ಪಿಎಫ್’ಐ, ಎಸ್ಡಿಪಿಐ ನಿಷೇಧ ಮಾಡುವ ಕುರಿತು ಇನ್ನೂ ಚಿಂತಿಸಿಲ್ಲ: ಯಡಿಯೂರಪ್ಪ

0
44

ನ್ಯೂಸ್ ಕನ್ನಡ ವರದಿ: (29.01.2020): ಹಲವಾರು ಬಾರಿ ವೃಥಾ ಆರೋಪಗಳನ್ನು ಹೊತ್ತುಕೊಂಡು ನಿಷೇಧದ ತೂಗುಗತ್ತಿಯ ಅಂಚಿನಲ್ಲೇ ಇರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜಕೀಯ ಪಕ್ಷಗಳನ್ನು ಈಗಲೂ ನಿಷೇಧ ಮಾಡಬೇಕು ಎಂದು ಕೆಲವು ಮೂಲೆಳಿಂದ ಧ್ವನಿ ಕೇಳಿ ಬರುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಪಿಎಫ್ ಐ ಹಾಗೂ ಎಸ್ಡಿಪಿಐಯನ್ನು ನಿಷೇಧ ಮಾಡುವ ಕುರಿತು ನಾವು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಹೇಳಿದರು.

ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಬಳಿಕ ಮಹದಾಯಿ ವಿಚಾರದ ಕುರಿತಾದಂತೆ ಮಾತನಾಡಿದ ಅವರು, ಮಹದಾಯಿ‌ ನದಿ ನೀರು ಹಂಚಿಕೆ, ಗಡಿ ವ್ಯಾಜ್ಯ ಸೇರಿದಂತೆ ಅಂತರರಾಜ್ಯ ವಿವಾದಗಳ ಬಗ್ಗೆ ಸಂಬಂಧಿಸಿದ ‌ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ದೆಹಲಿಯಲ್ಲಿ ಚರ್ಚಿಸುತ್ತೇನೆ. ಮಹಾರಾಷ್ಟ್ರ ಸರ್ಕಾರದೊಂದಿಗೆ ನೀರು ವಿನಿಮಯ ಕುರಿತು ಸಮಾಲೋಚನೆ ನಡೆಸುತ್ತೇನೆ’ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here