ನಾಪತ್ತೆಯಾಗಿದ್ದ ವಾಯುಪಡೆ ವಿಮಾನದ ಅವಶೇಷ 9 ದಿನಗಳ ಬಳಿಕ ಪತ್ತೆ!

0
540

ನ್ಯೂಸ್ ಕನ್ನಡ ವರದಿ: (11.06.19): ಭಾರತೀಯ ವಾಯುಪಡೆಯ ನಾಪತ್ತೆಯಾಗಿದ್ದ ಎಎನ್-32 ವಿಮಾನದ ಅವಶೇಷ 9 ದಿನಗಳ ಬಳಿಕ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ವಿಮಾನದಲ್ಲಿ 13 ಮಂದಿ ವಾಯುಪಡೆಯ ಸಿಬ್ಬಂದಿ ಇದ್ದು, ಅವರ ಕುರಿತು ಯಾವುದೇ ಮಾಹಿತಿ ದೊರಕಿಲ್ಲ ಎನ್ನಲಾಗಿದೆ. ಈ ಕುರಿತಾದಂತೆ ವಾಯುಸೇನೆಯು ಟ್ವೀಟ್ ಮಾಡಿದ್ದು, ವಿಮಾನದ ಅವಶೇಷವು ಅರುಣಾಚಲ ಪ್ರದೇಶದ ಉತ್ತರ ಲಿಪೋದಲ್ಲಿ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಶೋಧ ಕಾರ್ಯಾಚರಣೆ ವೇಳೆ ಐಎಎಫ್ ಎಮ್‌ಐ 17 ಹೆಲಿಕ್ಯಾಪ್ಟರ್‌ಗೆ 12,000 ಅಡಿ ಎತ್ತರದ ಪ್ರದೇಶದಿಂದ ಅವಶೇಷ ಗೋಚರಿಸಿದೆ ಎಂದು ಹೇಳಿದೆ. ವಿಮಾನದಲ್ಲಿದ್ದವರ ಸ್ಥಿತಿಯನ್ನು ತಿಳಿಯಲು ಮತ್ತು ಬದುಕಿ ಉಳಿದವರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯ ಆರಂಭಿಸಿದ ಬಳಿಕ ಹೆಚ್ಚಿನ ವಿವರಗಳನ್ನು ನೀಡುವುದಾಗಿ ವಾಯುಪಡೆ ತಿಳಿಸಿದೆ. ಅಸ್ಸಾಂನ ಜೋರ್ಹತ್‌ ವಾಯುನೆಲೆಯಿಂದ ಅರುಣಾಚಲ ಪ್ರದೇಶದ ಮೆಚುಕಾ ವಾಯುನೆಗೆ ಮಧ್ಯಾಹ್ನ ಪ್ರಯಾಣ ಬೆಳೆಸಿದ್ದ ವಿಮಾನ 35 ನಿಮಿಷಗಳ ಬಳಿಕ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು.

LEAVE A REPLY

Please enter your comment!
Please enter your name here