ಉತ್ತರಪ್ರದೇಶ: ಎಸ್ಪಿ-ಬಿಎಸ್ಪಿ ಲೋಕಸಭಾ ಅಭ್ಯರ್ಥಿ ನಾಪತ್ತೆ!

0
100

ನ್ಯೂಸ್ ಕನ್ನಡ ವರದಿ(15.5.19): ರಾಷ್ಟ್ರಾದ್ಯಂತ ಲೋಕಸಭಾ ಚುನಾವಣೆಯು ನಡೆದಿದ್ದು, ಸದ್ಯ ಕೊನೆಯ ಹಂತದಲ್ಲಿದೆ. ಅಂತಿಮ ಹಂತದ ಪ್ರಚಾರ ಕೆಲವೆಡೆ ನಡೆಯುತ್ತಿದೆ. ಉತ್ತರಪ್ರದೇಶದಲ್ಲಂತೂ ಈ ಬಾರಿಯ ಲೋಕಸಭಾ ಚುನಾವಣೆಯು ಕುತೂಹಲದ ಕೇಂದ್ರ ಬಿಂದಾಗಿದೆ. ಇದೀಗ ಹೊಸದೊಂದು ಸುದ್ದಿ ಕೇಳಿ ಬಂದಿದ್ದು, ಸಮಾಜವಾದಿ ಹಾಗೂ ಬಹುಜನ ಸಮಾಜ ಪಕ್ಷದ ಮೈತ್ರಿ ಅಭ್ಯರ್ಥಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಘೋಸಿ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಅತುಲ್‌ ರಾಯ್‌ ಕಳೆದ 15 ದಿನಗಳಿಂದ ಪ್ರಚಾರಕ್ಕೆ ಬಾರದೇ ನಾಪತ್ತೆಯಾಗಿದ್ದಾರೆ. ಮೇ 1 ರಂದು ವಿದ್ಯಾರ್ಥಿನಿಯೊಬ್ಬರು ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ರಾಯ್‌ ವಿರುದ್ಧ ದೂರು ದಾಖಲಿಸಿದ ಬಳಿಕ ತಲೆ ಮರೆಸಿಕೊಂಡಿದ್ದಾರೆ. ಬಂಧನ ಭೀತಿಯಿಂದ ರಾಯ್‌ ತಲೆ ಮರೆಸಿಕೊಂಡಿದ್ದಾರೆ.ಆದರೆ ಪಕ್ಷದ ಕಾರ್ಯಕರ್ತರು ಮಾತ್ರ ರಾಯ್‌ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ. ರಾಯ್‌ ವಿರುದ್ಧ ಪಿತೂರಿ ಮಾಡಲಾಗಿದೆ ಎಂದು ಬಿಎಸ್‌ಪಿ ಹೇಳಿದೆ. ಕಾರ್ಯಕರ್ತರಿಗೆ ರಾಯ್‌ ಪರ ಮತಯಾಚನೆ ಮುಂದುವರಿಸಲು ಮಾಯಾವತಿ ಮತ್ತು ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ ಅವರು ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here