ಥಾನದಲ್ಲಿರುತ್ತಾರೆ. ಇದುವರೆಗೂ ಆತನ ಆಟದ ಶೈಲಿ, ವ್ಯವಹಾರದ ಶೈಲಿಯನ್ನು ಗಮನಿಸಿದ ಸಂದರ್ಭದಲ್ಲಿ ಆತ ಕ್ಯಾಪ್ಟನ್ ಆಗಿ ಅತ್ಯುತ್ತಮ ರೀತಿಯಲ್ಲಿ ತಂಡವನ್ನು ಮುನ್ನಡೆಸುವ ನಂಬಿಕೆ ಇದೆ ಎಂದರು.

LEAVE A REPLY

Please enter your comment!
Please enter your name here