ಪರಮೇಶ್ವರ್ ಪಿಎ ಆತ್ಮಹತ್ಯೆ’ಗೆ ಐಟಿ ಅಧಿಕಾರಿಗಳೇ ಹೊಣೆ: ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ

0
319

ನ್ಯೂಸ್ ಕನ್ನಡ ವರದಿ: ಎರಡು ದಿನಗಳ ಕಾಲ ಪರಮೇಶ್ವರ್ ನಿವಾಸ, ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಆಧಿಕಾರಿಗಳ ದಾಳಿಯ ವೇಳೆ ವಿಚಾರಣೆ ನೆಪದಲ್ಲಿ ಪರಮೇಶ್ವರ್ ಪಿಎ ರಮೇಶ್ ಗೆ ಐಟಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ. ಇದೇ ಕಾರಣದಿಂದಾಗಿ ಬೇಸತ್ತು ಆತ್ಮಹತ್ಯೆಗೆ ರಮೇಶ್ ಶರಣಾಗಿದ್ದಾರೆ. ಇದಕ್ಕೆ ಐಟಿ ಅಧಿಕಾರಿಗಳೇ ಹೊಣೆಗಾರರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ವಿಧಾನಸೌಧದ ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಮೂರು ದಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ವಿಚಾರಣೆ ಮಾಡುವಾಗ ಕಿರುಕುಳ ಕೊಟ್ರು. ಇಂತಹ ಕಿರುಕುಳ ತಡೆದುಕೊಳ್ಳಲಾರದೇ ನಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪರಮೇಶ್ವರ್ ಪಿಎಂ ಆತ್ಮಹತ್ಯೆಗೂ ಮುನ್ನಾ ವಿಚಾರ ತಿಳಿದು ಬಂದಿದೆ. ಇದು ನಿಜವೇ ಆಗಿದ್ದರೇ, ಅವರ ಸಾವಿಗೆ ಐಟಿ ಅಧಿಕಾರಿಗಳೇ ಹೊಣೆ ಎಂದು ಐಟಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

LEAVE A REPLY

Please enter your comment!
Please enter your name here