ಯಾರಾದರೂ ಒಬ್ಬನ ಪೌರತ್ವ ರದ್ದಾದರೆ ನಾನೂ ಹೋರಾಟ ಮಾಡುತ್ತೇನೆ: ಬಾಬಾ ರಾಮ್ ದೇವ್

0
145

ನ್ಯೂಸ್ ಕನ್ನಡ ವರದಿ: (29.01.2020): ವಿವಾದಿತ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತಾದಂತೆ ಹಲವಾರು ಗಣ್ಯ ವ್ಯಕ್ತಿಗಳು ಹೇಳಿಕೆ ನೀಡುತ್ತಿದ್ದಾರೆ. ಕೆಲವರು ಈ ಕಾಯ್ದೆಯ ಪರ ವಹಿಸಿ ಮಾತನಾಡಿದರೆ, ಇನ್ನು ಕೆಲವರು ಕಾಯ್ದೆಯನ್ನು ವಿರೋಧಿಸಿ ಮಾತನಾಡುತ್ತಿದ್ದಾರೆ. ಇದೀಗ ಈ ಕಾಯ್ದೆಯ ಕುರಿತು ಮಾತನಾಡಿದ ಪತಂಜಲಿ ಸಂಸ್ಥೆಯ ಮುಖ್ಯಸ್ಥ ಹಾಗೂ ಯೋಗ ಗುರು ಬಾಬಾ ರಾಮ್ ದೇವ್, ಈ ಕಾಯ್ದೆಯಿಂದಾಗಿ ಯಾರದ್ದಾದರೂ ಒಬ್ಬನ ಪೌರತ್ವ ರದ್ದಾದರೂ ನಾನು ಹೋರಾಟ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಸಿಎಎ, ಎನ್ನಾರ್ಸಿ ಕುರಿತಾದಂತೆ ಮುಸ್ಲಿಮರಲ್ಲಿ ತಪ್ಪು ಕಲ್ಪನೆಯನ್ನು ಉಂಟು ಮಾಡಲಾಗುತ್ತಿದೆ. ದೇಶದಲ್ಲಿರುವ ಯಾವೊಬ್ಬನ ಪೌರತ್ವವೂ ರದ್ದಾಗುವುದಿಲ್ಲ. ಭಾರತದಲ್ಲಿ ಹಿಂದೂಗಳಿಗೆಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಮುಸ್ಲಿಮರಿಗೂ ಇದೆ. ದೇಶದ ಆರ್ಥಿಕ ಪ್ರಗತಿಗೆ ಹಿಂದೂ ಮುಸ್ಲಿಮರೆಲ್ಲಾ ಒಟ್ಟಾಗಿ ಮುನ್ನುಗ್ಗಬೇಕಾಗಿದೆ. ಶೇಖಡಾ 99ರಷ್ಟು ಮುಸ್ಲಿಮರು ದೇಶಭಕ್ತರಾಗಿದ್ದಾರೆ. ಉಳಿದ 1% ಮಂದಿ ಕೆಟ್ಟ ಹೆಸರು ತರುತ್ತಿದ್ದಾರೆ. ಪ್ರಧಾನಿ ಮೋದಿ ಮುಸ್ಲಿಮ್ ವಿರೋಧಿ ಭಾವನೆಯನ್ನು ಹೊಂದಿಲ್ಲ. ಎಲ್ಲರೂ ಜೊತೆಯಾಗಿ ಮುನ್ನಡೆಯಬೇಕು ಎಂದು ರಾಮ್ ದೇವ್ ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here