ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್!

0
28

ನ್ಯೂಸ್ ಕನ್ನಡ ವರದಿ: (29.01.2020): ಬ್ಯಾಡ್ಮಿಂಟನ್ ಅಂಗಳದಲ್ಲಿ ಮಿಂಚಿನ ಸಂಚಾರ ಹುಟ್ಟಿಸಿ ಹಲವಾರು ಪದಕಗಳನ್ನು ಮತ್ತು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿ, ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಸೈನಾ ನೆಹ್ವಾಲ್ ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡಿದ್ದಾರೆ. ಇಂದು ಬಿಜೆಪಿ ಪಕ್ಷದ ನಾಯಕರ ಸಮ್ಮುಖದಲ್ಲಿ ಸೈನಾ ನೆಹ್ವಾಲ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ದೆಹಲಿ ಬಿಜೆಪಿ ಪಕ್ಷದ ಮುಖಂಡ ಅರುಣ್ ಸಿಂಗ್ ರವರ ಸಮ್ಮುಖದಲಲಿ ಸೈನಾ ನೆಹ್ವಾಲ್ ಹಾಗೂ ಅವರ ಸಹೋದರಿ ಚಂದ್ರಾಂಶು ಕೂಡಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಬಳಿಕ ಬಿಜೆಪಿ ಮುಖ್ಯಸ್ಥರಾದ ಜೆ.ಪಿ ನಡ್ಡಾರನ್ನು ಭೇಟಿಯಾಗಿ ಅಭಿನಂದಿಸಿದರು. ಬಳಿಕ ಮಾತನಾಡಿದ ಸೈನಾ, “ರಾತ್ರಿ ಹಗಲೆನ್ನದೇ ದೇಶದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಪ್ರಧಾನ ಮಂತ್ರಿಯನ್ನು ನಾನು ಇಷ್ಟಪಡುತ್ತಿದ್ದೇನೆ. ಈ ಪಕ್ಷಕ್ಕೆ ಸೇರಿದ್ದರಲ್ಲಿ ನನಗೆ ಸಂತೋಷವಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಸೈನಾ ಬಿಜೆಪಿ ಸೇರಿದ್ದು ಸದ್ಯ ಕ್ರೀಡಾ ವಲಯದಲ್ಲಿ ಸುದ್ದಿಯಾಗಿದೆ.

LEAVE A REPLY

Please enter your comment!
Please enter your name here