ದೇಶದ ಆರ್ಥಿಕ ಸುಧಾರಣೆಗೆ ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಯಿಂದ ಸಲಹೆ..!

0
99

ನ್ಯೂಸ್ ಕನ್ನಡ ವರದಿ: ದೇಶದ ಆರ್ಥಿಕತೆಯಲ್ಲಿ ಸುಧಾರಣೆ ಕಂಡುಕೊಳ್ಳಲು ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆಯೊಂದನ್ನು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಗ್ರಾಮೀಣ ಭಾರತವು ಸಂಕಷ್ಟದಲ್ಲಿದೆ ಹಾಗೂ ಆರ್ಥಿಕತೆ ಹಳಿತಪ್ಪಿದೆ. ಕೇಂದ್ರ ಸರ್ಕಾರದ ಸುಳಿವು ಸಿಗುತ್ತಿಲ್ಲ. ಹೀಗಾದರೆ ಏನು ಮಾಡಬೇಕು? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಅಲ್ಲದೇ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಅವಶ್ಯವಾಗಿ ಬೇಕಾದ ಯೋಜನೆಗಳು, ಪರಿಹಾರಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿವೆ. ಅದನ್ನು ಪ್ರಧಾನಿ ಮೋದಿ ಹಾಗೂ ನಿರ್ಮಲಾ ಸೀತಾರಾಮ್ ಕದ್ದೊಯ್ದು ಓದಬೇಕು ಎಂದು ಲೇವಡಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here