ಬಿಜೆಪಿ ಪಕ್ಷ ಸೇರಿದ ಸೈನಾ ನೆಹ್ವಾಲ್ ಕುರಿತು ವ್ಯಂಗ್ಯವಾಡಿದ ಜ್ವಾಲಾ ಗುಟ್ಟಾ!: ಹೇಳಿದ್ದೇನು?

0
111

ನ್ಯೂಸ್ ಕನ್ನಡ ವರದಿ: (29.01.2020): ಬ್ಯಾಡ್ಮಿಂಟನ್ ನಲ್ಲಿ ಅತ್ಯುತ್ತಮ ಸಾಧನೆಗೈದು, ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ್ದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ನಿನ್ನೆ ಬಿಜೆಪಿ ಪಕ್ಷದ ಹಿರಿಯರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಸೈನಾ ಜೊತೆಗೆ ಅವರ ಸಹೋದರಿ ಚಂದ್ರಾಂಶು ಕೂಡಾ ಬಿಜೆಪಿ ಪಕ್ಷ ಸೇರಿದ್ದರು. ಇದೀಗ ಈ ಕುರಿತು ಬ್ಯಾಡ್ಮಿಂಟನ್ ನ ಮತ್ತೋರ್ವ ಖ್ಯಾತ ಆಟಗಾರ್ತಿ ಜ್ವಾಲಾ ಗುಟ್ಟಾ ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ.

ಟ್ವಿಟ್ಟರ್ ನ ತಮ್ಮ ಖಾತೆಯಲ್ಲಿ, :ಇದೇ ಮೊದಲ ಬಾರಿಗೆ ನಾನು ಕೇಳುತ್ತಿದ್ದೇನೆ, ಕಾರಣವಿಲ್ಲದೇ ಆಟವನ್ನು ಪ್ರಾರಂಭಿಸಿದರು. ಇದೀಗ ಕಾರಣವಿಲ್ಲದೇ ಪಕ್ಷವೊಂದನ್ನು ಸೇರಿಕೊಂಡಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.ಈ ಕಮೆಂಟ್ ನ ಕುರಿತಾದಂತೆ ಬಿಜೆಪಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿದ್ದಾರೆ.

LEAVE A REPLY

Please enter your comment!
Please enter your name here