ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞ ಅಭಿಜಿತ್ ಎಡಪಂಥೀಯ, ಅವರ ವಿಚಾರ ಒಪ್ಪುವುದಿಲ್ಲ: ಪಿಯುಶ್ ಗೋಯಲ್

0
112

ನ್ಯೂಸ್ ಕನ್ನಡ ವರದಿ: ಇತ್ತಿಚಿಗೆ ಆರ್ಥಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರ ಪಡೆದಿರುವ ಅಭಿಜಿತ್ ಬ್ಯಾನರ್ಜೀ ಎಡಪಂಥೀಯ ವಿಚಾರದಾರೆಯನ್ನು ಹೊಂದಿದ್ದಾರೆ ಅವುಗಳನ್ನು ತಾನು ಒಪ್ಪುವುದಿಲ್ಲ ಎಂದು ಕೇಂದ್ರ ಸಚಿವ ಪಿಯುಶ್ ಗೋಯಲ್ ಹೇಳಿದ್ದಾರೆ.

ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿ ಶುಕ್ರವಾರದಂದು ಪಿಯುಶ್ ಗೋಯೆಲ್ ಪುಣೆಗೆ ಭೇಟಿ ನೀಡಿ ವ್ಯಾಪಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜೀ ಅವರ ಭಾರತದ ಆರ್ಥಿಕ ಪ್ರಗತಿ ಕುರಿತ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ ‘ಬ್ಯಾನರ್ಜಿ ಅವರು ಸಂಪೂರ್ಣವಾಗಿ ಎಡಪಂಥೀಯ ವಿಚಾರದಾರೆಯನ್ನು ಹೊಂದಿದ್ದಾರೆ, 2019 ರ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ತಿರಸ್ಕರಿಸಿದ ಕಾಂಗ್ರೆಸ್ ನ ನ್ಯಾಯ ಯೋಜನೆಯ ಪ್ರಸ್ತಾಪವನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.

LEAVE A REPLY

Please enter your comment!
Please enter your name here