SDPI ಮಂಚಿ ವಲಯ ಸಮಿತಿ : ನೂತನ ಅಧ್ಯಕ್ಷರಾಗಿ ನವಾಝ್ ಕೋಡಿಬೈಲ್ ಆಯ್ಕೆ

0
188

ನ್ಯೂಸ್ ಕನ್ನಡ ವರದಿ ಅಕ್ಟೋಬರ್ 06: ಎಸ್.ಡಿ.ಪಿ.ಐ ಮಂಚಿ ವಲಯ ಸಮಿತಿಯ ತ್ರೈಮಾಸಿಕ ಸಭೆಯು ದಿನಾಂಕ 6 ಅಕ್ಟೋಬರ್ 2019 ರಂದು ಮಂಚಿ ಕುಕ್ಕಾಜೆಯ ಎಸ್.ಡಿ.ಪಿ.ಐ ಕಛೇರಿಯಲ್ಲಿ ಜನಾಬ್:ಫೈಝಲ್ ಮಂಚಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಫೈಝಲ್ ಮಂಚಿ SDPI ಬಂಟ್ವಾಳ ಕ್ಷೇತ್ರ ಸಮಿತಿ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ತೆರವಾದ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಜನಾಬ್:ನವಾಝ್ ಕೊಡಿಬೈಲ್ ರವರನ್ನು ಪಕ್ಷದ ಆಂತರಿಕ ಚುನಾವಣೆಯಲ್ಲಿ ಆಯ್ಕೆಯಾದರು

ಗ್ರಾಮ ಪಂಚಾಯತ್ ಚುನಾವಣಾ ವಿಚಾರವಾಗಿ ಸಮಗ್ರ ಚರ್ಚೆ ನಡೆಸಿದರು

SDPI ದ.ಕ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಪ್ರಸಕ್ತ ಸನ್ನಿವೇಶದ ಬಗ್ಗೆ ವಿಚಾರ ಮಂಡಿಸಿದರು ಫೈಝಲ್ ಮಂಚಿ ಪ್ರಾಸ್ತಾವಿಕವಾಗಿ ಮಾತಾಡಿದರು,ಕಾರ್ಯದರ್ಶಿ ಜಬ್ಬಾರ್ ಮಂಚಿ ರವರು ತ್ರೈಮಾಸಿಕ ವರದಿ ಮಂಡಿಸಿದರು,D.N ಫಾರೂಕ್ ಮಂಚಿ ಸ್ವಾಗತಿಸಿದರು ಕಾರ್ಯಕ್ರಮದ ಕೊನೆಗೆ ನೂತನ ಅಧ್ಯಕ್ಷರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಧನ್ಯವಾದ ಅರ್ಪಿಸಿದರು

ಪ್ರಕಟಣೆ: ಎಸ್.ಡಿ.ಪಿ.ಐ ಮಂಚಿ ವಲಯ ಸಮಿತಿ.

LEAVE A REPLY

Please enter your comment!
Please enter your name here