ಮಲೆನಾಡು ಗಲ್ಫ್ ಅಸೋಸಿಯೇಶನ್ (MGA) ಇದರ ನೂತನ ಅಧ್ಯಕ್ಷರಾಗಿ ಮುಸ್ತಾಕ್ ಗಬ್ಗಲ್ ಆಯ್ಕೆ

0
144

ನ್ಯೂಸ್ ಕನ್ನಡ ವರದಿ ಜಿದ್ದಾ, ಅ.18: ಮಲೆನಾಡು ಗಲ್ಫ್ ಅಸೋಸಿಯೇಶನ್ (ಎಂ.ಜಿ.ಏ) ಇದರ ವಾರ್ಷಿಕ ಮಹಾಸಭೆ 18 ಅಕ್ಟೋಬರ್ 2019 ರಂದು ಜಿದ್ದಾದ, ಶರಫಿಯಾದ ಸ್ನ್ಯಾಕ್ ರೆಸ್ಟೋರಂಟ್ ನ ಸಭಾಂಗಣದಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಬಶೀರ್ ಬಾಳುಪೇಟೆ, ಎಮ್.ಜಿ.ಏ ಕಾರ್ಯ ಚಟುವಟಿಕೆ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಕೇಂದ್ರ ಸಮಿತಿ ಯಿಂದ ಬಶೀರ್ ಬಾಳುಪೇಟೆ, ಶರೀಪ್, ಅಶ್ರಪ್ ಉಪ್ಪಳ್ಳಿ, ಹನೀಪ್ ಬಿಳಗುಳ, ಸಿರಾಜ್ ಚಕ್ಕಮಕ್ಕಿ, ಆಗಮಿಸಿದ್ದರು. ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಮುಸ್ತಾಕ್ ಗಬ್ಗಲ್ ರವರನ್ನು ಸಮಿತಿಯ ಅಧ್ಯಕ್ಷ ರನ್ನಾಗಿ ಅಯ್ಕೆ ಮಾಡಲಾಯಿತು. ಗೌರವಾದ್ಯಕ್ಷರಾಗಿ ಇಸ್ಮಾಯಿಲ್ ಹೈದ್ರೋಸ್ ಮೂಡಿಗೆರೆ, ಉಪಾಧ್ಯಕ್ಷ ರಾಗಿ ಜಲಾಲ್ ಬೇಗ್ ಸಕಲೇಶಪುರ ಮತ್ತು ಸಿದ್ದೀಕ್ ಬಾಳೆಹೊನ್ನೂರು, ಕಾರ್ಯದರ್ಶಿ ಗಳಾಗಿ ಇಕ್ಬಾಲ್ ಗಬ್ಗಲ್, ಸಹ ಕಾರ್ಯದರ್ಶಿಯಾಗಿ ಜಾಕಿರ್ ಸಕಲೇಶಪುರ, ಮೀಡಿಯಾ ಕಮ್ಯುನಿಕೇಶನ್ ಉಸ್ತುವಾರಿಯಾಗಿ ಹಾರಿಸ್ ಬಿಳಗುಳ, ಕೋಶಾಧಿಕಾರಿಯಾಗಿ
ಮುಸ್ತಾಕ್ ಬಿಳಗುಳ ಆಯ್ಕೆಯಾದರು.

ಸಮಿತಿ ಸದಸ್ಯರಾಗಿ ರಿಯಾಜ್ ಗಬ್ಗಲ್, ರಪೀಕ್ ಮದೀನ, ಹನೀಪ್ ಮದೀನ, ಹಾರುನ್ ಅಲ್ ಕುರುಮ, ರಿಯಾಜ್ ಅಲ್ ಕುರುಮ, ಸಿರಾಜ್ ಯಾಂಬು, ಹೈದರ್ ಯಂಬು, ಹಾರಿಸ್ ಉಪ್ಪಳ್ಳಿ, ನೂರ್ ತೀರ್ಥಹಳ್ಳಿ, ನಾಸಿರ್ ಶೇಕ್ ಸಾಗರ, ಇಸ್ಮಾಯಿಲ್ ಹಾನಬಳ್, ಶಫೀಕ್ ಸಾಗರ, ಸಯ್ಯದ್ ನಾಸಿರ್ ಹಾಸನ, ಕಾದರ್ ಆಲ್ದೂರು, ರಿಯಾಜ್ ತಾಯಿಪ್, ಮಹಬೂಬ್ ಆಲಿ ಶಿವಮೊಗ್ಗ ರನ್ನು ಆಯ್ಕೆ ಮಾಡಲಾಯಿತು. ಸಿದ್ದೀಕ್ ಬಾಳೆಹೊನ್ನೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here