ಕಲ್ಲಡ್ಕ ಪೇಟೆಯಲ್ಲಿ ಶುಭಾರಂಭಗೊಂಡ ಭಾರ್ತಿ ಏರ್ ಟೆಲ್ ಕಚೇರಿ

0
11

ನ್ಯೂಸ್ ಕನ್ನಡ ವರದಿ: (10.09.2020):ಭಾರತದಾದ್ಯಂತ ಸೇವೆ ಸಲ್ಲಿಸುತ್ತಿರುವ ಜನಪ್ರಿಯ ಟೆಲಿಕಾಂ ಸಂಸ್ಥೆಯಾಗಿರುವ ಭಾರ್ತಿ ಏರ್ ಟೆಲ್ ನ ಪ್ರಾದೇಶಿಕ ಕಚೇರಿಯು ಬಂಟ್ವಾಳ ತಾಲೂಕಿನ ಕಲ್ಲಡ್ಕದ ಹೃದಯ ಭಾಗದಲ್ಲಿ ಇಂದು ಉದ್ಘಾಟನೆಗೊಂಡಿತು. ಪ್ರಾದೇಶಿಕ ಕಚೇರಿಯನ್ನು ಭಾರ್ತಿ ಏರ್ ಟೆಲ್ ಸಂಸ್ಥೆಯ ವಲಯ ಮಾರಾಟ ಅಧಿಕಾರಿ ಶರತ್ ಕೆ.ಎಸ್. ಉದ್ಘಾಟಿಸಿದರು.

ಉದ್ಘಾಟನೆಯ ಬಳಿಕ ಮಾತನಾಡಿದ ಶರತ್ ಕೆ.ಎಸ್., ಏರ್ ಟೆಲ್ ಸದ್ಯ ಭಾರತದಾದ್ಯಂತ ಜನರ ನೆಚ್ಚಿನ ನೆಟ್ ವರ್ಕ್ ಆಗಿದ್ದು, ಹಲವಾರು ಗ್ರಾಮೀಣ ಪ್ರದೇಶಗಳಲ್ಲೂ ವಿಸ್ತರಣೆಗೊಂಡು ಮತ್ತಷ್ಟು ಜನಪ್ರಿಯಗೊಳ್ಳುತ್ತಿದೆ. ಎಲ್ಲಾ ನಗರ ಮತ್ತು ಹಳ್ಳಿ ಪ್ರದೇಶಗಳಲ್ಲೂ ಏರ್ ಟೆಲ್ ವಿಸ್ತರಣೆಗೊಂಡಿದ್ದು, ಕಲ್ಲಡ್ಕ ಭಾಗದಲ್ಲಿ ಈ ಕಚೇರಿಯು ಜನಸಾಮಾನ್ಯರಿಗೆ ಉಪಯುಕ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ಅಧಿಕಾರಿ ಧನಂಜಯ್, ಏರ್ ಟೆಲ್ ಡಿಟಿಎಚ್ ಅಧಿಕಾರಿ ಪ್ರದೀಪ್, ಶೊರೂಮ್ ಮ್ಯಾನೇಜರ್ ಸಂಬ್ರಾದ್, ಕೆಕೆಬಿ ಟ್ರೇಡರ್ಸ್ ವ್ಯವಸ್ಥಾಪಕರಾದ ಶಮೀಮ್, ರಂಜಿತ್, ಕೆ.ಕೆ.ಬಿ ಟ್ರೇಡರ್ಸ್ ನ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here