ನೆರೆ ಸಂತ್ರಸ್ತರಿಗಾಗಿ ಸದನದಲ್ಲಿ ವಿಶೇಷ ಮನವಿ ಮಾಡಿದ ಸಿದ್ದು: ಒಕೆ ಎಂದ ಸಿಎಂ ಯಡಿಯೂರಪ್ಪ!

0
125

ನ್ಯೂಸ್ ಕನ್ನಡ ವರದಿ: ನೆರೆ ಪ್ರದೇಶಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ಅರಣ್ಯ ಇಲಾಖೆಯ ಖಾಲಿ ಜಮೀನಿನಲ್ಲಿ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌ಗಳು, ಮನೆಗಳ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಶುಕ್ರವಾರ ನೆರೆ ಸಂಕಷ್ಟಮತ್ತು ಪರಿಹಾರ ವಿಷಯ ಕುರಿತು ನಿಲುವಳಿ ಸೂಚನೆ ಮೇಲೆ ತಮ್ಮ ಚರ್ಚೆ ಮುಂದುವರೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನೆರೆ ಪ್ರದೇಶಗಳಲ್ಲಿ ನದಿ, ಹೊಳೆ ದಂಡೆಗಳಲ್ಲಿನ ಕೆಲವು ಊರುಗಳು ಅರಣ್ಯ ಪ್ರದೇಶದಲ್ಲಿವೆ. ಮೂರ್ನಾಲ್ಕು ಕಿ.ಮೀ. ಹೋದರೂ ಕಂದಾಯ ಭೂಮಿ ಸಿಗುವುದಿಲ್ಲ. ಅಂತಹ ಕಡೆ ಅರಣ್ಯ ಭೂಮಿ, ಡೀಮ್ಡ್ ಅರಣ್ಯ ಭೂಮಿಯಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ.

ಡೀಮ್ಡ್ ಅರಣ್ಯ ಭೂಮಿ ಕಂದಾಯ ಇಲಾಖೆಗೆ ಸೇರಿದ್ದು ಅದನ್ನು ಮರೆತು ತಾವು ಸರ್ಕಾರದಡಿ ಬರುವುದಿಲ್ಲ ಎನ್ನುವಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಅವರು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಈ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here