ಪದಗ್ರಣಕ್ಕೆ ಮುಹೂರ್ತ ಫಿಕ್ಸ್: ಪ್ರೇಮಿಗಳ ದಿನದಂದೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಕೇಜ್ರಿವಾಲ್.!

0
19

ನ್ಯೂಸ್ ಕನ್ನಡ ವರದಿ: ದೆಹಲಿ ವಿಧಾನಸಭಾ ಚುನಾವಣೆಗೆ ನಡೆದಂತ ಮತಏಣಿಕೆಯಲ್ಲಿ, ಎಎಪಿ ಭರ್ಜರಿ ಗೆಲುವಿನತ್ತ ಸಾಗುತ್ತಿದೆ. ಬಿಜೆಪಿ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದರೇ, ಕಾಂಗ್ರೆಸ್ ಮಾತ್ರ ಹೇಳ ಹೆಸರಿಲ್ಲದಂತೆ ಆಗಿದೆ. ಹೀಗಾಗಿ ಎಎಪಿಗೆ ಭರ್ಜರಿ ಗೆಲುವಿನೊಂದಿಗೆ ಮತ್ತೆ ಸಿಎಂ ಆಗಿ ಅರವಿಂದ್ ಕೇಜ್ರಿವಾಲ್ ದೆಹಲಿ ಗದ್ದುಗೆ ಏರಲು ಮುಹೂರ್ತ ಫಿಕ್ಸ್ ಆಗಿದೆ. ಫೆಬ್ರವರಿ 14ರಂದು ಮತ್ತೆ ದೆಹಲಿಯ ಸಿಎಂ ಆಗಿ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ದೆಹಲಿ ವಿಧಾನಸಭೆಗೆ ನಡೆದಂತ ಚುನಾವಣೆಯ ಮತಎಣಿಕೆ ಕಾರ್ಯ ಭರದಿಂದ ಸಾಗಿದೆ. ಇದುವರೆಗೆ ಸಿಕ್ಕಂತ ಮಾಹಿತಿಯ ಪ್ರಕಾರ ಎಎಪಿ 62, ಬಿಜೆಪಿ 08 ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಆದ್ರೇ ಕಾಂಗ್ರೆಸ್ ಒಂದೇ ಒಂದು ಸ್ಥಾನದಲ್ಲೂ ಬಾರದೇ… ಮುಖಭಂಗವನ್ನು ಅನುಭವಿಸಿದೆ.

ದೆಹಲಿ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಸೋಲಿನ ಹೊಣೆ ಹೊತ್ತು, ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದಂತೆ ಡಿಪಿಸಿಸಿ ಅಧ್ಯಕ್ಷ ಸುಭಾಷ್ ಚೋಪ್ರಾ ರಾಜೀನಾಮೆ ನೀಡಿದ್ದಾರೆ.

ಒಟ್ಟಾರೆಯಾಗಿ ಇತ್ತೀಚಿನ ವರೆಗೆ ಸಿಕ್ಕಂತ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದಂತೆ 70 ವಿಧಾನಸಭಾ ಸ್ಥಾನಗಳಲ್ಲಿ ಆಡಳಿತಾರೂಢ ಅಮ್ ಆದ್ಮಿ ಪಕ್ಷ 62 ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಬಿಜೆಪಿ 08 ಸ್ಥಾನಗಳಲ್ಲಿ ಮುಂದಿದೆ. ಆದ್ರೇ ಕಾಂಗ್ರೆಸ್ ಹೇಳಲು ಹೆಸರಿಲ್ಲದಂತೆ ಧೂಳಿಪಟವಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ದೆಹಲಿಯಲ್ಲಿ ಗೆದ್ದು ಭೀಗಿರುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೆ ಸಿಎಂ ಆಗಿ ದೆಹಲಿ ಗದ್ದುಗೆ ಏರಲಿದ್ದಾರೆ. ಫೆಬ್ರವರಿ 14ರಂದು ಮತ್ತೆ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here