ಭಯೋತ್ಪಾದಕ ಆದಿತ್ಯ ರಾವ್ ಕುರಿತಾದಂತೆ ಕನ್ನಡ ಸಿನಿಮಾ: ಹೆಸರೇನು ಗೊತ್ತೇ?

0
25

ನ್ಯೂಸ್ ಕನ್ನಡ ವರದಿ: (25.01.2020): ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲವು ದಿನಗಳ ಹಿಂದೆ ಸ್ಫೋಟಕವನ್ನು ತಂದಿಟ್ಟಿದ್ದ ಆದಿತ್ಯ ರಾವ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಇದಾದ ಬಳಿಕ ಆತನನ್ನು ಮಾನಸಿಕ ಅಸ್ವಸ್ಥ ಎಂದು ಮಾಧ್ಯಮಗಳು ಮತ್ತು ಸರಕಾರ ಬ್ರಾಂಡ್ ಮಾಡಲು ಪ್ರಯತ್ನಿಸಿತ್ತು. ಸದ್ಯ ಭಯೋತ್ಪಾದನೆಯ ಆರೋಪದೊಂದಿಗೆ ಪೊಲೀಸರು ಆದಿತ್ಯ ರಾವ್ ಅನ್ನು ಬಂಧನಕ್ಕೊಳಪಡಿಸಿದ್ದಾರೆ. ಇದೀಗ ಈತನ ಕುರಿತಾದಂತೆ ನಿರ್ಮಾಪಕರೋರ್ವರು ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ನಿರ್ಮಾಪಕ ತುಳಸಿರಾಮ್ ಎಂಬವರು ಆದಿತ್ಯ ರಾವ್ ಕುರಿತಾದಂತೆ ಮಾಧ್ಯಮದಲ್ಲಿ ವರದಿಯಾಗುತ್ತಿರುವ ವಿಚಾರಗಳನ್ನು ಮುಂದಿಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಲು ಯೋಜನೆ ರೂಪಿಸುತ್ತಿದ್ದಾರೆ. ಇದಕ್ಕಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆಸರನ್ನೂ ನೋಂದಾಯಿಸಿದ್ದಾರೆ. ಫಸ್ಟ್ ರ್ಯಾಂಕ್ ಟೆರರಿಸ್ಟ್ ಆದಿತ್ಯ ಎಂಬ ಹೆಸರಿನಲ್ಲಿ ಸಿನಿಮಾ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಭಯೋತ್ಪಾದಕನ ಹೆಸರಿನಲ್ಲಿ ಹಾಗೂ ಈ ರೀತಿಯ ಟೈಟಲ್ ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here