ನನ್ನನ್ನು ಕರೆದರೂ ನಾನು ಐಪಿಎಲ್ ಆಡುವುದಿಲ್ಲವೆಂದ ಅಫ್ರಿದಿ ಮೇಲೆ ಟ್ರೋಲ್ ಗಳ ಸುರಿಮಳೆ!

0
621

ನ್ಯೂಸ್ ಕನ್ನಡ ವರದಿ-(07.04.18): ಕಳೆದ ಕೆಲವು ದಿನಗಳಿಂದ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಶಾಹಿದ್ ಅಫ್ರಿದಿ ಸುದ್ದಿಯಾಗುತ್ತಿದ್ದಾರೆ. ಆದರೆ ಎಲ್ಲವೂ ಕೆಟ್ಟ ಕಾರಣಗಳಿಗಾಗಿ ಎನ್ನುವುದು ವಿಷಾದನೀಯವಾಗಿದೆ. ಶಾಹಿದ್ ಅಫ್ರಿದಿ ಮೊನ್ನೆ ತಾನೇ ಭಾರತೀಯ ಯೋಧರನ್ನು ಅವಹೇಳಿಸುವಂತಹ ಟ್ವೀಟ್ ಮಾಡಿದ್ದರು. ಕಾಶ್ಮೀರದಲಿ ಉಗ್ರರನ್ನು ಸೈನಿಕರು ಕೊಂದಿದ್ದಕ್ಕೆ, ಅಅಮಾಯಕ ಕಾಶ್ಮೀರಿಗಳನ್ನು ಭಾರತೀಯ ಯೋಧರು ಕೊಲ್ಲುತ್ತಿದ್ದಾರೆ. ವಿಶ್ವಸಂಸ್ಥೆಯು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಭಾರತೀಯ ಕ್ರಿಕೆಟಿಗರೂ ಸೇರಿದಂತೆ ಹಲವು ಮಂದಿ ಆಕ್ರೋಶಭರಿತರಾಗಿ ಪ್ರತಿಕ್ರಿಯೆ ನೀಡಿದ್ದರು.

ಇದರ ಬೆನ್ನಲ್ಲೇ ಶಾಹಿದ್ ಅಫ್ರಿದಿ ಇನ್ನೊಂದು ಟ್ವೀಟ್ ಮಾಡಿದ್ದು, ಒಂದು ವೇಳೆ ನನ್ನನ್ನು ಐಪಿಎಲ್ ಆಡಲು ಕರೆದರೂ ನಾನು ಹೊಗುವುದಿಲ್ಲ. ಸದ್ಯ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಿಎಸ್’ಎಲ್ ಕ್ರಿಕೆಟ್ ಟೂರ್ನಮೆಂಟ್ ನನಗೆ ಇಷ್ಟವಾಗಿದೆ. ನಾನು ಐಪಿಎಲ್ ನಲ್ಲಿ ಆಡುವ ಕುರಿತು ಯೋಚಿಸಿಯೇ ಇಲ್ಲ ಎಂದು ಹೇಲಿದ್ದರು. ಇದೀಗ ಈ ಹೇಳಿಕೆಗೆ ಸಾಮಾಜಿಕ ತಾಣಗಳಲ್ಲಿ ಟ್ರೋಲ್ ನ ಸುರಿಮಳೆಯಾಗಿದೆ. ಅದರಲ್ಲಿನ ಕೆಲವು ಸ್ಯಾಂಪಲ್ ಗಳು ಇಲ್ಲಿವೆ ನೋಡಿ.

LEAVE A REPLY

Please enter your comment!
Please enter your name here