ಇನ್ನುಮುಂದೆ ಏರ್ಟೆಲ್ ನಲ್ಲೂ ಅತೀಕಡಿಮೆ ದರದಲ್ಲಿ ದಿನನಿತ್ಯ 3ಜಿಬಿ ಡಾಟಾ ಬಳಸಿ!

0
739

ನ್ಯೂಸ್ ಕನ್ನಡ ವರದಿ-(11.04.18): ಅಂಬಾನಿ ಮಾಲಕತ್ವದ ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಬಂದ ಬಳಿಕ ಭಾರತೀಯ ಟೆಲಿಕಾಂ ಮಾರುಕಟ್ಟೆಯ ಸ್ವರೂಪವೇ ಸಂಪೂರ್ಣ ಬದಲಾಗಿದ್ದಂತೂ ನಿಜ. ಬಳಿಕ ರಿಲಯನ್ಸ್ ಜಿಯೋದೊಂದಿಗೆ ಹಲವು ನೆಟ್ ವರ್ಕ್ ಗಳು ಪೈಪೋಟಿ ನಡೆಸಲು ಪ್ರಾರಂಭಿಸಿದವು. ಆದರೆ ಸದ್ಯ ಜಿಯೋದೊಂದಿಗೆ ಭರ್ಜರಿ ಪೈಪೋಟಿ ನಡೆಸುತ್ತಿರುವುದು ಏರ್ಟೆಲ್ ಮಾತ್ರ. ಜಿಯೋ ಡಾಟಾ ನೀಡುವ ರೀತಿಯಲ್ಲಿಯೇ ಇದೀಗ ಏರ್ಟೆಲ್ ಕೂಡಾ ನೀಡಲು ಪ್ರಾರಂಭಿಸಿದ್ದು, ಇದೀಗ 349 ರೂ. ಪಾವತಿ ಮಾಡಿದರೆ ದಿನನಿತ್ಯದಂತೆ 3ಜಿಬಿ 28 ದಿನಗಳಬರೆಗೆ ಬಳಸಬಹುದಾಗಿದೆ.

ಕೇವಲ 349ರೂ. ಪಾವತಿಸಿದರೆ ದಿನವೂ 3ಜಿಬಿಯಷ್ಟು 28 ದಿನಗಳಿಗೆ ಬಳಸಬಹುದಾಗಿದೆ. ಇನ್ನು 249ರೂ. ಪಾವತಿಸಿದರೆ ದಿನನಿತ್ಯ 2ಜಿಬಿ ಡಾಟಾ ಪ್ರಮಾಣದಂತೆ 28 ದಿನಗಳ ವರೆಗೆ ಬಳಸಬಹುದಾಗಿದೆ. ಅದರೋಮದಿಗೆ 499ರೂ. ಪ್ಲಾನ್ ಕುಡಾ ಏರ್ಟೆಲ್ ಪರಿಚಯಿಸಿದ್ದು, ಇದರನ್ವಯ ದಿನನಿತ್ಯ 2ಜಿಬಿ ಡಾಟಾವನ್ನು 82 ದಿನಗಳವರೆಗೆ ಬಳಸಬಹುದಾಗಿದೆ. ಇದರೊಂದಿಗೆ ಅನ್ ಲಿಮಿಟೆಡ್ ರೋಮಿಂಗ್ ಕರೆಯನ್ನು ಕೂಡಾ ನೀಡಲಾಗಿದೆ. ಸದ್ಯ ಏರ್ಟೆಲ್ ತನ್ನ ನೆಟ್ ವರ್ಕ್ ನಿಂದ ಹೊರಹೋದ ಗ್ರಾಹಕರನ್ನೆಲ್ಲಾ ಮರಳಿ ತರುವ ಪ್ರಯತ್ನದಲ್ಲಿದೆ.

LEAVE A REPLY

Please enter your comment!
Please enter your name here